ಗೃಹಿಣಿ ಅನುಮಾನಸ್ಪದ ಸಾವು
Tumkurnews.in
ತುಮಕೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೋರ್ವಳ ಶವ ಪತ್ತೆಯಾಗಿರುವ ಘಟನೆ ತಾಲೂಕಿನ ಯಲ್ಲಾಪುರದಲ್ಲಿ ನಡೆದಿದೆ.
ಸುಷ್ಮಿತಾ (24) ಮೃತ ಗೃಹಿಣಿ.
ಮಾಗಡಿ ತಾಲೂಕು ತಾವರೆಕೆರೆ ಹೊನಗನಹಟ್ಟಿ ಮೂಲದ ಸುಷ್ಮಿತಾ ಪತಿಯೊಂದಿಗೆ ಯಲ್ಲಾಪುರದಲ್ಲಿ ವಾಸವಿದ್ದರು. ಮಂಗಳವಾರ ರಾಮನಗರದ ಮಾಗಡಿಯ ಚಿಕ್ಕಪ್ಪನ ಮನೆಗೆ ಹೋಗಿದ್ದ ಸುಷ್ಮಿತಾ, ಬುಧವಾರ ಗಂಡನ ಮನೆ ವಾಪಸ್ ಬಂದಿದ್ದಳು. ಅದೇ ದಿನ ಸಂಜೆ ಮನೆಯಲ್ಲಿ ಗಲಾಟೆಯಾಗಿದೆ ಆಸ್ಪತ್ರೆಗೆ ಬನ್ನಿ ಎಂದು ಸುಷ್ಮಿತಾಳ ಸಂಬಂಧಿಕರಿಗೆ ಪತಿ ಮನೆ ಕಡೆಯಿಂದ ದೂರವಾಣಿ ಕರೆ ಹೋಗಿದೆ. ಆಸ್ಪತ್ರೆಗೆ ಬಂದು ನೋಡಿದಾಗ ಸುಷ್ಮಿತಾ ಮೃತಪಟ್ಟಿರುವುದು ಗೊತ್ತಾಗಿದೆ. ಘಟನೆ ಹಿನ್ನೆಲೆಯಲ್ಲಿ ಮೃತಳ ತಾಯಿ ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಅಳಿಯನ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು, ಅಂತರಸನಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಷ್ಮಿತಾಳ ಪತಿ ಶ್ರೀನಿವಾಸನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ಸುಷ್ಮಿತಾಳ ಮೂರು ವರ್ಷದ ಹೆಣ್ಣು ಮಗು ಅನಾಥವಾಗಿದ್ದು, ತನಿಖೆ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ.
