ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಸ್ವಾಗತಾರ್ಹ; ಇಕ್ಬಾಲ್ ಅಹಮದ್
2022ರಲ್ಲಿ ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ, ವಿದ್ಯಾರ್ಥಿಗಳಲ್ಲಿ ಹಿಂದೂ, ಮುಸ್ಲಿಂ ಎಂಬ ದ್ವೇಷ ಹರಿಡಿದ್ದು ಬಿಜೆಪಿ ಸರಕಾರ. ಆಗಿದ್ದ ತಪ್ಪನ್ನು ಸರಕಾರ ಸರಿಪಡಿಸಿದೆ.
– ಇಕ್ಬಾಲ್ ಅಹಮದ್, ತುಮಕೂರು
Tumkur news
ತುಮಕೂರು: ಸರಕಾರ ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಸಂಕೇತಗಳನ್ನು ಧರಿಸಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ ಬಂದಾಗಿನಿಂದಲೂ ಹಿಬಾಜ್ ಧರಿಸಲು ಅವಕಾಶವಿತ್ತು. ಆದರೆ 2022ರಲ್ಲಿ ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ, ವಿದ್ಯಾರ್ಥಿಗಳಲ್ಲಿಯೇ ಹಿಂದೂ, ಮುಸ್ಲಿಂ ಎಂಬ ದ್ವೇಷ ಹರಿಡಿದ್ದು ಬಿಜೆಪಿ ಸರಕಾರ. ಆಗಿದ್ದ ತಪ್ಪನ್ನು ಸರಕಾರ ಸರಿಪಡಿಸಿದೆ. ಓಟ್ ಬ್ಯಾಂಕ್ ರಾಜಕಾರಣಕ್ಕೆ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಕರ್ನಾಟಕದಲ್ಲಿ ಈ ರೀತಿಯ ಯುವಜನರ ನಡುವೆ ದ್ವೇಷ ಹುಟ್ಟಿಸುವ ಕೆಲಸವನ್ನು ಬಿಜೆಪಿ ಬಿಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಕೆಂಚಮಾರಯ್ಯ, ಮಹೇಶ್, ಮಂಜುನಾಥ್, ಗುರುಪ್ರಸಾದ್, ಕುಮಾರಸ್ವಾಮಿ, ಲಿಂಗರಾಜು, ಷಣ್ಮಕಪ್ಪ, ಇರ್ಫಾನ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
