ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ

Tumkurnews.in

ತುಮಕೂರು: ಮೈ ಭಾರತ್ ಕೇಂದ್ರ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಫ್ ತುಮಕೂರು ವತಿಯಿಂದ ನಗರದ ಶಿರಾಗೇಟ್‌ನ ಕಾಳಿದಾಸ ಕಾಲೇಜಿನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೧ನೇ ಜಯಂತಿಯನ್ನು ಆಚರಿಸಲಾಯಿತು.

ಇನ್ನರ್ ವ್ಹೀಲ್ ಕ್ಲಬ್ ಆಫ್ ತುಮಕೂರು ಅಧ್ಯಕ್ಷೆ ಲೀಲಾವತಿ ಅಶೋಕ್ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ದೇಶದ ಅಖಂಡತೆ, ಏಕತೆ ಮತ್ತು ಸಮಗ್ರತೆಯನ್ನು ಸಾರುವ ಸಲುವಾಗಿ ಪ್ರತಿವರ್ಷ ರಾಷ್ಟ್ರೀಯ ಏಕತಾ ದಿವಸವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿದ್ದ ೫೬೦ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಗೊಳಿಸಿ, ಇಂದಿನ ಭೌಗೋಳಿಕ ರೂಪದ ಭಾರತವನ್ನು ನಿರ್ಮಿಸುವಲ್ಲಿ ಪಟೇಲ್ ಅವರ ಪಾತ್ರ ಐತಿಹಾಸಿಕವಾದುದು ಎಂದು ತಿಳಿಸಿದರು.

ಭಾರತದ ಏಕತೆಗಾಗಿ ಕಠಿಣ ನಿರ್ಧಾರಗಳನ್ನು ಕೈಗೊಂಡ ವಲ್ಲಭಭಾಯಿ ಪಟೇಲ್ ಅವರು ಭಾರತದ ಉಕ್ಕಿನ ಮನುಷ್ಯ ಎಂದು ಹೆಸರಾಗಿದ್ದಾರೆ. ಅವರ ಧೈರ್ಯ, ಸ್ಥೈರ್ಯ, ದೇಶಭಕ್ತಿ ಹಾಗೂ ಆದರ್ಶಗಳನ್ನು ಇಂದಿನ ತಲೆಮಾರಿಗೆ ಪರಿಚಯಿಸಬೇಕು ಎಂದು ಹೇಳಿದರು.

ಕಾಲೇಜು ಆಡಳಿತ ಮಂಡಳಿಯ ಪುಟ್ಟಣ್ಣ, ಸಂಪನ್ಮೂಲ ವ್ಯಕ್ತಿ ಆರ್. ಅಂಜನಮೂರ್ತಿ, ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಪ್ರತಿಭಾ ಶ್ರೀಧರ್, ಮುಖಂಡರಾದ ಪವಿತ್ರ, ಮಂಜುಳಾದೇವಿ, ಅಂಬಿಕಾ ಮಹೇಶ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *