ರೈತನ ಭೂಮಿ ಹರಾಜು ವಿರೋಧಿಸಿ ನ. ೨ರಂದು ಬೃಹತ್ ಪ್ರತಿಭಟನೆ

ರೈತನ ಭೂಮಿ ಹರಾಜು ವಿರೋಧಿಸಿ ನ. ೨ರಂದು ಬೃಹತ್ ಪ್ರತಿಭಟನೆ Tumkurnews.in ತುಮಕೂರು: ನಿಯಮಬಾಹಿರವಾಗಿ ರೈತನ ಭೂಮಿಯನ್ನು ಬ್ಯಾಂಕ್ ಅಧಿಕಾರಿಗಳು ಹಾಗೂ ಬಿಡ್ಡುದಾರರು ಸೇರಿ ಕಬಳಿಸಲು ಹೊರಟಿರುವ ತುರುವೇಕೆರೆ ಕರ್ನಾಟಕ ಬ್ಯಾಂಕ್ ಶಾಖೆಯ ಕ್ರಮವನ್ನು ವಿರೋಧಿಸಿ, ರೈತನ ಭೂಮಿಯನ್ನು ವಾಪಸ್ ನೀಡಬೇಕು ಹಾಗೂ ಆನ್‌ಲೈನ್ ಹರಾಜು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ ೨ರಂದು ಸೋಮವಾರ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ. ಗೋವಿಂದರಾಜು […]

Continue Reading

ಹಿರಿಯ ನಾಗರಿಕರು ಆರೋಗ್ಯ ಕಾಪಾಡಿಕೊಳ್ಳಿ – ಡಾ. ವೈ.ಆರ್. ರಶ್ಮಿ

ಹಿರಿಯ ನಾಗರಿಕರು ಆರೋಗ್ಯ ಕಾಪಾಡಿಕೊಳ್ಳಿ – ಡಾ. ವೈ.ಆರ್. ರಶ್ಮಿ Tumkurnews.in ತುಮಕೂರು: ಎಲ್ಲರೂ ವೈದ್ಯರ ಸಲಹೆ ಮತ್ತು ನೆರವು ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಅದರಲ್ಲೂ ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಯಸ್ಸಾಗುತ್ತಿದ್ದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಸೂಕ್ತ ಸಮಯದಲ್ಲಿ ವೈದ್ಯರ ನೆರವು ಪಡೆಯಬೇಕು ಎಂದು ಸಿದ್ಧಗಂಗಾ ಮಠದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ವೈ.ಆರ್. ರಶ್ಮಿ ತಿಳಿಸಿದರು. ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ […]

Continue Reading

ಸಿದ್ಧಾರ್ಥ ದಂತ ಮಹಾವಿದ್ಯಾಲಯದಲ್ಲಿ ರ‍್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ

ಸಿದ್ಧಾರ್ಥ ದಂತ ಮಹಾವಿದ್ಯಾಲಯದಲ್ಲಿ ರ‍್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ Tumkurnews.in ತುಮಕೂರು: ವಿದ್ಯಾರ್ಥಿಗಳಲ್ಲಿ ರ‍್ಯಾಗಿಂಗ್‌ನ ಮಾರಕ ಪರಿಣಾಮಗಳ ಕುರಿತು ಅರಿವು ಮೂಡಿಸುವ ಹಾಗೂ ಸುರಕ್ಷಿತ ಕ್ಯಾಂಪಸ್ ವಾತಾವರಣವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಗರದ ಶ್ರೀ ಸಿದ್ಧಾರ್ಥ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ರ‍್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಕ್ಯಾಂಪಸ್‌ನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶ ಗಣೇಶ್ ಬಿ. ಉದ್ಘಾಟಿಸಿ ಮಾತನಾಡಿ, ಕ್ಯಾಂಪಸ್‌ನಲ್ಲಿ ರ‍್ಯಾಗಿಂಗ್ ತಡೆಗಟ್ಟುವ ಕ್ರಮಗಳು ಹಾಗೂ ವಿದ್ಯಾರ್ಥಿಗಳಿಗೆ ಎದುರಾಗುವ ಕಿರುಕುಳ, ಬೆದರಿಕೆ […]

