ಮಕ್ಕಳ ದೇವರ ಮಠದಲ್ಲಿ ವಿಜಯದಶಮಿ ಆಚರಣೆ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ಮಕ್ಕಳ ದೇವರ ಮಠದಲ್ಲಿ ವಿಜಯದಶಮಿ ಆಚರಣೆ

tumkurnews.in
ತುಮಕೂರು: ಸಮೀಪದ ಕಣ್ಣೂರು ಮಕ್ಕಳ ದೇವರ ಮಠದಲ್ಲಿ ನವರಾತ್ರಿ ಉತ್ಸವ ಭಕ್ತಿ, ಸಡಗರದಿಂದ ನೆರವೇರಿತು. ಇದರ ಅಂಗವಾಗಿ ವಿಜಯದಶಮಿಯಂದು ಜೋಡಿ ಗ್ರಾಮವಾದ ಕಣ್ಣೂರು ಹಾಗೂ ಚೌಡಿ ಬೇಗೂರು ಗ್ರಾಮದ ಮಲ್ಲೇಶ್ವರಸ್ವಾಮಿ, ಬಸವೇಶ್ವರಸ್ವಾಮಿ ದೇವರುಗಳ ವೈಭವದ ಉತ್ಸವ ನಡೆಯಿತು.
ಕಣ್ಣೂರು ಮಕ್ಕಳ ದೇವರ ಮಠದ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಾಮೂಹಿಕ ಶಮಿ ಪೂಜೆ ನೆರವೇರಿತು. ಗ್ರಾಮದ ಜೋಡಿ ಪಟೇಲರಾದ ಜೈಶಂಕರ್ ಮತ್ತು ರುದ್ರೇಶ್ ಅವರು ಪೂಜಾ ವಿಧಿವಿಧಾನಗಳನ್ನು ನೆರೆಏರಿಸಿ ಬನ್ನಿ ಮರ ಕಡಿದು ಗ್ರಾಮಸ್ಥರಿಗೆ ಬನ್ನಿ ಪತ್ರೆ ವಿತರಿಸಿದರು.
ಈ ವೇಳೆ ಮಾತನಾಡಿದ ಮಕ್ಕಳ ಮಠದ ಮೃತ್ಯುಂಜಯ ಸ್ವಾಮೀಜಿ, ದೇವಸ್ಥಾನಗಳು ಗ್ರಾಮದ ಶ್ರದ್ಧಾ, ಧಾರ್ಮಿಕ ಕೇಂದ್ರಗಳು, ಗ್ರಾಮಸ್ಥರು ಭಾವೈಕ್ಯತೆಯಿಂದ ಸೇರಲು ಧರ್ಮ ಶ್ರದ್ಧೆ ಬೆಳೆಸಲು ದೇವಸ್ಥಾನ ಪವಿತ್ರ ತಾಣ ಎಂದರು.
ದುಷ್ಟ ಸಂಹಾರ ಮಾಡಿ ವಿಜಯ ಆಚರಿಸುವ ಆಚರಣೆಯಾಗಿ ವಿಜಯದಶಮಿ ಆಚರಿಸಲಾಗುತ್ತಿದೆ. ಮನುಷ್ಯನಲ್ಲಿ ಕೆಟ್ಟ ಗುಣವನ್ನು ಸಂಹಾರ ಮಾಡಿ ಸದ್ಗುಣ ರೂಢಿಸಿಕೊಳ್ಳುವ ಸಂಕೇತವಾಗಿ ವಿಜಯದಶಮಿ ಆಚರಿಸಲಾಗುತ್ತಿದೆ. ಮೈಸೂರು ಅರಸುರು ಆಚರಿಸಿದ ದಸರಾ ಇಂದು ಎಲ್ಲಾ ಗ್ರಾಮಗಳಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಹಿಂದೆ ರೈತರು ವ್ಯವಸಾಯ ಕೆಲಸಗಳಿಗೆ ಹೋಗುವಾಗ ತಮ್ಮ ಮಕ್ಕಳನ್ನು ಮಠದಲ್ಲಿ ಬಿಟ್ಟು ಹೋಗುತ್ತಿದ್ದರು. ಮಠದಲ್ಲಿ ಉಳಿಯುವ ಮಕ್ಕಳು ಸುರಕ್ಷಿತವಾಗಿ, ಸುಸಂಸ್ಕೃತವಾಗಿ ಬೆಳೆಯುತ್ತಾರೆ ಎಂಬ ನಂಬಿಕೆ ರೈತರಲ್ಲಿತ್ತು. ಆಗಿನಿಂದ ಈ ಮಠಕ್ಕೆ ಮಕ್ಕಳ ದೇವರ ಮಠ ಎಂದು ಹೆಸರು ಬಂದಿತು ಎಂದು ಸ್ವಾಮೀಜಿ ಹೇಳಿದರು.

Leave a Reply

Your email address will not be published. Required fields are marked *