ನಾಳೆ ತುಮಕೂರಿನಲ್ಲಿ ಸರ್ಕಾರದ ಸಮರ್ಪಣಾ ಸಮಾವೇಶ; ಸಿಎಂ ಸಿದ್ದರಾಮಯ್ಯ ಭಾಗಿ

ನಾಳೆ ತುಮಕೂರಿನಲ್ಲಿ ಸರ್ಕಾರದ ಸಮರ್ಪಣಾ ಸಮಾವೇಶ; ಸಿಎಂ ಸಿದ್ದರಾಮಯ್ಯ ಭಾಗಿ Tumkur news ತುಮಕೂರು: ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ರಾಜ್ಯದ ಜನತೆಗೆ ಅರ್ಪಿಸಲಾಗಿದೆ. ಈ ಸುಸಂದರ್ಭದಲ್ಲಿ ಉತ್ತರದಾಯಿತ್ವವಾಗಿ ತುಮಕೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಆಗಿರುವ ಅಭೂತಪೂರ್ವ ಅಭಿವೃದ್ಧಿ ಕಾರ್ಯಕ್ರಮವನ್ನು ಸಮಾವೇಶದ ಮೂಲಕ ಫಲಾನುಭವಿಗಳಿಗೆ ಹಕ್ಕುಪತ್ರ ಸವಲತ್ತುಗಳನ್ನು ನೀಡುವ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈ ಸಾಧನೆಯಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಈ ಸಾಧನೆಗಾಗಿ ಗಿನ್ನಿಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ದಾಖಲೆ […]

Continue Reading

ತುಮಕೂರು: ಅಪ್ರಾಪ್ತ ಮಗಳನ್ನು ಕೊಂದು ತಲೆ ಮರೆಸಿಕೊಂಡಿದ್ದ ತಂದೆಯ ಬಂಧನ

ಅಪ್ರಾಪ್ತ ಮಗಳನ್ನು ಕೊಂದು ತಲೆ ಮರೆಸಿಕೊಂಡಿದ್ದ ತಂದೆಯ ಬಂಧನ ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದ ತಾಯಿಗೆ ಅಘಾತ ಕಾದಿತ್ತು. ತನ್ನ ಪತಿಯೇ ಮಗಳನ್ನು ಕೊಲೆ ಮಾಡಿ ಹೂತು ಹಾಕಿದ್ದಾನೆ ಎಂದು ಗೊತ್ತಾದಾಗ‌ ತಾಯಿಗೆ ಆಘಾತವಾಗಿದೆ. ಒಂದು ಸಣ್ಣ ಪ್ರೇಮ ಪ್ರಕರಣ ಮಗಳ ಜೀವವನ್ನೇ ಕಸಿದಿದೆ. Tumkur news ತುಮಕೂರು: ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿರಾ ತಾಲ್ಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ತಿಮ್ಮರಾಯಪ್ಪ […]

Continue Reading

ತುಮಕೂರು: ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಸ್ವಾಗತಾರ್ಹ; ಇಕ್ಬಾಲ್ ಅಹಮದ್

ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಸ್ವಾಗತಾರ್ಹ; ಇಕ್ಬಾಲ್ ಅಹಮದ್ 2022ರಲ್ಲಿ ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ, ವಿದ್ಯಾರ್ಥಿಗಳಲ್ಲಿ ಹಿಂದೂ, ಮುಸ್ಲಿಂ ಎಂಬ ದ್ವೇಷ ಹರಿಡಿದ್ದು ಬಿಜೆಪಿ ಸರಕಾರ. ಆಗಿದ್ದ ತಪ್ಪನ್ನು ಸರಕಾರ ಸರಿಪಡಿಸಿದೆ. – ಇಕ್ಬಾಲ್ ಅಹಮದ್, ತುಮಕೂರು Tumkur news ತುಮಕೂರು: ಸರಕಾರ ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಸಂಕೇತಗಳನ್ನು ಧರಿಸಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಹೇಳಿದರು. ನಗರದಲ್ಲಿ ಶನಿವಾರ […]

Continue Reading

ತುಮಕೂರು: ನೀಟ್(NEET) ರದ್ದು ಮಾಡುವಂತೆ; ಕಾಂಗ್ರೆಸ್ ಆಗ್ರಹ

ನೀಟ್(NEET) ರದ್ದು ಮಾಡುವಂತೆ; ಕಾಂಗ್ರೆಸ್ ಆಗ್ರಹ ‘ನೀಟ್ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜೇಬುಗಳಿಲ್ಲದ ಬಟ್ಟೆ ಧರಿಸಿ,ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಲ್ಲದೆ, ಕುಡಿಯುವ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗದೆ ಕಷ್ಟಪಟ್ಟು ಪರೀಕ್ಷೆ ಬರೆದಿದ್ದಾರೆ. ಇಂತಹ ಸಂದರ್ಭದಲ್ಲಿ ಮರು ಪರೀಕ್ಷೆ ಎಂದರೆ ವಿದ್ಯಾರ್ಥಿಗಳ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಮೊದಲು ಆಲೋಚಿಸಬೇಕು. ಸರಕಾರ ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ವಹಿಸಿ, ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು’. – ಇಕ್ಬಾಲ್ ಅಹಮದ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ, ತುಮಕೂರು […]

