web analytics
My page - topic 1, topic 2, topic 3

ABOUT US


TTS

ನಮ್ಮ ಬಗ್ಗೆ..
ಇಂದು ಸುದ್ದಿ ನೀಡಲು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಆದರೆ ತುಮಕೂರು ಜಿಲ್ಲೆಯದ್ದು ಎಂದು ಹೇಳಿಕೊಳ್ಳಲು ಪರಿಪೂರ್ಣವಾದ ಡಿಜಿಟಲ್ ಮಾಧ್ಯಮವೊಂದರ ಕೊರತೆ ಇದ್ದದ್ದನ್ನು ನಾವು ಮನಗಂಡಿದ್ದೇವೆ. ಆ ಕೊರತೆಯನ್ನು ನೀಗಿಸುವ ಸಲುವಾಗಿ ತುಮಕೂರು ನ್ಯೂಸ್.ಇನ್ ಅನ್ನು ಆರಂಭಿಸಲಾಗಿದೆ.
ಸಾಮಾನ್ಯವಾಗಿ ದೃಶ್ಯ ಮಾಧ್ಯಮಗಳ ಮೂಲಕ ಸುದ್ದಿ ಸಮಾಚಾರಗಳನ್ನು ವೇಗವಾಗಿ ತಲುಪಿಸಬಹುದು ಎನ್ನುವ ಕಲ್ಪನೆ ಜನರಲ್ಲಿದೆ. ಆದರೆ ಅದಕ್ಕಿಂತಲೂ ವೇಗವಾಗಿ ಮತ್ತು ಜನರ ಬೆರಳ ತುದಿಗೆ ಸುದ್ದಿ ಸಮಾಚಾರಗಳನ್ನು ತಲುಪಿಸಲು ಡಿಜಿಟಲ್ ಮಾಧ್ಯಮದಿಂದ ಮಾತ್ರ ಸಾಧ್ಯ. ಇಂದು ಗ್ರಾಮೀಣ ಪ್ರದೇಶದ ಎಲ್ಲಾ ಕಡೆಗೂ ದಿನಪತ್ರಿಕೆಗಳನ್ನು ತಲುಪಿಸುವುದು ಅಸಾಧ್ಯವಾದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ತುಮಕೂರು ನ್ಯೂಸ್.ಇನ್ ಡಿಜಿಟಲ್ ಮಾಧ್ಯಮದ ಮೂಲಕ ಅಂತರ್ಜಾಲ ವ್ಯವಸ್ಥೆ ಹೊಂದಿರುವ ಪ್ರತಿ ವ್ಯಕ್ತಿಗೂ ಸುದ್ದಿ ಸಮಾಚಾರಗಳನ್ನು ತಲುಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ.
ಇದರ ಜೊತೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಾಧಕರ ಪರಿಚಯ, ವ್ಯಾಪಾರ ಚಟುವಟಿಕೆಗಳ ಮಾಹಿತಿ, ಕ್ರೀಡೆ, ಕಲೆ, ಸಾಹಿತ್ಯ, ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳ, ಹಳ್ಳಿಯಿಂದ ದೇಶ, ವಿದೇಶಗಳ ಬಗ್ಗೆಯೂ ಜನರಿಗೆ ಉಪಯುಕ್ತ ಮಾಹಿತಿ ನೀಡುವುದು ತುಮಕೂರು ನ್ಯೂಸ್.ಇನ್‍ನ ಮುಖ್ಯ ಉದ್ದೇಶವಾಗಿದೆ. ಜಾಹೀರಾತುಗಳ ಮೂಲಕ ಉದ್ಯಮಿಗಳು, ಆಸಕ್ತರು ತಮ್ಮ ವ್ಯವಹಾರವನ್ನು ಪ್ರಗತಿಯತ್ತ ಕೊಂಡೊಯ್ಯಲು, ಅವರ ಸಾಮಾಜಿಕ ಜೀವನದ ಪ್ರಗತಿಗೆ ತುಮಕೂರು ನ್ಯೂಸ್.ಇನ್ ನೆರವಾಗುತ್ತದೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವುದು ಸೇರಿದಂತೆ ಜನ ಮನ ಧ್ವನಿಯಾಗಿ ಜನರ ಮನೆ ಮನಗಳನ್ನು ತಲುಪುವುದು ತುಮಕೂರು ನ್ಯೂಸ್.ಇನ್‍ನ ಸಂಕಲ್ಪವಾಗಿದೆ.

error: Content is protected !!