Continue Reading

ವಿಶ್ವ ಸೆರೆಬ್ರಲ್ ಪಾಲ್ಸಿ ದಿನಾಚರಣೆ: ವೈವಿಧ್ಯತೆಯಲ್ಲಿ ಅನನ್ಯರು, ಒಗ್ಗಟ್ಟಿನಲ್ಲಿ ಒಂದಾದವರು

ವಿಶ್ವ ಸೆರೆಬ್ರಲ್ ಪಾಲ್ಸಿ ದಿನಾಚರಣೆ: ವೈವಿಧ್ಯತೆಯಲ್ಲಿ ಅನನ್ಯರು, ಒಗ್ಗಟ್ಟಿನಲ್ಲಿ ಒಂದಾದವರು Tumkurnews.in ತುಮಕೂರು, ಅ. ೨೯: ಸುಖದಲ್ಲಿ ಭಾಗಿಯಾಗುವ ವ್ಯಕ್ತಿಗಳಿಗಿಂತ ಮನುಷ್ಯನ ದುಃಖದಲ್ಲಿ ಪಾಲ್ಗೊಳ್ಳುವುದು ಅತ್ಯಂತ ಶ್ರೇಷ್ಠವಾದ ಕಾರ್ಯ. ಆ ಕೆಲಸವನ್ನು ಮೊಬಿಲಿಟಿ ಇಂಡಿಯಾ ಸಂಸ್ಥೆ ಮಾಡುತ್ತಿದೆ. ವಿಕಲಚೇತನರು ಹಾಗೂ ವಿವಿಧ ರೀತಿಯ ನ್ಯೂನತೆಗಳಿಗೆ ತುತ್ತಾಗಿರುವ ಜನರ ಸೇವೆಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದ್ದು, ಇದು ಶ್ಲಾಘನೀಯ ಕಾರ್ಯ ಎಂದು ಭಾರತೀಯ ವೈದ್ಯಕೀಯ ಸಂಘದ ತುಮಕೂರು ಜಿಲ್ಲಾ ಕಾರ್ಯದರ್ಶಿ ಡಾ. ಅರ್ಜುನ್ ವಿ.ಎ. ಅಭಿಪ್ರಾಯಪಟ್ಟರು. ನಗರದ ಐಎಂಎ ಹಾಲ್‌ನಲ್ಲಿ ಮೊಬಿಲಿಟಿ […]

Continue Reading

ದಟ್ಟ ಮಂಜು, ಮೈಕೊರೆವ ಚಳಿಗೆ ತತ್ತರಿಸಿದ ಕಲ್ಪತರುನಾಡು

ದಟ್ಟ ಮಂಜು, ಮೈಕೊರೆವ ಚಳಿಗೆ ತತ್ತರಿಸಿದ ಕಲ್ಪತರುನಾಡು Tumkurnews.in ತುಮಕೂರು: ಮಳೆಯಿಲ್ಲದೆ ಕಂಗೆಟ್ಟಿರುವ ಜನತೆಗೆ ಕಳೆದ ಎರಡು-ಮೂರು ದಿನಗಳಿಂದ ಮೈಕೊರೆವ ಚಳಿ ಶುರುವಾಗಿದ್ದು, ಇಂದು ಬೆಳಗ್ಗೆಯೇ ಕಲ್ಪತರುನಾಡಲ್ಲಿ ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ವಾಹನ ಸವಾರರು ಸುಗಮವಾಗಿ ಸಂಚರಿಸಲಾಗದೆ ಪರದಾಡುವಂತಾಯಿತು. ಕಳೆದ ಎರಡು-ಮೂರು ದಿನಗಳಿಂದ ಥಂಡಿ, ಚಳಿ ದುಪ್ಪಟ್ಟಾಗಿದ್ದು, ಸೂರ್ಯನ ರಶ್ಮಿ ಭೂಮಿಗೆ ತಾಗದಷ್ಟರ ಮಟ್ಟಿಗೆ ಇಂದು ಬೆಳಿಗ್ಗೆ ೬ ಗಂಟೆಯಿಂದಲೇ ದಟ್ಟ ಮಂಜು ಆವರಿಸಿತ್ತು. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಕ್ಕಪಕ್ಕದ ಮನೆಗಳು ಕಾಣದಷ್ಟರ […]

Continue Reading

ತುಮಕೂರು: ಗೃಹಿಣಿ ಅನುಮಾನಸ್ಪದ ಸಾವು

ಗೃಹಿಣಿ ಅನುಮಾನಸ್ಪದ ಸಾವು Tumkurnews.in ತುಮಕೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೋರ್ವಳ ಶವ ಪತ್ತೆಯಾಗಿರುವ ಘಟನೆ ತಾಲೂಕಿನ ಯಲ್ಲಾಪುರದಲ್ಲಿ ನಡೆದಿದೆ. ಸುಷ್ಮಿತಾ (24) ಮೃತ ಗೃಹಿಣಿ. ಮಾಗಡಿ ತಾಲೂಕು ತಾವರೆಕೆರೆ ಹೊನಗನಹಟ್ಟಿ ಮೂಲದ ಸುಷ್ಮಿತಾ ಪತಿಯೊಂದಿಗೆ ಯಲ್ಲಾಪುರದಲ್ಲಿ ವಾಸವಿದ್ದರು. ಮಂಗಳವಾರ ರಾಮನಗರದ ಮಾಗಡಿಯ ಚಿಕ್ಕಪ್ಪನ ಮನೆಗೆ ಹೋಗಿದ್ದ ಸುಷ್ಮಿತಾ, ಬುಧವಾರ ಗಂಡನ ಮನೆ ವಾಪಸ್ ಬಂದಿದ್ದಳು. ಅದೇ ದಿನ ಸಂಜೆ ಮನೆಯಲ್ಲಿ ಗಲಾಟೆಯಾಗಿದೆ ಆಸ್ಪತ್ರೆಗೆ ಬನ್ನಿ ಎಂದು ಸುಷ್ಮಿತಾಳ ಸಂಬಂಧಿಕರಿಗೆ ಪತಿ ಮನೆ ಕಡೆಯಿಂದ ದೂರವಾಣಿ ಕರೆ […]

Continue Reading

ತುಮಕೂರು: ಅರಾಜಕತೆ ಸೃಷ್ಟಿಸಿ ದೇಶದ ಅಧಿಕಾರ ಹಿಡಿಯಲು ಬಿಡುವುದಿಲ್ಲ: ಶೋಭಾ ಕರಂದ್ಲಾಜೆ ವಾಗ್ದಾಳಿ

ಅರಾಜಕತೆ ಸೃಷ್ಟಿಸಿ ದೇಶದ ಅಧಿಕಾರ ಹಿಡಿಯಲು ಬಿಡುವುದಿಲ್ಲ: ಶೋಭಾ ಕರಂದ್ಲಾಜೆ ವಾಗ್ದಾಳಿ Tumkurnews.in ತುಮಕೂರು: ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಅಧಿಕಾರ ಹಿಡಿಯ ಬಹುದು ಎಂದು ಕಾಂಗ್ರೆಸ್ ಒಕ್ಕೂಟ ಮಾಡುತ್ತಿರುವ ಪ್ರಯತ್ನ ಫಲಿಸುವುದಿಲ್ಲ, ಪ್ರಜಾತಂತ್ರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವವರಿಗೆ ದೇಶದ ಜನ ಅಧಿಕಾರದ ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಬಗ್ಗೆ […]

Continue Reading

ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್‌ಗೆ ಜಯಭೇರಿ: ವಿಜಯೋತ್ಸವ

ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್‌ಗೆ ಜಯಭೇರಿ: ವಿಜಯೋತ್ಸವ ಮೈತ್ರಿ ಪಕ್ಷಗಳ ಸಮನ್ವಯದ ಶ್ರಮಕ್ಕೆ ಸಂದ ಜಯ: ಜಿ.ಬಿ. ಜ್ಯೋತಿಗಣೇಶ್ Tumkurnews.in ತುಮಕೂರು: ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು 23 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ನಗರದ ಬಿಜಿಎಸ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. […]

Continue Reading

ತುಮಕೂರು: ಅ.30ರಂದು ರಫ್ತು ಪ್ರೋತ್ಸಾಹ ಕಾರ್ಯಾಗಾರ

ಅ.30ರಂದು ರಫ್ತು ಪ್ರೋತ್ಸಾಹ ಕಾರ್ಯಾಗಾರ Tumkurnews.in ತುಮಕೂರು: ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಅಕ್ಟೋಬರ್ 30 ರಂದು ಬೆಳಗ್ಗೆ 9.30 ಗಂಟೆಗೆ ಡಿ.ಐ.ಸಿ. ಹಾಲ್, ಜಿಲ್ಲಾ ಕೈಗಾರಿಕಾ ಕೇಂದ್ರ, ತುಮಕೂರು ಇಲ್ಲಿ ಜವಳಿ ವಲಯದ ರಫ್ತು ಉದ್ದಿಮೆದಾರರಿಗೆ ಒಂದು ದಿನದ ರಫ್ತು ಪ್ರೋತ್ಸಾಹ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ತುಮಕೂರು-೫೭೨೧೦೨ ಅಥವಾ ದೂ.ವಾ.ಸಂ.೦೮೧೬-೨೨೭೫೩೭೦ಯನ್ನು ಸಂಪರ್ಕಿಸಬೇಕೆಂದು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ನಕಲಿ ಆಹಾರ, ಔಷಧಗಳ ವಿರುದ್ಧ ಜನಜಾಗೃತಿ ಅಭಿಯಾನ

ನಕಲಿ ಆಹಾರ, ಔಷಧಗಳ ವಿರುದ್ಧ ಜನಜಾಗೃತಿ ಅಭಿಯಾನ Tumkurnews.in ತುಮಕೂರು: ಹಾಲಪ್ಪ ಪ್ರತಿಷ್ಠಾನ ತುಮಕೂರು ವತಿಯಿಂದ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಬೀದಿಬದಿ ವ್ಯಾಪಾರಿಗಳ ಸಂಘ, ಔಷಧ ವ್ಯಾಪಾರಿಗಳ ಸಂಘ ಹಾಗೂ ಇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಕಲಿ ಮತ್ತು ಕಲಬೆರಕೆ ಆಹಾರ ಹಾಗೂ ಔಷಧಗಳ ಕುರಿತು ಜನಜಾಗೃತಿ ಅಭಿಯಾನವನ್ನು ನಗರದ ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಅಭಿಯಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ, ಔಷಧ ಮತ್ತು ಆಹಾರಕ್ಕೆ ನೇರ ಸಂಬಂಧವಿದೆ. ಕಲಬೆರಕೆಯಿಲ್ಲದ, ರುಚಿಕರ […]

Continue Reading