Continue Reading

ತುಮಕೂರು: ವೈದ್ಯ ಲೋಕವೇ ಅಚ್ಚರಿ ಪಡುವಂತ ಸಾಧನೆ ಮಾಡಿದ ತುಮಕೂರು ಜಿಲ್ಲಾಸ್ಪತ್ರೆ!

ಎಂಟು ತಿಂಗಳಲ್ಲಿ 60ಕ್ಕೂ ಹೆಚ್ಚು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸಿದ ತುಮಕೂರು ಜಿಲ್ಲಾಸ್ಪತ್ರೆ! ಇಡೀ ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳ ಸಹಯೋಗವಿಲ್ಲದೆ ಈ ರೀತಿಯ ಶಸ್ತ್ರಚಿಕಿತ್ಸೆ ನಡೆಸಿ, ಯಶಸ್ವಿಯಾಗಿರುವ ಏಕೈಕ ಆಸ್ಪತ್ರೆ Tumkur news ತುಮಕೂರು: ಜಿಲ್ಲಾಸ್ಪತ್ರೆಯ ನರರೋಗ ವಿಭಾಗದ ನುರಿತ ಶಸ್ತ್ರಚಿಕಿತ್ಸಾ ತಂಡ ಕಳೆದ 8 ತಿಂಗಳಲ್ಲಿ 60ಕ್ಕೂ ಹೆಚ್ಚು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, […]

Continue Reading

ತುಮಕೂರು: ಮೋದಿ ಕರೆಗೆ ಸಹಮತ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಟಿ.ಬಿ ಜಯಚಂದ್ರ

ಪ್ರಧಾನಿ ಮೋದಿ ಮಿತವ್ಯಯ ಕರೆಗೆ ಸಹಮತ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ! ಮಿತವ್ಯಯಕ್ಕೆ ಸಹಮತ ಎಂದ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ. ಬಿ ಜಯಚಂದ್ರ Tumkur news ತುಮಕೂರು: ಮಿತವ್ಯಯದ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸಲಹೆ ಸ್ವೀಕಾರಾರ್ಹ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಕಾಂಗ್ರೆಸ್ ಮಾಜಿ ಸಚಿವ ಟಿ.ಬಿ ಜಯಚಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಆಗುತ್ತಿರುವ ಅನಾಹುತ ಇದು. ಅದಕ್ಕೆ ನಾವೆಲ್ಲ ಜವಾಬ್ದಾರಿ ಹೊರಬೇಕಾಗುತ್ತದೆ. […]

Continue Reading

ತುಮಕೂರು: ಮೋದಿ ಮಿತವ್ಯಯ ಕರೆ: ಕೇಂದ್ರದ ಬೆಂಗಾವಲು ಪಡೆಯನ್ನೇ ಕೈ ಬಿಟ್ಟ ಸಚಿವ ಸೋಮಣ್ಣ!

ಮೋದಿ ಮಿತವ್ಯಯ ಕರೆ: ಕೇಂದ್ರದ ಬೆಂಗಾವಲು ಪಡೆಯನ್ನೇ ಕೈ ಬಿಟ್ಟ ಸಚಿವ ಸೋಮಣ್ಣ! ‘ಪ್ರಧಾನಿ ನರೇಂದ್ರ ಮೋದಿ ಮಿತವ್ಯಯದ ಕರೆ ನೀಡಿರುವ ಹಿನ್ನೆಲೆಯಲ್ಲಿ ನಾನು ಬೆಂಗಳೂರಿನಿಂದ ಕೇವಲ ನನ್ನ ಒಂದೇ ಕಾರಿನಲ್ಲಿ ಬಂದೆ. ಆರ್ ಪಿಎಫ್ ಮತ್ತೊಂದು ಮಗದೊಂದು ಎಲ್ಲವನ್ನು ನಿನ್ನೆಯೇ ವಾಪಾಸ್ ಮಾಡಿದ್ದೇನೆ. ಸ್ಥಳೀಯವಾಗಿ ರಾಜ್ಯ ಸರ್ಕಾರ ಏನು ಕೊಡುತ್ತದೋ ಅದನ್ನು ಉಪಯೋಗಿಸಿಕೊಂಡಿದ್ದೇನೆ.’ – ವಿ.ಸೋಮಣ್ಣ Tumkur news ತುಮಕೂರು: ಪ್ರಧಾನಿ ನರೇಂದ್ರ ಮೋದಿ ಮಿತವ್ಯಯದ ಕರೆ ನೀಡಿರುವ ಹಿನ್ನಲೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ತಮ್ಮ […]

Continue Reading

ತುಮಕೂರು: ಮೇ 20ರಂದು ಸರ್ಕಾರದ ಸಾಧನಾ ಸಮಾವೇಶ ನಡೆಯಲ್ಲ! ಯಾಕೆ? ಏನಾಯಿತು? ಇಲ್ಲಿದೆ ಮಾಹಿತಿ

ಮೇ 20ರಂದು ಸರ್ಕಾರದ ಸಾಧನಾ ಸಮಾವೇಶ ನಡೆಯಲ್ಲ! ಯಾಕೆ? ಏನಾಯಿತು? ಇಲ್ಲಿದೆ ಮಾಹಿತಿ ರಾಜ್ಯ ಸರ್ಕಾರಕ್ಕೆ ಮೂರು ವರ್ಷ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನ ಹೈ ಸ್ಕೂಲ್ ಫೀಲ್ಡ್’ನಲ್ಲಿ ಸಾಧನಾ ಸಮಾವೇಶ: ಸಮಾವೇಶದಲ್ಲಿ ಭಾರೀ ಬದಲಾವಣೆ Tumkur news ತುಮಕೂರು: ರಾಜ್ಯ ಸರ್ಕಾರಕ್ಕೆ ಮೂರು ವರ್ಷ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಹಮ್ಮಿಕೊಂಡಿರುವ ಸಾಧನಾ ಸಮಾವೇಶದಲ್ಲಿ ಬದಲಾವಣೆಯಾಗಿದೆ. ಈ ಹಿಂದೆ ಮೇ 20ರಂದು ತುಮಕೂರಿನಲ್ಲಿ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಶುಕ್ರವಾರ ಈ ದಿನಾಂಕವನ್ನು […]

Continue Reading

ತುಮಕೂರು: ಕೆರೆ ಮಣ್ಣು ತೆಗೆಯಲು ರೈತರಿಗೆ ಅಡ್ಡಿಪಡಿಸುವಂತಿಲ್ಲ; ಸಚಿವ ವಿ‌.ಸೋಮಣ್ಣ

ಕೆರೆ ಮಣ್ಣು ತೆಗೆಯಲು ರೈತರಿಗೆ ಅವಕಾಶ; ಅಧಿಕಾರಿಗಳು ಅಡ್ಡಿ ಪಡಿಸುವಂತಿಲ್ಲ: ವಿ.ಸೋಮಣ್ಣ ಗಣಿ ಇಲಾಖೆಯ ನಿಂಗರಾಜು ಅಮಾನತಿಗೆ ಶಾಸಕ ಸುರೇಶ್ ಗೌಡ ಒತ್ತಾಯ Tumkur news ತುಮಕೂರು: ಕೆರೆ ಮಣ್ಣು ತೆಗೆಯಲು ಇನ್ಮುಂದೆ ರೈತರಿಗೆ ಅಡ್ಡಿ ಪಡಿಸಬಾರದು ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ದಿಶಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುರೇಶ್ ಗೌಡ ಆಕ್ರೋಶ: ಕೆರೆಯಿಂದ ಮಣ್ಣು ತೆಗೆಯುವ ರೈತರಿಂದ ಗಣಿ […]

Continue Reading

ತುಮಕೂರು: ನೀಟ್ ಪರೀಕ್ಷೆ ವೈಫಲ್ಯಕ್ಕೆ ಕೇಂದ್ರ ಸರ್ಕಾರವೇ ಹೊಣೆ; ಮೋದಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

‘ನೀಟ್ ಪರೀಕ್ಷೆ ವೈಫಲ್ಯಕ್ಕೆ ಕೇಂದ್ರ ಸರ್ಕಾರವೇ ಹೊಣೆ’; ಮೋದಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ Tumkur news ತುಮಕೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುವಲ್ಲಿ, ಪರೀಕ್ಷಾ ಪಾವಿತ್ರತೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಮುಖಂಡರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನೀಟ್ ಪರೀಕ್ಷಾ ವೈಫಲ್ಯಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಸಂಸದರು ಸಂಸತ್ತಿನಲ್ಲಿ ಧ್ವನಿ ಮಾಡಬೇಕು ಎಂದು […]

Continue Reading