ನ. ೧ರಂದು ಭವ್ಯ ಜಿನದೀಕ್ಷಾ ಸಮಾರಂಭ
Tumkurnews.in
ತುಮಕೂರು: ಆಚಾರ್ಯಶ್ರೀ ೧೦೮ ಪ್ರಮುಖ್ ಸಾಗರ್‌ಜೀ ಮಹಾರಾಜರವರ ಹಾಗೂ ಸಂಘದ ೩೧ನೇ ಪುಷ್ಪ ಪ್ರಮುಖ್ ವರ್ಷಾಯೋಗದ ಅಂಗವಾಗಿ ನವೆಂಬರ್ ೧ರಂದು ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಭವ್ಯ ಜಿನೇಶ್ವರಿ ಜಿನದೀಕ್ಷಾ ಸಮಾರಂಭ ಏರ್ಪಡಿಸಲಾಗಿದೆ.
ಆಚಾರ್ಯಶ್ರೀ ಪ್ರಮುಖ್ ಸಾಗರ್‌ಜೀ ಅವರ ದಿವ್ಯ ಸಾನಿಧ್ಯದಲ್ಲಿ ಅಂದು ಬೆಳಿಗ್ಗೆ ೮ ಗಂಟೆಗೆ ನಡೆಯುವ ಸಮಾರಂಭದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.
ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಆರೋಗ್ಯ ಸಚಿವ ಯು.ಟಿ. ಖಾದರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಎಸ್.ಆರ್. ಶ್ರೀನಿವಾಸ್ ಹಾಗೂ ಬಿ. ಸುರೇಶ್‌ಗೌಡ ಭಾಗವಹಿಸಲಿದ್ದಾರೆ. ದಿಗಂಬರ ಜೈನ ಶ್ರೀ ಪಾರ್ಶ್ವನಾಥಸ್ವಾಮಿ ಜಿನ ಮಂದಿರದ ಅಧ್ಯಕ್ಷ ಟಿ.ಡಿ. ಬಾಹುಬಲಿಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಯುಕ್ತ ೨೬ ಕುಟುಂಬಗಳಿಂದ ಪಾದಪ್ರಕ್ಷಾಲನೆ, ೨೬ ಕುಟುಂಬಗಳಿಂದ ಶಾಸ್ತ್ರದಾನ, ೨೬ ಕುಟುಂಬಗಳಿಂದ ಪಾದಪೂಜೆ ಹಾಗೂ ೨೬ ಕುಟುಂಬಗಳಿಂದ ಆರತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ತಿಂಗಳ ೩೧ರವರೆಗೆ ಪ್ರತಿದಿನ ನಗರದ ಜೈನ ಭವನದಲ್ಲಿ ಬೆಳಿಗ್ಗೆ ೭ ಗಂಟೆಗೆ ನಿತ್ಯವಿಧಿ ಪೂಜೆ, ೧೦೦೮ ಶ್ರೀ ಪಾರ್ಶ್ವನಾಥಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ನಂತರ ಧರ್ಮಸಭೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥಸ್ವಾಮಿ ಜಿನ ಮಂದಿರದ ಪ್ರಕಟಣೆ ತಿಳಿಸಿದೆ.
