ಚಿರತೆಯನ್ನು ಸುಟ್ಟು ಹಾಕಿದ ಮೂವರು ಅರೆಸ್ಟ್; ಮತ್ತಷ್ಟು ಜನರ ಬಂಧನ ಸಾಧ್ಯತೆ
Tumkurnews
ತುಮಕೂರು: ಉರುಳಿಗೆ ಬಿದ್ದ ಚಿರತೆಯನ್ನು ಸುಟ್ಟು ಹಾಕಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳು ಮೂವರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
ತುಮಕೂರು ತಾಲ್ಲೂಕಿನ ಕೋರಾ ಹೋಬಳಿಯ ಗೌರಗೊಂಡನಹಳ್ಳಿಯ ಜಮೀನಿನಲ್ಲಿ ಹಂದಿ ಬೇಟೆಯಾಡಲು ಹಾಕಿದ್ದ ಉರುಳಿನಲ್ಲಿ ಚಿರತೆ ಸೆರೆಯಾಗಿದೆ. ಉರುಳಿನಲ್ಲಿ ಸಿಕ್ಕಿ ಚಿರತೆ ಮೃತಪಟ್ಟಿದ್ದು, ಆರೋಪಿಗಳು ಅದನ್ನು ತಮ್ಮ ಜಮೀನಿನಲ್ಲಿ ಸುಟ್ಟು ಹಾಕಿದ್ದಾರೆ. ಅಷ್ಟರಲ್ಲಾಗಲೇ ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಚಂದ್ರಶೇಖರ್, ಶಿವಕುಮಾರ್ ಮತ್ತು ನಾರಾಯಣಪ್ಪ ಎಂಬ ಮೂವರನ್ನು ಬಂಧಿಸಿದ್ದಾರೆ. ಅರೆ ಬೆಂದ ಸ್ಥಿತಿಯಲ್ಲಿದ್ದ ಚಿರತೆಯ ಕಳೆಬರವನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದ್ದು, ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ.
What do you feel about this post?
0%
Like
0%
Love
0%
Happy
0%
Haha
0%
Sad
0%
