ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಸಭೆ 

ಜಿಲ್ಲಾ ಸುದ್ದಿ ತುಮಕೂರು ನಗರ ಪ್ರಮುಖ ಸುದ್ದಿ

ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಸಭೆ 

tumkurnews.in 

ತುಮಕೂರು: ತುಮಕೂರು ನಗರದ ವಿಜ್ಞಾನ ಕೇಂದ್ರದಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

ಪ್ರಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಇಂದು ಪ್ರಮುಖ ಮೂರು ವಿಚಾರಗಳನ್ನಿಟ್ಟುಕೊಂಡು ಈ ಸಭೆಯನ್ನು ಆಯೋಜಿಸಲಾಗಿದೆ. ತುರುವೇಕೆರೆ ತಾಲೂಕು ಕಸಬಾ ಹೋಬಳಿ ತಾಳೆಕೆರೆ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ನಾಗರಾಜು ಎಂಬುವವರ ಭೂಮಿಯನ್ನು ಲಿಖಿತ ಒಪ್ಪಂದದ ನಡುವೆಯೂ ಇ ಟೆಂಡರ್ ಮೂಲಕ ಪರಭಾರೆ ಮಾಡಿರುವ ಕರ್ನಾಟಕ ಬ್ಯಾಂಕಿನ ವಿರುದ್ದ ಹೋರಾಟ ರೂಪಿಸುವುದು, ರೈತ ಸಂಘದ ಕಾರ್ಯಕರ್ತರಿಗೆ ತರಬೇತಿ ಕಾರ್ಯಾಗಾರ ಏರ್ಪಡಿಸುವುದು ಹಾಗೂ ಮುಂಬರುವ ಜಿ.ಪಂ., ತಾ.ಪಂ ಚುನಾವಣೆಗಳಲ್ಲಿ ರೈತ ಸಂಘದ ಕಾರ್ಯಕರ್ತರು ಸ್ಪರ್ಧಿಸುವ ಹಿನ್ನೆಲೆಯಲ್ಲಿ ಚರ್ಚಿ ನಡೆಸಿ,ಪಟ್ಟಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ತುರುವೇಕೆರೆ ತಾಲೂಕು ಕಸಬಾ ಹೋಬಳಿ ತಾಳೆಕೆರೆ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ನಾಗರಾಜು ಎಂಬುವವರು 2005 ರಲ್ಲಿ ತನ್ನ ಐದು ಎಕರೆ ಭೂಮಿಯನ್ನು ಅಡಮಾನ ಮಾಡಿ, ತುರುವೇಕೆರೆ ಪಟ್ಟಣದ ಕರ್ನಾಟಕ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು, ಕೆಲವೊಂದಿಷ್ಟು ಸಾಲ ತೀರಿಸಿದ್ದಾರೆ.ಆದರೆ ಮನೆಯಲ್ಲಿನ ತೊಂದರೆ, ಮಳೆಯ ಕೊರತೆ ಮತ್ತಿತರರ ಕಾರಣಗಳಿಂದ ಸಾಲವನ್ನು ಸಂಪೂರ್ಣವಾಗಿ ಕಟ್ಟಲು ಸಾಧ್ಯವಾಗಿಲ್ಲ. ಬ್ಯಾಂಕಿನವರು ನಾಗರಾಜು ಅವರ ಸುಮಾರು 3-4 ಕೋಟಿ ಬೆಲೆ ಬಾಳುವ ಐದು ಎಕರೆ ಭೂಮಿಯ ಮೇಲೆ 34,80,000 ರೂಗಳಿಗೆ ಡಿಕ್ರಿ ತಂದು, ಇ ಟೆಂಡರ್ ಮೂಲಕ ಆಂದ್ರ ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು.

ಇದನ್ನು ಖಂಡಿಸಿ ರೈತ ಸಂಘದ ಇಡೀ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಬ್ಯಾಂಕಿನ ಎದುರು ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮದ್ಯ ಪ್ರವೇಶಿಸಿ, ಮಾರ್ಗದರ್ಶಿ ಬ್ಯಾಂಕ್ ಮೂಲಕ ಮಾತುಕತೆಗೆ ವ್ಯವಸ್ಥೆ ಮಾಡಿದ್ದರು. ಮಾತುಕತೆಯ ವೇಳೆ ಕರ್ನಾಟಕ ಬ್ಯಾಂಕಿನ ಹಿರಿಯ ಅಧಿಕಾರಿಗಳು, 8 ಲಕ್ಷ ರೂಗಳನ್ನು ನಾಗರಾಜು ಅವರು ಪಾವತಿಸಿದರೆ ಅವರ ಜಮೀನಿನ ಮಾರಾಟವನ್ನು ರದ್ದು ಪಡಿಸಿ, ಭೂಮಿಯನ್ನು ಹಿಂದಿರುಗಿಸುವ ಭರವಸೆ ನೀಡಿದ್ದರು. ರೈತ ನಾಗರಾಜು ಅಂದೇ ಐದು ಲಕ್ಷ ರೂಗಳ ಡಿಡಿಯನ್ನು ಸಾಲದ ಸಲುವಾಗಿ ಬ್ಯಾಂಕಿಗೆ ನೀಡಿದ್ದರು.ಆದಾದ ಒಂದೆರಡು ತಿಂಗಳ ನಂತರ ಮತ್ತೊಮ್ಮೆ ರೈತ ಸಂಘದ ಮುಖಂಡರೊAದಿಗೆ ಮಾತುಕತೆ ಮಾಡಿ,8 ಲಕ್ಷ ರೂಗಳಿಗೆ ಬದಲಾಗಿ 12 ಲಕ್ಷ ರೂಗಳನ್ನು ಕಟ್ಟುವಂತೆ ಬೇಡಿಕೆ ಸಲ್ಲಿಸಿದ್ದರು. ಇದಕ್ಕೂ ಒಪ್ಪಿದ ರೈತ ಸಂಘದ ಮುಖಂಡರುಗಳು ಮತ್ತು ರೈತ ನಾಗರಾಜು, 12 ಲಕ್ಷ ರೂ ಕಟ್ಟುವ ಪ್ರಯತ್ನ ನಡೆಸುತ್ತಿರುವಾಗ, ಬಿಡ್ಡುದಾರರು ಮತ್ತು ಬ್ಯಾಂಕಿನ ಅಧಿಕಾರಿಗಳ ಸೇರಿ ಹೈಕೋರ್ಟಿನಲ್ಲಿ ರಿಟ್ ಹಾಕಿ,ತಮ್ಮಂತೆ ಡಿಕ್ರಿ ಮಾಡಿಸಿಕೊಂಡು ಬಂದು ಜಮೀನಿಗೆ ಪ್ರವೇಶಿಸಲು ಮುಂದಾಗಿದ್ದಾರೆ.ಲಿಖಿತ ಭರವಸೆಯನ್ನು ಉಲ್ಲಂಘಿಸಿ,ಆರ್.ಬಿ.ಐ ನ ನಿಯಮಗಳನ್ನು ಉಲ್ಲಂಘಿಸಿ, ಇ ಟೆಂಡರ್ ಮೂಲಕ ಸಾಲಗಾರ ರೈತನ ಭೂಮಿಯನ್ನು ಪರಭಾರೆ ಮಾಡಿರುವ ರೈತನ ಭೂಮಿಯನ್ನು ಪುನಃ ಹಿಂದಿರುಗಿಸಬೇಕು. ಹಾಗೆಯ ಇ ಟೆಂಡರ್ ರದ್ದು ಮಾಡಿ, ಹಿಂದಿನAತೆ ಬಹಿರಂಗ ಹರಾಜು ಮಾಡಬೇಕೆಂದು ಒತ್ತಾಯಿಸಿ 2026ರ ನವೆಂಬರ್ 02 ರಂದು ತುರುವೇಕೆರೆಯ ಕರ್ನಾಟಕ ಬ್ಯಾಂಕಿನ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ತುರುವೇಕೆರೆಯ ಕರ್ನಾಟಕ ಬ್ಯಾಂಕಿನ ಎದುರು 2026ರ ನವೆಂಬರ್ 02 ರಂದು ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ನಾಯಕರಾದ ಬಡಗಲಪುರ ನಾಗೇಂದ್ರ ಸೇರಿದಂತೆ ಎಲ್ಲಾ ಜಿಲ್ಲೆಗಳ ರೈತ ಮುಖಂಡರು, ಜಿಲ್ಲೆಯ ಎಲ್ಲಾ ರೈತ ಸಂಘದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.ಬ್ಯಾಂಕ್ ಅಧಿಕಾರಿಗಳು ಕೊಟ್ಟ ಮಾತಿನಂತೆ ರೈತನಿಗೆ ಭೂಮಿ ಹಿಂದಿರುಗಿಸಬೇಕು.ಹಾಗೆಯೇ ಸರಕಾರ ಇ ಟೆಂಡರ್ ರದ್ದು ಮಾಡಿ, ಹಿಂದಿನತೆ ಬಹಿರಂಗ ಹರಾಜು ಪ್ರಕ್ರಿಯೆ ಜಾರಿ ಮಾಡಬೇಕೆಂಬುದು ರೈತ ಸಂಘದ ಪ್ರಮುಖ ಬೇಡಿಕೆಯಾಗಿದೆ ಎಂದು ಎ.ಗೋವಿಂದರಾಜು ನುಡಿದರು.

ಸುಮಾರು 40 ವರ್ಷಗಳ ಹಿಂದೆ ಉದಯವಾದ ರೈತ ಸಂಘದ ಇತ್ತೀಚಿನ ಕಾರ್ಯಕರ್ತರಿಗೆ ರೈತ ಸಂಘದ ತತ್ವ ಸಿದ್ದಾಂತಗಳು, ಹೋರಾಟದ ರೂಪುರೇಷೆಗಳ ಬಗ್ಗೆ ತರಬೇತಿ ನೀಡುವ ನಿಟ್ಟಿನಲ್ಲಿ ಆಯ್ದ 400 ಜನ ಕಾರ್ಯಕರ್ತರಿಗೆ ಆದಿ ಚುಂಚನಗಿರಿಯಲ್ಲಿ 2026ರ ನವೆಂಬರ್ ಕೊನೆಯವಾರ ಇಲ್ಲವೇ, ಡಿಸೆಂಬರ್ ಮೊದಲ ವಾರದಲ್ಲಿ ತರಬೇತಿ ಕಾರ್ಯಾಗಾರ ಎರ್ಪಡಿಸಲು ತೀರ್ಮಾನ ಕೈಗೊಳ್ಳಲಾಯಿತು. ಅಲ್ಲದೆ ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸುವ ರೈತ ಸಂಘದ ಕಾರ್ಯಕರ್ತರು ಮತ್ತು ಮುಖಂಡರು, ತಮ್ಮ ಹೆಸರು ನೀಡಿ, ಅಗತ್ಯ ಸಿದ್ದತೆ ಮಾಡಿಕೊಳ್ಳಲು ಸಹ ಸೂಚನೆ ನೀಡಿರುವುದಾಗಿ ಗೋವಿಂದರಾಜು ತಿಳಿಸಿದರು.

ಸಭೆಯಲ್ಲಿ ವಿಭಾಗೀಯ ಕಾರ್ಯದರ್ಶಿ ದೊಡ್ಡ ಮಾಳಯ್ಯ,ಗುಬ್ಬಿ ತಾಲೂಕು ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಲೋಕೇಶ್, ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಮಹಿಳಾ ಅಧ್ಯಕ್ಷ ನಾಗರತ್ನಮ್ಮ, ತುರುವೇಕೆರೆ ತಾಲೂಕು ಅಧ್ಯಕ್ಷ ಶ್ರೀನಿವಾಸ್,ರವೀಶ್, ಯುವ ಘಟಕದ ಮಂಜು, ತಿಮ್ಮೇಗೌಡ, ಮೋಹನ್‌ಕುಮಾರ್, ನರಸಿಂಹಮೂರ್ತಿ, ವಿವಿಧ ತಾಲೂಕು ಸಮಿತಿಗಳ ಮುಖಂಡರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಸಭೆ

tumkurnews.in
ತುಮಕೂರು: ತುಮಕೂರು ನಗರದ ವಿಜ್ಞಾನ ಕೇಂದ್ರದಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಪ್ರಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಇಂದು ಪ್ರಮುಖ ಮೂರು ವಿಚಾರಗಳನ್ನಿಟ್ಟುಕೊಂಡು ಈ ಸಭೆಯನ್ನು ಆಯೋಜಿಸಲಾಗಿದೆ. ತುರುವೇಕೆರೆ ತಾಲೂಕು ಕಸಬಾ ಹೋಬಳಿ ತಾಳೆಕೆರೆ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ನಾಗರಾಜು ಎಂಬುವವರ ಭೂಮಿಯನ್ನು ಲಿಖಿತ ಒಪ್ಪಂದದ ನಡುವೆಯೂ ಇ ಟೆಂಡರ್ ಮೂಲಕ ಪರಭಾರೆ ಮಾಡಿರುವ ಕರ್ನಾಟಕ ಬ್ಯಾಂಕಿನ ವಿರುದ್ದ ಹೋರಾಟ ರೂಪಿಸುವುದು, ರೈತ ಸಂಘದ ಕಾರ್ಯಕರ್ತರಿಗೆ ತರಬೇತಿ ಕಾರ್ಯಾಗಾರ ಏರ್ಪಡಿಸುವುದು ಹಾಗೂ ಮುಂಬರುವ ಜಿ.ಪಂ., ತಾ.ಪಂ ಚುನಾವಣೆಗಳಲ್ಲಿ ರೈತ ಸಂಘದ ಕಾರ್ಯಕರ್ತರು ಸ್ಪರ್ಧಿಸುವ ಹಿನ್ನೆಲೆಯಲ್ಲಿ ಚರ್ಚಿ ನಡೆಸಿ,ಪಟ್ಟಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ತುರುವೇಕೆರೆ ತಾಲೂಕು ಕಸಬಾ ಹೋಬಳಿ ತಾಳೆಕೆರೆ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ನಾಗರಾಜು ಎಂಬುವವರು 2005 ರಲ್ಲಿ ತನ್ನ ಐದು ಎಕರೆ ಭೂಮಿಯನ್ನು ಅಡಮಾನ ಮಾಡಿ, ತುರುವೇಕೆರೆ ಪಟ್ಟಣದ ಕರ್ನಾಟಕ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು, ಕೆಲವೊಂದಿಷ್ಟು ಸಾಲ ತೀರಿಸಿದ್ದಾರೆ.ಆದರೆ ಮನೆಯಲ್ಲಿನ ತೊಂದರೆ, ಮಳೆಯ ಕೊರತೆ ಮತ್ತಿತರರ ಕಾರಣಗಳಿಂದ ಸಾಲವನ್ನು ಸಂಪೂರ್ಣವಾಗಿ ಕಟ್ಟಲು ಸಾಧ್ಯವಾಗಿಲ್ಲ. ಬ್ಯಾಂಕಿನವರು ನಾಗರಾಜು ಅವರ ಸುಮಾರು 3-4 ಕೋಟಿ ಬೆಲೆ ಬಾಳುವ ಐದು ಎಕರೆ ಭೂಮಿಯ ಮೇಲೆ 34,80,000 ರೂಗಳಿಗೆ ಡಿಕ್ರಿ ತಂದು, ಇ ಟೆಂಡರ್ ಮೂಲಕ ಆಂದ್ರ ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು.
ಇದನ್ನು ಖಂಡಿಸಿ ರೈತ ಸಂಘದ ಇಡೀ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಬ್ಯಾಂಕಿನ ಎದುರು ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮದ್ಯ ಪ್ರವೇಶಿಸಿ, ಮಾರ್ಗದರ್ಶಿ ಬ್ಯಾಂಕ್ ಮೂಲಕ ಮಾತುಕತೆಗೆ ವ್ಯವಸ್ಥೆ ಮಾಡಿದ್ದರು. ಮಾತುಕತೆಯ ವೇಳೆ ಕರ್ನಾಟಕ ಬ್ಯಾಂಕಿನ ಹಿರಿಯ ಅಧಿಕಾರಿಗಳು, 8 ಲಕ್ಷ ರೂಗಳನ್ನು ನಾಗರಾಜು ಅವರು ಪಾವತಿಸಿದರೆ ಅವರ ಜಮೀನಿನ ಮಾರಾಟವನ್ನು ರದ್ದು ಪಡಿಸಿ, ಭೂಮಿಯನ್ನು ಹಿಂದಿರುಗಿಸುವ ಭರವಸೆ ನೀಡಿದ್ದರು. ರೈತ ನಾಗರಾಜು ಅಂದೇ ಐದು ಲಕ್ಷ ರೂಗಳ ಡಿಡಿಯನ್ನು ಸಾಲದ ಸಲುವಾಗಿ ಬ್ಯಾಂಕಿಗೆ ನೀಡಿದ್ದರು.ಆದಾದ ಒಂದೆರಡು ತಿಂಗಳ ನಂತರ ಮತ್ತೊಮ್ಮೆ ರೈತ ಸಂಘದ ಮುಖಂಡರೊಂದಿಗೆ ಮಾತುಕತೆ ಮಾಡಿ,8 ಲಕ್ಷ ರೂಗಳಿಗೆ ಬದಲಾಗಿ 12 ಲಕ್ಷ ರೂಗಳನ್ನು ಕಟ್ಟುವಂತೆ ಬೇಡಿಕೆ ಸಲ್ಲಿಸಿದ್ದರು. ಇದಕ್ಕೂ ಒಪ್ಪಿದ ರೈತ ಸಂಘದ ಮುಖಂಡರುಗಳು ಮತ್ತು ರೈತ ನಾಗರಾಜು, 12 ಲಕ್ಷ ರೂ ಕಟ್ಟುವ ಪ್ರಯತ್ನ ನಡೆಸುತ್ತಿರುವಾಗ, ಬಿಡ್ಡುದಾರರು ಮತ್ತು ಬ್ಯಾಂಕಿನ ಅಧಿಕಾರಿಗಳ ಸೇರಿ ಹೈಕೋರ್ಟಿನಲ್ಲಿ ರಿಟ್ ಹಾಕಿ,ತಮ್ಮಂತೆ ಡಿಕ್ರಿ ಮಾಡಿಸಿಕೊಂಡು ಬಂದು ಜಮೀನಿಗೆ ಪ್ರವೇಶಿಸಲು ಮುಂದಾಗಿದ್ದಾರೆ.ಲಿಖಿತ ಭರವಸೆಯನ್ನು ಉಲ್ಲಂಘಿಸಿ,ಆರ್.ಬಿ.ಐ ನ ನಿಯಮಗಳನ್ನು ಉಲ್ಲಂಘಿಸಿ, ಇ ಟೆಂಡರ್ ಮೂಲಕ ಸಾಲಗಾರ ರೈತನ ಭೂಮಿಯನ್ನು ಪರಭಾರೆ ಮಾಡಿರುವ ರೈತನ ಭೂಮಿಯನ್ನು ಪುನಃ ಹಿಂದಿರುಗಿಸಬೇಕು. ಹಾಗೆಯ ಇ ಟೆಂಡರ್ ರದ್ದು ಮಾಡಿ, ಹಿಂದಿನಂತೆ ಬಹಿರಂಗ ಹರಾಜು ಮಾಡಬೇಕೆಂದು ಒತ್ತಾಯಿಸಿ 2026ರ ನವೆಂಬರ್ 02 ರಂದು ತುರುವೇಕೆರೆಯ ಕರ್ನಾಟಕ ಬ್ಯಾಂಕಿನ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ತುರುವೇಕೆರೆಯ ಕರ್ನಾಟಕ ಬ್ಯಾಂಕಿನ ಎದುರು 2026ರ ನವೆಂಬರ್ 02 ರಂದು ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ನಾಯಕರಾದ ಬಡಗಲಪುರ ನಾಗೇಂದ್ರ ಸೇರಿದಂತೆ ಎಲ್ಲಾ ಜಿಲ್ಲೆಗಳ ರೈತ ಮುಖಂಡರು, ಜಿಲ್ಲೆಯ ಎಲ್ಲಾ ರೈತ ಸಂಘದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.ಬ್ಯಾಂಕ್ ಅಧಿಕಾರಿಗಳು ಕೊಟ್ಟ ಮಾತಿನಂತೆ ರೈತನಿಗೆ ಭೂಮಿ ಹಿಂದಿರುಗಿಸಬೇಕು.ಹಾಗೆಯೇ ಸರಕಾರ ಇ ಟೆಂಡರ್ ರದ್ದು ಮಾಡಿ, ಹಿಂದಿನಂತೆ ಬಹಿರಂಗ ಹರಾಜು ಪ್ರಕ್ರಿಯೆ ಜಾರಿ ಮಾಡಬೇಕೆಂಬುದು ರೈತ ಸಂಘದ ಪ್ರಮುಖ ಬೇಡಿಕೆಯಾಗಿದೆ ಎಂದು ಎ.ಗೋವಿಂದರಾಜು ನುಡಿದರು.
ಸುಮಾರು 40 ವರ್ಷಗಳ ಹಿಂದೆ ಉದಯವಾದ ರೈತ ಸಂಘದ ಇತ್ತೀಚಿನ ಕಾರ್ಯಕರ್ತರಿಗೆ ರೈತ ಸಂಘದ ತತ್ವ ಸಿದ್ದಾಂತಗಳು, ಹೋರಾಟದ ರೂಪುರೇಷೆಗಳ ಬಗ್ಗೆ ತರಬೇತಿ ನೀಡುವ ನಿಟ್ಟಿನಲ್ಲಿ ಆಯ್ದ 400 ಜನ ಕಾರ್ಯಕರ್ತರಿಗೆ ಆದಿ ಚುಂಚನಗಿರಿಯಲ್ಲಿ 2026ರ ನವೆಂಬರ್ ಕೊನೆಯವಾರ ಇಲ್ಲವೇ, ಡಿಸೆಂಬರ್ ಮೊದಲ ವಾರದಲ್ಲಿ ತರಬೇತಿ ಕಾರ್ಯಾಗಾರ ಎರ್ಪಡಿಸಲು ತೀರ್ಮಾನ ಕೈಗೊಳ್ಳಲಾಯಿತು. ಅಲ್ಲದೆ ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸುವ ರೈತ ಸಂಘದ ಕಾರ್ಯಕರ್ತರು ಮತ್ತು ಮುಖಂಡರು, ತಮ್ಮ ಹೆಸರು ನೀಡಿ, ಅಗತ್ಯ ಸಿದ್ದತೆ ಮಾಡಿಕೊಳ್ಳಲು ಸಹ ಸೂಚನೆ ನೀಡಿರುವುದಾಗಿ ಗೋವಿಂದರಾಜು ತಿಳಿಸಿದರು.
ಸಭೆಯಲ್ಲಿ ವಿಭಾಗೀಯ ಕಾರ್ಯದರ್ಶಿ ದೊಡ್ಡ ಮಾಳಯ್ಯ,ಗುಬ್ಬಿ ತಾಲೂಕು ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಲೋಕೇಶ್, ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಮಹಿಳಾ ಅಧ್ಯಕ್ಷ ನಾಗರತ್ನಮ್ಮ, ತುರುವೇಕೆರೆ ತಾಲೂಕು ಅಧ್ಯಕ್ಷ ಶ್ರೀನಿವಾಸ್,ರವೀಶ್, ಯುವ ಘಟಕದ ಮಂಜು, ತಿಮ್ಮೇಗೌಡ, ಮೋಹನ್‌ಕುಮಾರ್, ನರಸಿಂಹಮೂರ್ತಿ, ವಿವಿಧ ತಾಲೂಕು ಸಮಿತಿಗಳ ಮುಖಂಡರು ಉಪಸ್ಥಿತರಿದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *