ಮೈದಾಳದ ಅಸಹಾಯಕ ಕುಟುಂಬಕ್ಕೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ನೆರವು

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ಮೈದಾಳದ ಅಸಹಾಯಕ ಕುಟುಂಬಕ್ಕೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ನೆರವು

Tumkurnews.in

ತುಮಕೂರು: ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿರುವ ನಗರದ ಹೊರವಲಯದ ಮೈದಾಳ ಗ್ರಾಮದ ವೀರಭದ್ರಯ್ಯ ಅವರ ಕುಟುಂಬಕ್ಕೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ನೆರವಿನ ಹಸ್ತ ಚಾಚಿದೆ.

ಚಿಕಿತ್ಸೆಯಲ್ಲಿನ ಸಮಸ್ಯೆಯಿಂದ ವೀರಭದ್ರಯ್ಯ ಅವರು ಒಂದು ಕಾಲನ್ನು ಕಳೆದುಕೊಂಡಿದ್ದಾರೆ. ಅವರ ಪತ್ನಿಗೆ ಎರಡೂ ಕಣ್ಣುಗಳು ಕಾಣಿಸುವುದಿಲ್ಲ. ಇವರ ಏಳೆಂಟು ವರ್ಷದ ಮಗನ ಎರಡೂ ಕಿಡ್ನಿಗಳು ವಿಫಲಗೊಂಡಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ.

ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ದಿಕ್ಕು ತೋಚದಂತಾಗಿದ್ದ ಕುಟುಂಬಕ್ಕೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ನೆರವಿಗೆ ಧಾವಿಸಿದ್ದಾರೆ. ಕುಟುಂಬಕ್ಕೆ ಏಳೆಂಟು ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಿದ್ದು, ವೀರಭದ್ರಯ್ಯ ಅವರ ಕಾಲಿನ ಶಸ್ತ್ರಚಿಕಿತ್ಸೆಗಾಗಿ ೫೦ ಸಾವಿರ ರೂ. ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಮೃದ್ಧಿ ಶಿಕ್ಷಣ ಟ್ರಸ್ಟ್ ಮೂಲಕ ಬೆಳಗುಂಬ ವೆಂಕಟೇಶ್ ಅವರು ಹಲವು ಅಶಕ್ತ ಕುಟುಂಬಗಳಿಗೆ ನಿರಂತರವಾಗಿ ನೆರವು ನೀಡುತ್ತಾ ಬಂದಿದ್ದಾರೆ. ನಿರ್ಗತಿಕರಿಗೆ ಮನೆ ನಿರ್ಮಿಸಿಕೊಡುವುದು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದು, ಬಡ ವೃದ್ಧರಿಗೆ ದಿನಸಿ, ಬಟ್ಟೆ, ಬೆಡ್‌ಶೀಟ್ ಹಾಗೂ ಔಷಧಗಳನ್ನು ಒದಗಿಸುವ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿದ್ದಾರೆ.

ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಯಲ್ಲಾಪುರ ನಂಜುಂಡಯ್ಯ, ಕಾರ್ಯದರ್ಶಿ ಹರೀಶ್ ಬೈರಸಂದ್ರ, ಮುದ್ದಗೆರೆ ಪ್ರದೀಪ್, ಡಿ.ಕೆ. ಕಾಂತರಾಜ್, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ, ಕಾರ್ಯದರ್ಶಿ ಮಮತಾ, ಜಂಟಿ ಕಾರ್ಯದರ್ಶಿ ಸಿದ್ದಗಂಗಮ್ಮ, ತುಳಸಿ, ಭವ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *