ಮೋದಿ ಮಿತವ್ಯಯ ಕರೆ: ಕೇಂದ್ರದ ಬೆಂಗಾವಲು ಪಡೆಯನ್ನೇ ಕೈ ಬಿಟ್ಟ ಸಚಿವ ಸೋಮಣ್ಣ!
‘ಪ್ರಧಾನಿ ನರೇಂದ್ರ ಮೋದಿ ಮಿತವ್ಯಯದ ಕರೆ ನೀಡಿರುವ ಹಿನ್ನೆಲೆಯಲ್ಲಿ ನಾನು ಬೆಂಗಳೂರಿನಿಂದ ಕೇವಲ ನನ್ನ ಒಂದೇ ಕಾರಿನಲ್ಲಿ ಬಂದೆ. ಆರ್ ಪಿಎಫ್ ಮತ್ತೊಂದು ಮಗದೊಂದು ಎಲ್ಲವನ್ನು ನಿನ್ನೆಯೇ ವಾಪಾಸ್ ಮಾಡಿದ್ದೇನೆ. ಸ್ಥಳೀಯವಾಗಿ ರಾಜ್ಯ ಸರ್ಕಾರ ಏನು ಕೊಡುತ್ತದೋ ಅದನ್ನು ಉಪಯೋಗಿಸಿಕೊಂಡಿದ್ದೇನೆ.’
– ವಿ.ಸೋಮಣ್ಣ
Tumkur news
ತುಮಕೂರು: ಪ್ರಧಾನಿ ನರೇಂದ್ರ ಮೋದಿ ಮಿತವ್ಯಯದ ಕರೆ ನೀಡಿರುವ ಹಿನ್ನಲೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ತಮ್ಮ ಬೆಂಗಾವಲು ಪಡೆಯಯನ್ನು ಕಡಿತಗೊಳಿಸಿದ್ದಾರೆ.
ಕೇವಲ ಸ್ಥಳೀಯ ಎಸ್ಕಾರ್ಟ್ ನಲ್ಲಿ ತುಮಕೂರಿಗೆ ಆಗಮಿಸಿದ ವಿ.ಸೋಮಣ್ಣ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆದರು. ಆರ್ ಪಿಎಫ್ ಸೇರಿದಂತೆ ಭದ್ರತಾ ವಾಹನಗಳಿಲ್ಲದೇ ಆಗಮಿಸಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಪಾಲ್ಗೊಂಡರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಮಿತವ್ಯಯವನ್ನು ಅಳವಡಿಸಿಕೊಂಡಿದ್ದೇವೆ. ನಮ್ಮ ಎಲ್ಲ ಮಂತ್ರಿಗಳೂ ಅದನ್ನು ಅನ್ವಯ ಮಾಡಿಕೊಂಡಿದ್ದೇವೆ. ಅದನ್ನು ವಿರೋಧ ಮಾಡುವವರು ವಿರೋಧ ಮಾಡುತ್ತಾರೆ.
ಆದರೇ ಇದೊಂದು ಉಪಯುಕ್ತ ಸಲಹೆ. ಕಟ್ಟು ನಿಟ್ಟಾಗಿ ಪ್ರಧಾನಿಯವರ ಸಲಹೆಯನ್ನು ಜಾರಿ ಮಾಡಬೇಕು ಅನ್ನುವ ಚಿಂತನೆ ಎಲ್ಲಾ ವಲಯದಲ್ಲೂ ನಡೆಯುತ್ತಿದೆ. ಇದರಿಂದ ಎಷ್ಟು ಉಳಿಯುತ್ತದೆ ಅನ್ನೊದಕ್ಕಿಂತ ಒಂದು ಸಂದೇಶ ರವಾನೆ ಆಗಬೇಕು. ದೇಶದ ಅಭಿವೃದ್ಧಿಗೆ ನಾವೆಲ್ಲಾ ಒಂದು ಸಂಕೇತವಾಗಿ ಕೆಲಸ ಮಾಡಬೇಕು.
ನಾನು ಬೆಂಗಳೂರಿನಿಂದ ಕೇವಲ ನನ್ನ ಒಂದೇ ಕಾರಿನಲ್ಲಿ ಬಂದೆ. ಆರ್ ಪಿಎಫ್ ಮತ್ತೊಂದು ಮಗದೊಂದು ಎಲ್ಲವನ್ನು ನಿನ್ನೆಯೇ ಎಲ್ಲವನ್ನು ವಾಪಾಸ್ ಮಾಡಿದ್ದೇನೆ. ಸ್ಥಳೀಯವಾಗಿ ರಾಜ್ಯ ಸರ್ಕಾರ ಏನು ಕೊಡುತ್ತದೋ ಅದನ್ನು ಉಪಯೋಗಿಸಿಕೊಂಡಿದ್ದೇನೆ. ಪ್ರಧಾನ ಮಂತ್ರಿಗಳೇ ಈಗ ಅದನ್ನು ಅನ್ವಯ ಮಾಡಿಕೊಂಡಾಗ ನಾವು ಅವರಿಗಿಂತ ದೊಡ್ಡವರಲ್ಲ ಎಂದರು.
ಪೆಟ್ರೋಲ್, ಡಿಸೆಲ್ ರೇಟ್ ಕೂಡ ಹೆಚ್ಚಾಗುತ್ತಿದೆ, ಅದು ಅನಿವಾರ್ಯ ಕೂಡ. ನಾವು ಕೂಡ ಯಾವ ರೀತಿ ನಡೆದುಕೊಳ್ಳಬೇಕೆಂಬ ಮಾರ್ಗದರ್ಶನ ಇದೆ. ಕೋವಿಡ್ ಸಂದರ್ಭದಲ್ಲಿ ಹೇಗೆ ನಡೆದುಕೊಂಡಿದ್ದೇವೋ ಹಾಗೆ ನಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ತುಮಕೂರು: ಕೆರೆ ಮಣ್ಣು ತೆಗೆಯಲು ರೈತರಿಗೆ ಅಡ್ಡಿಪಡಿಸುವಂತಿಲ್ಲ; ಸಚಿವ ವಿ.ಸೋಮಣ್ಣ
