ಜಯನಗರ ಪೊಲೀಸ್ ಠಾಣೆ : ೩ ಪ್ರತ್ಯೇಕ ಕಾಣೆ ಪ್ರಕರಣ ದಾಖಲು   

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ 🫆 ಕ್ರೈಮ್
ಜಯನಗರ ಪೊಲೀಸ್ ಠಾಣೆ : ೩ ಪ್ರತ್ಯೇಕ ಕಾಣೆ ಪ್ರಕರಣ ದಾಖಲು   
tumkurnews.in
ತುಮಕೂರು: ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ೩ ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಪ್ರಕರಣ-೧: ಉಪ್ಪಾರಹಳ್ಳಿಯಲ್ಲಿರುವ ಅಮೇರಿಕನ್ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ೩೪ ವರ್ಷದ ಶಶಿಧರ್ ಎಂಬ ವ್ಯಕ್ತಿಯು ಮೇ ೧೧ರಂದು ಕಾಣೆಯಾಗಿದ್ದಾನೆ. ಈತನು ೫.೫ ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾನೆ.
ಪ್ರಕರಣ-೨: ಸಿದ್ದರಾಮೇಶ್ವರ ಬಡಾವಣೆಯಲ್ಲಿರುವ ತನ್ನ ಮಾವನ ಮನೆಯಿಂದ ಸುಮಾರು ೨೦ ವರ್ಷದ ಅನುಷಾ ಕೆ. ಎಂಬ ಮಹಿಳೆಯು ಆಗಸ್ಟ್ ೨೧ರಂದು ಕಾಣೆಯಾಗಿದ್ದಾಳೆ. ಈಕೆಯು ೫ ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಗಲ್ಲದ ಮೇಲೆ ಕಪ್ಪು ಮಚ್ಚೆ ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾಳೆ.
ಪ್ರಕರಣ-೩: ಮಂಜುನಾಥ ನಗರ, ೬ನೇ ಕ್ರಾಸ್‌ನಲ್ಲಿರುವ ತನ್ನ ಮನೆಯಿಂದ ಸುಮಾರು ೨೪ ವರ್ಷದ ಕೀರ್ತನ ಎಂಬ ಮಹಿಳೆಯು ಆಗಸ್ಟ್ ೨೭ರಂದು ಕಾಣೆಯಾಗಿದ್ದಾಳೆ. ಈಕೆಯು ೫ ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಗಲ್ಲ ಮತ್ತು ಹಣೆಯ ಮೇಲೆ ಹಳೆ ಗಾಯದ ಗುರುತು ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ನೀಲಿ, ಹಸಿರು ಬಣ್ಣದ ಚೂಡಿದಾರ್, ನೀಲಿ ಬಣ್ಣದ ವೇಲ್ ಧರಿಸಿದ್ದಳು.
ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ದೂ.ವಾ.ಸಂ. ೦೮೧೬-೨೨೯೩೩೮೯, ಮೊ.ಸಂ. ೯೪೮೦೮೦೨೯೮೬-೩೨-೦೦ಯನ್ನು ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
**
ನಂದನ್ ಕುಮಾರ್ ಕಾಣೆ
ತುಮಕೂರು: ಕುಣಿಗಲ್ ತಾಲ್ಲೂಕು ಅಮೃತೂರು ಹೋಬಳಿ ಉಂಗ್ರ ಗ್ರಾಮದ ಸುಮಾರು ೨೨ ವರ್ಷದ ನಂದನ್ ಕುಮಾರ್ ಎಂಬ ಯುವಕನು ಜುಲೈ ೯ರಂದು ಬೆಂಗಳೂರಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವನು ಮರಳಿ ಬಾರದೆ ಕಾಣೆಯಾಗಿದ್ದಾನೆ ಎಂದು ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಣೆಯಾದ ಯುವಕನು ೫.೫ ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ತೆಳ್ಳನೆ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ.
ನಂದನ್ ಕುಮಾರ್ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ವಾ.ಸಂ. ೦೮೧೩೨-೨೨೩೩೩೮/ ೨೨೦೨೨೯, ೦೮೧೬-೨೨೭೨೪೫೧ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
**
ಅಪರಿಚಿತ ಶವ ಪತ್ತೆ
ತುಮಕೂರು: ಜಯನಗರ ಪೊಲೀಸ್ ಠಾಣೆ ವ್ಯಾಪ್ತಿ ಶೆಟ್ಟಿಹಳ್ಳಿ ಕಂದಕಟ್ಟೆ ಕೆರೆಯ ನೀರಿನಲ್ಲಿ ಅಕ್ಟೋಬರ್ ೧೮ರಂದು ಸುಮಾರು ೪೫ ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ.
ಮೃತನು ೫.೫ ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು, ಎಡಗೈ ಮೇಲೆ ‘ಖ’ ಎಂದು ಟ್ಯಾಟೋ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ವಾ.ಸಂ. ೦೮೧೬-೨೨೯೩೩೮೯, ಮೊ.ಸಂ. ೯೪೮೦೮೦೨೯೩೨-೮೬ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ರಾಣಿ ಚೆನ್ನಮ್ಮ ಜನ್ಮ ಜಯಂತಿ, ೨೦೨ನೇ ವಿಜಯೋತ್ಸವ ಆಚರಣೆ
ತುಮಕೂರು: ಪ್ರತೀ ವರ್ಷದಂತೆ ನವದೆಹಲಿಯ ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ರಾಣಿ ಚೆನ್ನಮ್ಮನವರ ಜನ್ಮ ಜಯಂತಿ ಮತ್ತು ೨೦೨ನೇ ವಿಜಯೋತ್ಸವವನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಹಾಗೂ ತುಮಕೂರು ಸಂಸದ ವಿ. ಸೋಮಣ್ಣ ಅವರ ನೇತೃತ್ವದಲ್ಲಿಂದು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಸಂಸದ  ಪಿ.ಸಿ. ಮೋಹನ್, ಡಾ. ಸುಧಾಕರ್, ಮಾಜಿ ಸಚಿವ ಮುರಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಕೂಡಲಸಂಗಮದ ಪೂಜ್ಯ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಹಾಗೂ ರಾಜ್ಯ ಮತ್ತು ದೆಹಲಿಯಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಕನ್ನಡಿಗರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿ. ಸೋಮಣ್ಣ ಅವರು, ರಾಷ್ಟç ಕಂಡ ಅಪ್ರತಿಮ ಮಹಿಳಾ ಸೇನಾನಿ, ಕಿತ್ತೂರು ಸಂಸ್ಥಾನದ ವೀರವನಿತೆ ರಾಣಿ ಚೆನ್ನಮ್ಮನವರ ಜನ್ಮದಿನೋತ್ಸವ ಹಾಗೂ ಬ್ರಿಟಿಷರ ವಿರುದ್ಧದ ೨೦೨ನೇ ವರ್ಷದ ವಿಜಯೋತ್ಸವದ ಸಂಭ್ರಮದಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದರು.
“ಕಿತ್ತೂರು ರಾಣಿ ಚೆನ್ನಮ್ಮ ಕೇವಲ ಯುದ್ಧ ಮಾಡಿದ ರಾಣಿಯಲ್ಲ, ಅವರು ಒಂದು ಸಾಮ್ರಾಜ್ಯಶಾಹಿ ಶಕ್ತಿಗೆ ಸವಾಲೆಸೆದು, ಪ್ರತಿರೋಧದ ಅಮರ ಸಂಕೇತವಾಗಿ ಇತಿಹಾಸದಲ್ಲಿ ಉಳಿದ ವೀರ ಮಹಿಳೆ. ಇಂತಹ ವೀರ ಮಹಿಳೆಯ ಸಾಧನೆಯನ್ನು ಸಂಭ್ರಮಿಸುವ ಅವಕಾಶ ನಮಗೆ ಸಿಕ್ಕಿರುವುದು ಅತ್ಯಂತ ಸಂತೋಷದ ಸಂಗತಿ” ಎಂದು ಸಚಿವರು ನುಡಿದರು.
ವೀರವನಿತೆ ರಾಣಿ ಚೆನ್ನಮ್ಮನವರ ಶೌರ್ಯ, ಧೈರ್ಯ, ಕಿಚ್ಚು ಇಂದು ದೇಶ ಕಾಯುವ ವೀರರಿಗೆ ಸ್ಫೂರ್ತಿ. ಪ್ರತಿವರ್ಷವೂ ನಾವೆಲ್ಲರೂ ಸೇರಿ ಇಂತಹ ಮಹನೀಯರನ್ನು ನೆನೆಯೋಣ” ಎಂದು ಮನವಿ ಮಾಡಿದರು

Leave a Reply

Your email address will not be published. Required fields are marked *