ಮೈದಾಳದ ಅಸಹಾಯಕ ಕುಟುಂಬಕ್ಕೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ನೆರವು

ಮೈದಾಳದ ಅಸಹಾಯಕ ಕುಟುಂಬಕ್ಕೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ನೆರವು Tumkurnews.in ತುಮಕೂರು: ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿರುವ ನಗರದ ಹೊರವಲಯದ ಮೈದಾಳ ಗ್ರಾಮದ ವೀರಭದ್ರಯ್ಯ ಅವರ ಕುಟುಂಬಕ್ಕೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ನೆರವಿನ ಹಸ್ತ ಚಾಚಿದೆ. ಚಿಕಿತ್ಸೆಯಲ್ಲಿನ ಸಮಸ್ಯೆಯಿಂದ ವೀರಭದ್ರಯ್ಯ ಅವರು ಒಂದು ಕಾಲನ್ನು ಕಳೆದುಕೊಂಡಿದ್ದಾರೆ. ಅವರ ಪತ್ನಿಗೆ ಎರಡೂ ಕಣ್ಣುಗಳು ಕಾಣಿಸುವುದಿಲ್ಲ. ಇವರ ಏಳೆಂಟು ವರ್ಷದ ಮಗನ ಎರಡೂ ಕಿಡ್ನಿಗಳು ವಿಫಲಗೊಂಡಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ದಿಕ್ಕು ತೋಚದಂತಾಗಿದ್ದ ಕುಟುಂಬಕ್ಕೆ ಸಮೃದ್ಧಿ ಶಿಕ್ಷಣ […]

Continue Reading

ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ

ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ Tumkurnews.in ತುಮಕೂರು: ಮೈ ಭಾರತ್ ಕೇಂದ್ರ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಫ್ ತುಮಕೂರು ವತಿಯಿಂದ ನಗರದ ಶಿರಾಗೇಟ್‌ನ ಕಾಳಿದಾಸ ಕಾಲೇಜಿನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೧ನೇ ಜಯಂತಿಯನ್ನು ಆಚರಿಸಲಾಯಿತು. ಇನ್ನರ್ ವ್ಹೀಲ್ ಕ್ಲಬ್ ಆಫ್ ತುಮಕೂರು ಅಧ್ಯಕ್ಷೆ ಲೀಲಾವತಿ ಅಶೋಕ್ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ದೇಶದ ಅಖಂಡತೆ, ಏಕತೆ ಮತ್ತು ಸಮಗ್ರತೆಯನ್ನು ಸಾರುವ ಸಲುವಾಗಿ ಪ್ರತಿವರ್ಷ ರಾಷ್ಟ್ರೀಯ ಏಕತಾ ದಿವಸವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿದ್ದ ೫೬೦ಕ್ಕೂ […]

Continue Reading

ದಿ. ಎಸ್. ಬಂಗಾರಪ್ಪ ಹುಟ್ಟುಹಬ್ಬ ಆಚರಣೆ

ದಿ. ಎಸ್. ಬಂಗಾರಪ್ಪ ಹುಟ್ಟುಹಬ್ಬ ಆಚರಣೆ ಆರ್ಯ ಈಡಿಗರ ಸಂಘದಿಂದ ನಾಯಕನ ಕೊಡುಗೆ ಸ್ಮರಣೆ Tumkurnews.in ತುಮಕೂರು: ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರ ೯೪ನೇ ಹುಟ್ಟುಹಬ್ಬವನ್ನು ನಗರದ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಆಚರಿಸಲಾಯಿತು. ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂಘದ ಪದಾಧಿಕಾರಿಗಳು ಗೌರವ ಸಲ್ಲಿಸಿದರು. ಆರ್ಯ ಈಡಿಗ ಸಮಾಜದ ನಾಯಕರೂ ಆಗಿದ್ದ ಎಸ್. ಬಂಗಾರಪ್ಪ ಅವರು ರಾಜಕೀಯ ಕ್ಷೇತ್ರದ ಧ್ರುವತಾರೆಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಬಡವರು ಹಾಗೂ ಶೋಷಿತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ […]

Continue Reading

ಏಕೀಕರಣಕ್ಕೆ ಶ್ರಮಿಸಿದ ಮಹನೀಯರು ಸ್ಮರಣೀಯ: ಜ್ಯೋತಿಗಣೇಶ್

ಏಕೀಕರಣಕ್ಕೆ ಶ್ರಮಿಸಿದ ಮಹನೀಯರು ಸ್ಮರಣೀಯ: ಜ್ಯೋತಿಗಣೇಶ್ ನಿ. ಉಪನ್ಯಾಸಕ ರೇವಣ್ಣಸಿದ್ದಪ್ಪ ವಿರಚಿತ ರಾಜ್ಯೋತ್ಸವ ಗೀತೆಗಳ ಬಿಡುಗಡೆ Tumkurnews.in ತುಮಕೂರು: ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ ಮಹನೀಯರ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ನಿವೃತ್ತ ಇಂಗ್ಲಿಷ್ ಉಪನ್ಯಾಸಕರಾದ ನಗರದ ರೇವಣ್ಣಸಿದ್ದಪ್ಪ ಅವರು ರಚಿಸಿ ಸಿದ್ಧಪಡಿಸಿದ ಕನ್ನಡ ರಾಜ್ಯೋತ್ಸವ ಗೀತೆಗಳನ್ನು ರಾಜ್ಯೋತ್ಸವದ ಅಂಗವಾಗಿ ಬಿಡುಗಡೆ ಮಾಡಲಾಯಿತು. ನಗರದ ವಿದ್ಯಾನಿಧಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ರಾಜ್ಯೋತ್ಸವ ಗೀತೆಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು […]

Continue Reading

ದೊಡ್ಮನೆ ಅಭಿಮಾನಿ ಬಳಗದಿಂದ ಪುನೀತ್ ಪುಣ್ಯಸ್ಮರಣೆ

ದೊಡ್ಮನೆ ಅಭಿಮಾನಿ ಬಳಗದಿಂದ ಪುನೀತ್ ಪುಣ್ಯಸ್ಮರಣೆ Tumkurnews.in ರಕ್ತದಾನ, ಅನ್ನದಾನ, ಸಾಧಕರಿಗೆ ಗೌರವಾರ್ಪಣೆ ತುಮಕೂರು: ತಿಪಟೂರಿನ ದೊಡ್ಮನೆ ಅಭಿಮಾನಿ ಬಳಗದಿಂದ ಅಲ್ಲಿನ ಬಸ್ ನಿಲ್ದಾಣದಲ್ಲಿ ಕನ್ನಡದ ಹೆಮ್ಮೆಯ ನಟ ಪುನೀತ್ ರಾಜ್‌ಕುಮಾರ್ ಅವರ ಐದನೇ ಪುಣ್ಯಸ್ಮರಣೆ ಆಚರಿಸಲಾಯಿತು. ಪುನೀತ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ಕಿರುತೆರೆ ನಟ ದಯಾನಂದ್ ಸಾಗರ್ ಅವರು, ಡಾ. ರಾಜ್‌ಕುಮಾರ್ ಅವರ ಕುಟುಂಬವನ್ನು ಅಭಿಮಾನದಿಂದ ‘ದೊಡ್ಮನೆ ಕುಟುಂಬ’ ಎಂದು ಗೌರವಿಸಲಾಗುತ್ತದೆ. […]

Continue Reading

ಸಿದ್ಧಗಂಗಾ ಮಠಕ್ಕೆ ಕೆ.ಎಂ. ಸುರೇಶ್ ಭೇಟಿ

ಸಿದ್ಧಗಂಗಾ ಮಠಕ್ಕೆ ಕೆ.ಎಂ. ಸುರೇಶ್ ಭೇಟಿ Tumkurnews.in ತುಮಕೂರು: ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಚುನಾಯಿತರಾದ ಕೆ.ಎಂ. ಸುರೇಶ್ ಅವರು ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರೊಂದಿಗೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಜೊತೆ ಶುಕ್ರವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎಂ. ಸುರೇಶ್ ಅವರು ೨೩ ಸಾವಿರಕ್ಕೂ ಹೆಚ್ಚು ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದು, ಬಿಜೆಪಿ […]

Continue Reading

ನ. ೧ರಂದು ಭವ್ಯ ಜಿನದೀಕ್ಷಾ ಸಮಾರಂಭ

ನ. ೧ರಂದು ಭವ್ಯ ಜಿನದೀಕ್ಷಾ ಸಮಾರಂಭ Tumkurnews.in ತುಮಕೂರು: ಆಚಾರ್ಯಶ್ರೀ ೧೦೮ ಪ್ರಮುಖ್ ಸಾಗರ್‌ಜೀ ಮಹಾರಾಜರವರ ಹಾಗೂ ಸಂಘದ ೩೧ನೇ ಪುಷ್ಪ ಪ್ರಮುಖ್ ವರ್ಷಾಯೋಗದ ಅಂಗವಾಗಿ ನವೆಂಬರ್ ೧ರಂದು ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಭವ್ಯ ಜಿನೇಶ್ವರಿ ಜಿನದೀಕ್ಷಾ ಸಮಾರಂಭ ಏರ್ಪಡಿಸಲಾಗಿದೆ. ಆಚಾರ್ಯಶ್ರೀ ಪ್ರಮುಖ್ ಸಾಗರ್‌ಜೀ ಅವರ ದಿವ್ಯ ಸಾನಿಧ್ಯದಲ್ಲಿ ಅಂದು ಬೆಳಿಗ್ಗೆ ೮ ಗಂಟೆಗೆ ನಡೆಯುವ ಸಮಾರಂಭದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಆರೋಗ್ಯ […]

Continue Reading

‘ಟೀಕೆ, ನಿಂದನೆ ನಿಲ್ಲಿಸಿ ನಾಡಿನ ಅಭಿವೃದ್ಧಿ ಕಡೆಗೆ ಗಮನಹರಿಸಿ’

‘ಟೀಕೆ, ನಿಂದನೆ ನಿಲ್ಲಿಸಿ ನಾಡಿನ ಅಭಿವೃದ್ಧಿ ಕಡೆಗೆ ಗಮನಹರಿಸಿ’ Tumkurnews.in ಸಿಎಂ ಡಿ.ಕೆ.ಶಿ., ಕೇಂದ್ರ ಸಚಿವ ಎಚ್‌ಡಿಕೆಗೆ ಜಿಲ್ಲಾ ಒಕ್ಕಲಿಗರ ಸಂಘ ಮನವಿ ತುಮಕೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ನಾಡಿನ ಪ್ರತಿಷ್ಠಿತ ನಾಯಕರು. ಇಬ್ಬರೂ ನಾಯಕರಿಗೆ ರಾಜ್ಯಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಬೆಂಬಲಿಗರಿದ್ದಾರೆ. ಒಕ್ಕಲಿಗ ಸಮುದಾಯದ ಈ ಇಬ್ಬರು ನಾಯಕರು ಪರಸ್ಪರ ಟೀಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನಹರಿಸಬೇಕು ಎಂದು ಜಿಲ್ಲಾ ಒಕ್ಕಲಿಗರ […]

Continue Reading

ರೈತನ ಭೂಮಿ ಹರಾಜು ವಿರೋಧಿಸಿ ನ. ೨ರಂದು ಬೃಹತ್ ಪ್ರತಿಭಟನೆ

ರೈತನ ಭೂಮಿ ಹರಾಜು ವಿರೋಧಿಸಿ ನ. ೨ರಂದು ಬೃಹತ್ ಪ್ರತಿಭಟನೆ Tumkurnews.in ತುಮಕೂರು: ನಿಯಮಬಾಹಿರವಾಗಿ ರೈತನ ಭೂಮಿಯನ್ನು ಬ್ಯಾಂಕ್ ಅಧಿಕಾರಿಗಳು ಹಾಗೂ ಬಿಡ್ಡುದಾರರು ಸೇರಿ ಕಬಳಿಸಲು ಹೊರಟಿರುವ ತುರುವೇಕೆರೆ ಕರ್ನಾಟಕ ಬ್ಯಾಂಕ್ ಶಾಖೆಯ ಕ್ರಮವನ್ನು ವಿರೋಧಿಸಿ, ರೈತನ ಭೂಮಿಯನ್ನು ವಾಪಸ್ ನೀಡಬೇಕು ಹಾಗೂ ಆನ್‌ಲೈನ್ ಹರಾಜು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ ೨ರಂದು ಸೋಮವಾರ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ. ಗೋವಿಂದರಾಜು […]

Continue Reading

ಹಿರಿಯ ನಾಗರಿಕರು ಆರೋಗ್ಯ ಕಾಪಾಡಿಕೊಳ್ಳಿ – ಡಾ. ವೈ.ಆರ್. ರಶ್ಮಿ

ಹಿರಿಯ ನಾಗರಿಕರು ಆರೋಗ್ಯ ಕಾಪಾಡಿಕೊಳ್ಳಿ – ಡಾ. ವೈ.ಆರ್. ರಶ್ಮಿ Tumkurnews.in ತುಮಕೂರು: ಎಲ್ಲರೂ ವೈದ್ಯರ ಸಲಹೆ ಮತ್ತು ನೆರವು ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಅದರಲ್ಲೂ ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಯಸ್ಸಾಗುತ್ತಿದ್ದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಸೂಕ್ತ ಸಮಯದಲ್ಲಿ ವೈದ್ಯರ ನೆರವು ಪಡೆಯಬೇಕು ಎಂದು ಸಿದ್ಧಗಂಗಾ ಮಠದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ವೈ.ಆರ್. ರಶ್ಮಿ ತಿಳಿಸಿದರು. ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ […]

Continue Reading