ರೋಟರಿಯಿಂದ ಪ್ರಚಾರಕರ ದಿನಾಚರಣೆ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ರೋಟರಿಯಿಂದ ಪ್ರಚಾರಕರ ದಿನಾಚರಣೆ

Tumkurnews.in
ತುಮಕೂರು:
ರೋಟರಿ ತುಮಕೂರು ಸಂಸ್ಥೆಯಿಂದ ನಗರದ ರೋಟರಿ ಬಾಲ ಭವನದಲ್ಲಿ ರಾಷ್ಟ್ರೀಯ ಪ್ರಚಾರಕರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಪತ್ರಕರ್ತ ಮಣ್ಣೆ ರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೋಟರಿ ತುಮಕೂರು ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್ ಮಾತನಾಡಿ, ನಾವು ಮಾಡುವ ಒಳ್ಳೆ ಕೆಲಸ ಇತರರಿಗೆ ಪ್ರೇರಣೆ ಆಗಬೇಕು. ಆ ಕೆಲಸದ ಫಲ ಅಗತ್ಯವಿರುವವರಿಗೆ ತಲುಪಬೇಕು ಎಂದರು.
ಈ ಸಂದರ್ಭದಲ್ಲಿ ಸಂಜನ್ ನಾಗರಾಜ್ ಹಾಗೂ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ರೋಟರಿ ಕಾರ್ಯದರ್ಶಿ ಚಂದ್ರಕಲಾ ಎಸ್, ಅಸಿಸ್ಟೆಂಟ್ ಗವರ್ನರ್ ಸಿ. ನಾಗರಾಜ್, ಸೌಮ್ಯ, ಹಿರೇಮಠ, ನಾಗೇಶ್ ಕುಮಾರ್, ಮಲ್ಲೇಶಯ್ಯ ರವಿಶಂಕರ್, ಹೆಚ್. ಮಲ್ಲಿಕಾರ್ಜುನ್, ಕರಣಂ ರಮೇಶ್, ಎಂ.ಆರ್. ರಘು, ಹೇಮ ಮಲ್ಲಿಕಾರ್ಜುನ್, ಸುಷ್ಮಾ, ವೀರೇಶ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *