ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ.71.56 ಮತದಾನ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ ರಾಜಕೀಯ

ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ.71.56 ಮತದಾನ

Tumkurnews.in
ತುಮಕೂರು: ಜಿಲ್ಲೆಯಲ್ಲಿ ಇಂದು ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈ ವಾರ್ಷಿಕ ಚುನಾವಣೆಯಲ್ಲಿ ಶೇ.71.56ರಷ್ಟು ಮತದಾನವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಶೇ. ೭೧.೫೬ ಮತದಾನ: ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ೨೧೨೨೬ ಪುರುಷ ಹಾಗೂ ೧೪೫೯೯ ಮಹಿಳಾ ಮತದಾರರು ಸೇರಿ ಒಟ್ಟು ೩೫೮೨೫ ಮತದಾರರು ಮತ ಚಲಾಯಿಸಿದ್ದು, ಜಿಲ್ಲೆಯಲ್ಲಿ ಶೇ.೭೧.೫೬ರಷ್ಟು ಮತದಾನವಾಗಿದೆ. ಪಾವಗಡ ತಾಲ್ಲೂಕಿನಲ್ಲಿ ೩೪೬೦ (೨೩೬೭ ಪುರುಷ, ೧೦೯೩ ಮಹಿಳೆಯರು), ಮಧುಗಿರಿ ತಾಲ್ಲೂಕು- ೩೧೨೯ (೧೯೯೪ ಪುರುಷ, ೧೧೩೫ ಮಹಿಳೆ), ಶಿರಾ ತಾಲ್ಲೂಕು-೩೯೭೧ (೨೪೦೫ ಪುರುಷ, ೧೫೬೬ ಮಹಿಳೆ), ಚಿಕ್ಕನಾಯಕನಹಳ್ಳಿ ತಾಲ್ಲೂಕು-೨೨೯೭ (೧೩೭೦ ಪುರುಷ, ೯೨೭ ಮಹಿಳೆ), ತಿಪಟೂರು ತಾಲ್ಲೂಕು-೩೦೬೫ (೧೭೫೪ ಪುರುಷ, ೧೩೧೧ ಮಹಿಳೆ), ತುರುವೇಕೆರೆ ತಾಲ್ಲೂಕು-೨೦೬೩ (೧೧೯೦ ಪುರುಷ, ೮೭೩ ಮಹಿಳೆ), ಕುಣಿಗಲ್ ತಾಲ್ಲೂಕು-೨೦೧೭ (೧೧೫೬ ಪುರುಷ, ೮೬೧ ಮಹಿಳೆ), ಗುಬ್ಬಿ ತಾಲ್ಲೂಕು-೩೦೨೯ (೧೭೬೨ ಪುರುಷ, ೧೨೬೭ ಮಹಿಳೆ), ತುಮಕೂರು ನಗರ-೭೦೭೫ (೩೮೫೧ ಪುರುಷ, ೩೨೨೪ ಮಹಿಳೆ), ತುಮಕೂರು ಗ್ರಾಮಾಂತರ-೩೫೬೮ (೨೦೫೮ ಪುರುಷ, ೧೫೧೦ ಮಹಿಳೆ) ಹಾಗೂ ಕೊರಟಗೆರೆ-೨೧೫೧ (೧೩೧೯ ಪುರುಷ, ೮೩೨ ಮಹಿಳೆ) ಮತದಾರರು ಮತ ಚಲಾಯಿಸಿದ್ದಾರೆ. ಭಾರತ ಚುನಾವಣಾ ಆಯೋಗವು ಘೋಷಿಸಿದ್ದ ವೇಳಾಪಟ್ಟಿಯಂತೆ ಜಿಲ್ಲೆಯ ೮೦ ಮತಗಟ್ಟೆಗಳಲ್ಲಿ ಶುಕ್ರವಾರ ಬೆಳಗ್ಗೆ ೮ ರಿಂದ ಸಂಜೆ ೪ ಗಂಟೆವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತದಾನದಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಚ್ಚಲಾಯಿತು.
ಅಭ್ಯರ್ಥಿಗಳ ವಿವರ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ಶಶಿ ಹುಲಿಕುಂಟೆಮಠ್, ಭಾರತೀಯ ಜನತಾ ಪಾರ್ಟಿಯಿಂದ ಕೆ.ಎಂ. ಸುರೇಶ(ಸೋಮೇಶ್ವರ), ಸರ್ವ ಜನತಾ ಪಾರ್ಟಿಯಿಂದ ಜಿ.ಸಿ. ಪಟೇಲ್, ಪಕ್ಷೇತರರಾಗಿ ಕಪನಿಗೌಡ, ಚಿಕ್ಕರಾಜು ಎಸ್. ಯಾದವ್, ಲಕ್ಷ್ಮಯ್ಯ ಆರ್.(ಆರ್.ಎಲ್.), ಲಕ್ಷ್ಮೀಕಾಂತ ಎಸ್. ಯಾದವ್, ಶಶಿ ಹುಲೀಕಟ್ಟಿ, ಸೈಯದ್ ಅಫಾಖ್ ಅಹಮದ್, ಅಡ್ವೊಕೇಟ್ ಬರೀದ್ ಸೇರಿದಂತೆ 10 ಮಂದಿ ಚುನಾವಣಾ ಕಣದಲ್ಲಿದ್ದರು.
ಜಿಲ್ಲೆಯಲ್ಲಿ ೨೮,೭೨೦ ಪುರುಷ ಹಾಗೂ ೨೧,೩೪೦ ಮಹಿಳಾ ಮತದಾರರು ಸೇರಿ ಒಟ್ಟು ೫೦,೦೬೦ ಅರ್ಹ ಮತದಾರರಿದ್ದರು. ಚುನಾವಣೆಯ ಮತ ಎಣಿಕೆಯು ಅಕ್ಟೋಬರ್ ೨೭ರಂದು ಬೆಂಗಳೂರಿನ ಡಾ: ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *