ದೊಡ್ಮನೆ ಅಭಿಮಾನಿ ಬಳಗದಿಂದ ಪುನೀತ್ ಪುಣ್ಯಸ್ಮರಣೆ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ದೊಡ್ಮನೆ ಅಭಿಮಾನಿ ಬಳಗದಿಂದ ಪುನೀತ್ ಪುಣ್ಯಸ್ಮರಣೆ

Tumkurnews.in

ರಕ್ತದಾನ, ಅನ್ನದಾನ, ಸಾಧಕರಿಗೆ ಗೌರವಾರ್ಪಣೆ

ತುಮಕೂರು: ತಿಪಟೂರಿನ ದೊಡ್ಮನೆ ಅಭಿಮಾನಿ ಬಳಗದಿಂದ ಅಲ್ಲಿನ ಬಸ್ ನಿಲ್ದಾಣದಲ್ಲಿ ಕನ್ನಡದ ಹೆಮ್ಮೆಯ ನಟ ಪುನೀತ್ ರಾಜ್‌ಕುಮಾರ್ ಅವರ ಐದನೇ ಪುಣ್ಯಸ್ಮರಣೆ ಆಚರಿಸಲಾಯಿತು. ಪುನೀತ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ಕಿರುತೆರೆ ನಟ ದಯಾನಂದ್ ಸಾಗರ್ ಅವರು, ಡಾ. ರಾಜ್‌ಕುಮಾರ್ ಅವರ ಕುಟುಂಬವನ್ನು ಅಭಿಮಾನದಿಂದ ‘ದೊಡ್ಮನೆ ಕುಟುಂಬ’ ಎಂದು ಗೌರವಿಸಲಾಗುತ್ತದೆ. ಡಾ. ರಾಜ್ ಅವರು ಕನ್ನಡದ ಮೇರು ನಟ, ಕನ್ನಡದ ಶಕ್ತಿ ಹಾಗೂ ನಾಡಿನ ಹಿರಿಮೆಯಾಗಿದ್ದಾರೆ. ತಿಪಟೂರಿನ ರಾಮಸ್ವಾಮಿ ಮತ್ತು ಡಾ. ರಾಜ್‌ಕುಮಾರ್ ಅವರ ನಡುವಿನ ಆತ್ಮೀಯ ಗೆಳೆತನ ಇಂದಿನ ಯುವಜನತೆಗೆ ಮಾದರಿಯಾಗಿದೆ ಎಂದರು.

ಪುನೀತ್ ರಾಜ್‌ಕುಮಾರ್ ಅವರು ಸರಳತೆ, ಮಾನವೀಯತೆ ಹಾಗೂ ಸಮಾಜಸೇವೆಯ ಮೂಲಕ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಇಂತಹ ಸೇವಾ ಕಾರ್ಯಗಳನ್ನು ಮುಂದುವರಿಸುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅನ್ನಸಂತರ್ಪಣೆ, ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ಪುಸ್ತಕಗಳ ವಿತರಣೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಪರಶಿವಮೂರ್ತಿ, ಸಂಘದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ದರ್ಶನ್ ಕೆ.ಎಸ್., ಖಜಾಂಚಿ ಪ್ರಕಾಶ್ ಎ., ನಿರ್ದೇಶಕರಾದ ರಾಮಚಂದ್ರ, ಪ್ರಶಾಂತ್, ಕೇಶವಮೂರ್ತಿ, ನರಸಿಂಹಮೂರ್ತಿ, ವೇದಮೂರ್ತಿ, ಚೌಡಪ್ಪ, ವಾಸು, ಮನು, ಅಜಯ್, ರಘು, ಚಂದನ್, ಸೋಮಣ್ಣ, ರಾಜು, ಮಹೇಶ್, ಕಾರ್ತಿಕ್, ನಂಜುಂಡಸ್ವಾಮಿ, ಶಂಕರ್, ಹೇಮಂತ್, ಮಂಜುನಾಥ್, ಪಾರ್ಥ, ರಮೇಶ್, ಡಿಜೆ ದಿಲೀಪ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *