ದಿ. ಎಸ್. ಬಂಗಾರಪ್ಪ ಹುಟ್ಟುಹಬ್ಬ ಆಚರಣೆ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ದಿ. ಎಸ್. ಬಂಗಾರಪ್ಪ ಹುಟ್ಟುಹಬ್ಬ ಆಚರಣೆ

ಆರ್ಯ ಈಡಿಗರ ಸಂಘದಿಂದ ನಾಯಕನ ಕೊಡುಗೆ ಸ್ಮರಣೆ

Tumkurnews.in

ತುಮಕೂರು: ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರ ೯೪ನೇ ಹುಟ್ಟುಹಬ್ಬವನ್ನು ನಗರದ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಆಚರಿಸಲಾಯಿತು. ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂಘದ ಪದಾಧಿಕಾರಿಗಳು ಗೌರವ ಸಲ್ಲಿಸಿದರು.

ಆರ್ಯ ಈಡಿಗ ಸಮಾಜದ ನಾಯಕರೂ ಆಗಿದ್ದ ಎಸ್. ಬಂಗಾರಪ್ಪ ಅವರು ರಾಜಕೀಯ ಕ್ಷೇತ್ರದ ಧ್ರುವತಾರೆಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಬಡವರು ಹಾಗೂ ಶೋಷಿತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಮುಖಂಡರು ಅವರ ಕೊಡುಗೆಗಳನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಜಂಟಿ ಕಾರ್ಯದರ್ಶಿ ರಾಮುಹಳ್ಳಿ ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಎಂ. ನಾಗರಾಜು, ಗೌರವಾಧ್ಯಕ್ಷ ಕೆ.ವಿ. ಅಜಯ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಉಪಾಧ್ಯಕ್ಷರಾದ ಆರ್. ನಾರಾಯಣಸ್ವಾಮಿ ಹಾಗೂ ಎಂ.ಎನ್. ನರಸಿಂಹಮೂರ್ತಿ, ಖಜಾಂಚಿ ಹೆಚ್.ಎಂ. ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಸಿ. ನಾರಾಯಣ್ ಹಾಗೂ ಓ.ಎಲ್. ಪುರುಷೋತ್ತಮ್, ನಿರ್ದೇಶಕರಾದ ರವೀಂದ್ರಕುಮಾರ್, ಎಸ್. ಆಂಜನೇಯುಲು, ಟಿ.ಎನ್. ದಾಕ್ಷಾಯಿಣಿ, ಗೌರಮ್ಮ ಶಾಂತಕುಮಾರ್, ಎನ್. ಮಂಜುನಾಥ್, ಎ.ಎನ್. ಮಂಜುನಾಥ್, ಟಿ.ಎಸ್. ನಾರಾಯಣಸ್ವಾಮಿ, ಸಮಾಜದ ಮುಖಂಡ ಕುಂದೂರು ಮುರಳಿ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *