ಕವಿ ತನ್ನ ರಚನೆಗಳನ್ನು ಒಂದಿಕ್ಕಿಂತ ಒಂದು ಭಿನ್ನವಾಗಿರುವಂತೆ ನೋಡಿಕೊಂಡಾಗ ಮಾತ್ರ

ಜಿಲ್ಲಾ ಸುದ್ದಿ ತುಮಕೂರು ನಗರ ಪ್ರಮುಖ ಸುದ್ದಿ

ಕವಿ ತನ್ನ ರಚನೆಗಳನ್ನು ಒಂದಿಕ್ಕಿಂತ ಒಂದು ಭಿನ್ನವಾಗಿರುವಂತೆ ನೋಡಿಕೊಂಡಾಗ ಮಾತ್ರ

tumkurnews.in

ತುಮಕೂರು: ಕವಿ ಹೆಚ್ಚು ಪ್ರಚಲಿತ ವಿದ್ಯಾಮಾನಗಳನ್ನು ಪ್ರತಿನಿಧಿಸಲು ಸಾಧ್ಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಎಲ್.ಎಲ್. ಮುಕುಂದರಾಜ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತುಮಕೂರು ಜಿಲ್ಲಾಡಳಿತದಿಂದ ಆಯೋಜಿಸಿದ್ದ ತುಮಕೂರು ದಸರಾ-2026ರ ದಸರಾ ಕವಿಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಸೂಕ್ಷö್ಮ ಮನಸ್ಥಿತಿ ಹಾಗು ಆಗು, ಹೋಗುಗಳಿಗೆ ಸ್ಪಂದಿಸುವ ಗುಣವಿದ್ದರೆ ಆತ ಕವಿಯಾಗಲು ಯೋಗ್ಯ.ಆಂತಹ ಅನೇಕ ಜನರ ಕವಿಗಳು ಈ ಕಲ್ಪತರು ನಾಡಿನಲ್ಲಿ ಆಗಿ ಹೋಗಿದ್ದಾರೆ. ಈಗಲೂ ಇದ್ದಾರೆ ಎಂದರು.

ತುಮಕೂರು ನೆಲದ ಮಹಿಮೆ ಕವಿಗಳಿಗೆ ಹೇಳಿ ಮಾಡಿಸಿದಂತಿದೆ.ಕವಿಗಳಾದ ವೀ.ಚಿ,ಸಣ್ಣಗುಡ್ಡಯ್ಯ,ಸಿದ್ದಲಿಂಗಯ್ಯ, ಸಾ.ಶಿ.ಮರುಳಯ್ಯ, ಹೆಚ್.ಎಸ್.ಶಿವಪ್ರಕಾಶ್ ಸೇರಿದಂತೆ ಹಲವರು ಇಲ್ಲಿನ ಆಗು, ಹೋಗುಗಳಿಗೆ ದ್ವನಿಯಾಗಿದ್ದಾರೆ.ಯುವ ಕವಿಗಳು ಅಧ್ಯಯನದ ಕಡೆಗೆ ಗಮನಹರಿಸಬೇಕು.ಕುಮಾರವ್ಯಾಸ ಭಾರತವನ್ನು ಒದುವುದರಿಂದ ಕವಿತೆಗಳನ್ನು ಕಟ್ಟಲು ಸಾಧ್ಯವಿದೆ.ಪಂಪ,ರನ್ನರನ್ನು,ವಚನಗಳನ್ನು ಓದಿಕೊಳ್ಳುವುದರಿಂದ ಒಂದೇ ವಿಚಾರವನ್ನು ವಿಭಿನ್ನವಾಗಿ ನೋಡುವ ಒಳನೋಟ ದೊರೆಯಲಿದೆ.ಕವಿತೆಗೆ ಜನರನ್ನು ಸೆಳೆಯುವ ಗುಣ ಇರಬೇಕು.ಆಗ ಮಾತ್ರ ಓದುಗರಿಂದ ಅಭಿಪ್ರಾಯಗಳ ರೂಪದ ಸಲಹೆ ನಿರೀಕ್ಷಿಸಲು ಸಾಧ್ಯ ಎಂದು ಪ್ರೊ.ಎಲ್.ಎನ್.ಮುಕುಂದರಾಜ್ ನುಡಿದರು.

ದಸರಾ ಕವಿಗೋಷ್ಠಿ -2026 ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ,ತುಮಕೂರು ಜಿಲ್ಲೆ ಕಲೆ, ಸಾಹಿತ್ಯ, ಸಂಗೀತ, ನಾಟಕಗಳಿಗೆ ಹೆಸರುವಾಸಿಯಾಗಿದೆ.ವರ್ಷದಿಂದ ವರ್ಷಕ್ಕೆ ಬರಹಗಾರರ ಸಂಖ್ಯೆಯೂ ಹೆಚ್ಚುತ್ತಿದೆ.ಕವಿಗಳು, ಕಥೆಗಾರರು, ನಾಟಕಕಾರರಾಗಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ಒಂದು ವೇದಿಕೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಳೆದ ಮೂರು ವರ್ಷಗಳಿಂದ ದಸರಾ ಕವಿಗೋಷ್ಠಿ ಆಯೋಜಿಸುತ್ತಾ ಬಂದಿದೆ. ಈ ಬಾರಿ ಹಿರಿಯರ ಮತ್ತು ಕಿರಿಯರ ಎರಡು ವಿಭಾಗಗಳಲ್ಲಿ ಕವಿಗೋಷ್ಠಿ ಆಯೋಜಿಸಲಾಗಿದ್ದು, ಸಮಿತಿಗೆ ಬಂದ 155 ಕವಿಗಳಲ್ಲಿ ಹಿರಿಯ 38 ಮತ್ತು ಕಿರಿಯರ 18 ಕವಿತೆಗಳನ್ನು ವೇದಿಕೆಯ ಮೇಲೆ ಪ್ರಸ್ತುತಪಡಿಸಲು ಅವಕಾಶ ಕಲ್ಪಿಸಲಾಗಿದೆ. ತಾಯಿ, ಪ್ರಕೃತಿ, ದಸರಾ, ಹೋರಾಟ, ಪ್ರಸ್ತುತ ಆಗು, ಹೋಗುಗಳ ಕುರಿತು ಕವಿತೆಗಳನ್ನು ವಾಚನಕ್ಕೆ ಆಯ್ಕೆ ಮಾಡಲಾಗಿದೆ ಎಂದರು.

ತದನಂತರದಲ್ಲಿ ನಡೆದ ಕಿರಿಯರ ಕವಿಗೋಷ್ಠಿಯನ್ನು ಜಿಲ್ಲಾ ಪಂಚಾಯಿತಿ ಸಿಇಓ ಆಶ್ವಿಜ ಉದ್ಘಾಟಿಸಿ,ಉದಯೋನ್ಮುಖ ಕವಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಈಶ್ವರ್ ಕು ಮಿರ್ಜಿ, ಕಲಾಶ್ರೀ ಡಾ.ಲಕ್ಷö್ಮಣದಾಸ್,ಪಿಯು ಡಿಡಿ ರಾಧಾ, ಸಾ.ಚಿ.ರಾಜಕುಮಾರ್, ಹರೀಶ್ ಆಚಾರ್ಯ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷ ಡಾ.ಆಶಾ ಬಗ್ಗನಡು, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಮಲ್ಲಿಕಾರ್ಜುನ ಕೆಂಕೆರೆ, ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯರಾದ ನಾಗರಾಜ್.ಡಿ. ವೀರಲಗೊಂದಿ, ಗಮಕ ಕಲಾಶ್ರೀ ಎಂ.ಜಿ.ಸಿದ್ದರಾಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಡಾ.ಮುದ್ದುವೀರಪ್ಪ ಅವರ ನೊಂದವರ ಕಷ್ಟ, ಮಧುಸೂಧನ್ ಮುಳುಕುಂಟೆ ಅವರ ಅಂಬಾರಿಯೊಂದಿಗೆ ನ್ಯಾಯವೂ ಸಾಗಲಿ,ಡಾ.ಗಂಗಾಧರ ಕೊಡ್ಲಿ ಅವರ ಯುವಕರ ಹೋರಾಟಕ್ಕೆ ಮನ್ನಣೆ ದೊರೆಯಲಿ, ನರಸಿಂಹರಾಜು ಸಿರಿವರ ಅವರ ಗುಡ್ಡೆಬಾಡು ಕವಿತೆಗಳು ಗಮನ ಸೆಳೆದವು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *