ಮಕ್ಕಳ ದೇವರ ಮಠದಲ್ಲಿ ವಿಜಯದಶಮಿ ಆಚರಣೆ

ಮಕ್ಕಳ ದೇವರ ಮಠದಲ್ಲಿ ವಿಜಯದಶಮಿ ಆಚರಣೆ tumkurnews.in ತುಮಕೂರು: ಸಮೀಪದ ಕಣ್ಣೂರು ಮಕ್ಕಳ ದೇವರ ಮಠದಲ್ಲಿ ನವರಾತ್ರಿ ಉತ್ಸವ ಭಕ್ತಿ, ಸಡಗರದಿಂದ ನೆರವೇರಿತು. ಇದರ ಅಂಗವಾಗಿ ವಿಜಯದಶಮಿಯಂದು ಜೋಡಿ ಗ್ರಾಮವಾದ ಕಣ್ಣೂರು ಹಾಗೂ ಚೌಡಿ ಬೇಗೂರು ಗ್ರಾಮದ ಮಲ್ಲೇಶ್ವರಸ್ವಾಮಿ, ಬಸವೇಶ್ವರಸ್ವಾಮಿ ದೇವರುಗಳ ವೈಭವದ ಉತ್ಸವ ನಡೆಯಿತು. ಕಣ್ಣೂರು ಮಕ್ಕಳ ದೇವರ ಮಠದ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಾಮೂಹಿಕ ಶಮಿ ಪೂಜೆ ನೆರವೇರಿತು. ಗ್ರಾಮದ ಜೋಡಿ ಪಟೇಲರಾದ ಜೈಶಂಕರ್ ಮತ್ತು ರುದ್ರೇಶ್ ಅವರು ಪೂಜಾ ವಿಧಿವಿಧಾನಗಳನ್ನು ನೆರೆಏರಿಸಿ ಬನ್ನಿ […]

Continue Reading

ತುಮಕೂರು: ತೆಂಗಿನ ಮರ ಏರಿ ಕುಳಿತ ಚಿರತೆ

ತೆಂಗಿನ ಮರ ಏರಿ ಕುಳಿತ ಚಿರತೆ Tumkurnews.in ತುಮಕೂರು: ತಾಲ್ಲೂಕಿನ ತಿಮ್ಮಸಂದ್ರ ಹೊರವಲಯದಲ್ಲಿ ಗುರುವಾರ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯಲು ಸ್ಥಳಕ್ಕೆ ಹೋದಾಗ ತೆಂಗಿನ ಮರ ಏರಿ ಕುಳಿತು ಚಿರತೆ ಕೆಲ ಹೊತ್ತು ರಕ್ಷಣೆ ಪಡೆಯಿತು. ಅರಣ್ಯ ಇಲಾಖೆ ಅಧಿಕಾರಿಗಳು ನೀಡಿ ಚಿರತೆ ಸೆರೆ ಹಿಡಿಯಲು ಹರಸಾಹಸ ಪಟ್ಟರಾದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಚಿರತೆ ಮರದಿಂದ ಇಳಿದು ಅಧಿಕಾರಿಗಳಿಗೆ ಸಿಗದಂತೆ ತಪ್ಪಿಸಿಕೊಂಡು ಓಡಿ ಹೋಯಿತು.

Continue Reading

ಮೈಸೂರು ದಸರಾ ಮಾದರಿಯಲ್ಲೇ ಕಲ್ಪತರು ನಾಡು ತುಮಕೂರು

ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಕಲ್ಪತರುನಾಡು ತುಮಕೂರು tumkurnews.in ತುಮಕೂರು:ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಕಲ್ಪತರುನಾಡು ತುಮಕೂರಿನಲ್ಲಿ ೧೧ ದಿನಗಳ ಕಾಲ ವೈಭವೋಪೇತವಾಗಿ ಹಮ್ಮಿಕೊಂಡಿದ್ದ ತುಮಕೂರು ದಸರಾ ಅಂಗವಾಗಿ ಜಂಬೂಸವಾರಿ ಅತ್ಯಂತ ಅದ್ದೂರಿಯಾಗಿ ನಡೆಯಿತು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ೧೧ ದಿನಗಳ ಕಾಲ ಅದ್ದೂರಿಯಾಗಿ ತುಮಕೂರು ದಸರಾ ಉತ್ಸವ ನಡೆದಿದ್ದು, ವಿಜಯದಶಮಿಯ ದಿನವಾದ ಇಂದು ಮೈಸೂರು ಮಾದರಿಯಲ್ಲೇ ಅಂಬಾರಿ ಹೊತ್ತ ಆನೆಯೊಂದಿಗೆ ಜಂಬೂ ಸವಾರಿ ವೈಭವಯುತವಾಗಿ ನಡೆಯಿತು. ನಗರದ ಟೌನ್‌ಹಾಲ್ ವೃತ್ತದಲ್ಲಿ ಉಪಮುಖ್ಯಮಂತ್ರಿ ಡಾ. […]

Continue Reading

ಅಂತರಂಗದ ಶತ್ರು ನಾಶಕ್ಕೆ ಜ್ಞಾನವೇ ಆಯುಧ

ಅಂತರಂಗದ ಶತ್ರು ನಾಶಕ್ಕೆ ಜ್ಞಾನವೇ ಆಯುಧ: ಮಲಯಶಾಂತಮುನಿ ಶ್ರೀ ವೀರಶೈವ ಸಮಾಜದಿಂದ ವೈಭವದ ಶಮಿಪೂಜೆ, ದೇವರುಗಳ ಉತ್ಸವ tumkurnews.in ತುಮಕೂರು: ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ವಿಶೇಷವಾದದ್ದು. ಹಲವು ಜಾತಿ-ಧರ್ಮ, ಹಲವು ಭಾಷೆ, ಹಲವು ಸಂಸ್ಕೃತಿ ಒಳಗೊಂಡ ಭಾರತದಲ್ಲಿ ಐಕ್ಯತೆ ಮೂಡಿಸುವುದು ಕಷ್ಟದ ಕೆಲಸ ಆದರೆ, ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟದಂತೆ ನಾವು ಏಕತೆಯ ಪ್ರವೃತ್ತಿ ಬೆಳೆಸಿಕೊಂಡಾದ ಸಾಧ್ಯವಾಗುತ್ತದೆ ಎಂದು ಶಿವಗಂಗಾ ಕ್ಷೇತ್ರದ ಮೇಲಣಗವಿ ಸಂಸ್ಥಾನ ಮಠದ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತುಮಕೂರು ನಗರ […]

Continue Reading

ಪದವಿಧರರ ಕ್ಷೇತ್ರದ ಚುನಾವಣೆ

ಪದವಿಧರರ ಕ್ಷೇತ್ರದ ಚುನಾವಣೆ tumkurnews.in ತುಮಕೂರು: ಪದವಿಧರರ ಕ್ಷೇತ್ರದ ಚುನಾವಣೆ ಎಂದರೆ ಅದು ಪ್ರಜ್ಞಾವಂತರ ಚುನಾವಣೆ. ಹಾಗಾಗಿ ರಾಜಕೀಯ ಪಕ್ಷಗಳಿಂತ ಪದವಿಧರರ ಪರವಾಗಿ ಕೆಲಸ ಮಾಡುವ ಅಭ್ಯರ್ಥಿಗಳನ್ನು ಮತದಾರರ ಬೆಂಬಲಿಸುವ ಸಾಧ್ಯತೆ ಹೆಚ್ಚಿದ್ದು, ಈ ಬಾರಿಯ ಚುನಾವಣೆಯಲ್ಲಿ ಸ್ವಾತಂತ್ರ ಅಭ್ಯರ್ಥಿಯಾಗಿರುವ ಕ್ರಮ ಸಂಖ್ಯೆ 10ರ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸುವಂತೆ ಆಗ್ನೇಯ ಪದವಿಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಡ್ವೋಕೆಟ್ ಬರೀದ್ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2020ರ ಚುನಾವಣೆಯಲ್ಲಿ 1.08 ಲಕ್ಷ ಇದ್ದ ಮತದಾರರು, 2026ರಲ್ಲಿ 1.84 […]

Continue Reading

ಹಬ್ಬಗಳ ಆಚರಣೆಯಿಂದ ದೇಶಭಕ್ತಿ, ಧಾರ್ಮಿಕ ಚಿಂತನೆ ಜಾಗೃತಿ

ಹಬ್ಬಗಳ ಆಚರಣೆಯಿಂದ ದೇಶಭಕ್ತಿ, ಧಾರ್ಮಿಕ ಚಿಂತನೆ ಜಾಗೃತಿ: ಶಿವಸಿದ್ಧೇಶ್ವರ ಸ್ವಾಮೀಜಿ ತುಮಕೂರು ದಸರಾ ಸಮಿತಿಯ ದಸರಾ ಉತ್ಸವದ ಸಾಮೂಹಿಕ ಶಮಿಪೂಜೆ tumkurnews.in ತುಮಕೂರು: ತುಮಕೂರು ದಸರಾ ಸಮಿತಿಯ ೩೬ನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ಬುಧವಾರ ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಾಮೂಹಿಕ ಶಮಿಪೂಜಾ ಕಾರ್ಯಕ್ರಮ ಭಕ್ತಿ ಸಡಗರದಿಂದ ನೆರವೇರಿತು. ನಗರದ ಕೆ.ಆರ್. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಮೂರು ದಿನಗಳಿಂದ ನಡೆದ ದಸರಾ ಕಾರ್ಯಕ್ರಮದ ಕೊನೆದಿನದ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಶಿವಸಿದ್ಧೇಶ್ವರ ಸ್ವಾಮೀಜಿ, ರಾಷ್ಟçಭಕ್ತಿ, ಧಾರ್ಮಿಕ […]

Continue Reading

ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮ

ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮ ಸಂಘದ ಬೆಳವಣಿಗೆಗೆ ಸಹಕರಿಸಿದ ಹಿರಿಯ ಸದಸ್ಯರಿಗೆ ಗೌರವಾರ್ಪಣೆ tumkurnews.in ತುಮಕೂರು: ನಗರದ ಧಾನ್ಯ ವ್ಯಾಪಾರಿಗಳ ಸಂಘಕ್ಕೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಈ ತಿಂಗಳ ೨೫ರಂದು ಸಂಘದ ಶತಮಾನೋತ್ಸವ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಸಂಘದ ಬೆಳವಣಿಗೆಗೆ ಸಹಕರಿಸಿದ ಹಿರಿಯ ಸದಸ್ಯರನ್ನು, ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ಗೌರವಿಸಲಾಗುವುದು ಎಂದು ಧಾನ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಎಲ್. ಚಂದ್ರಕೀರ್ತಿ ತಿಳಿಸಿದರು. ಗುರುವಾರ ನಗರದ ಎಪಿಎಂಸಿ ಆವರಣದ ಸಂಘದ ಬಹುಧಾನ್ಯಸಿರಿ ಕಟ್ಟಡ […]

Continue Reading

ಕುಂಚಿಟಿಗ ಪದವೀಧರರು ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಅವರನ್ನು ಬೆಂಬಲಿಸಲು ಚಿದಾನಂದಗೌಡ ಮನವಿ

ಕುಂಚಿಟಿಗ ಪದವೀಧರರು ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಅವರನ್ನು ಬೆಂಬಲಿಸಲು ಚಿದಾನಂದಗೌಡ ಮನವಿ tumkurnews.in ತುಮಕೂರು: ಆಗ್ನೇಯ ಪದವಿಧರರ ಕ್ಷೇತ್ರ ಹಾಲಿ ಶಾಸಕರಾದ ಚಿದಾನಂದ.ಎಂ.ಗೌಡ ಅವರು ಎನ್.ಡಿ.ಎ ಅಭ್ಯರ್ಥಿ ಕೆ.ಎಂ.ಸುರೇಶ್ ಅವರ ಪರವಾಗಿ ಇಂದು ನಗರದ ಕುಂಚಿಟಿಗ ಭವನದಲ್ಲಿ ಸಮುದಾಯದ ಮುಖಂಡರ ಜೊತೆಗೆ ಸಭೆ ನಡೆಸಿದರು. ಕುಂಚಿಟಿಗ ಭವನದಲ್ಲಿ ಜಿಲ್ಲಾ ಕುಂಚಿಟಿಗರ ಸಂಘದ ಜಿಲ್ಲಾಧ್ಯಕ್ಷರಾದ ನೇತಾಜಿ ಶ್ರೀಧರ್ ಅವರ ಸಮ್ಮುಖದಲ್ಲಿ ಸಮುದಾಯದ ಹಿರಿಯರು, ಪದವಿಧರರ ಜೊತೆ ಸಭೆ ನಡೆಸಿದ ಚಿದಾನಂದ ಎಂ.ಗೌಡ ಅವರು, ಎನ್.ಡಿ.ಎ ಅಭ್ಯರ್ಥಿಯಾಗಿರುವ ಕೆ.ಎಂ.ಸುರೇಶ ಅವರಿಗೆ […]

Continue Reading

ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ ತುಮಕೂರು ದಸರಾ ಸಮಿತಿಯ ೩೬ನೇ ವರ್ಷದ ದಸರಾ ಉತ್ಸವ tumkurnews.in ತುಮಕೂರು: ತುಮಕೂರು ದಸರಾ ಸಮಿತಿಯ ೩೬ನೇ ವರ್ಷದ ೩ ದಿನಗಳ ದಸರಾ ಉತ್ಸವ ಕಾರ್ಯಕ್ರಮಗಳಿಗೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸೋಮವಾರ ಚಾಲನೆ ನೀಡಿದರು. ಕೆ.ಆರ್. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ಗಣಪತಿ ಪೂಜೆ, ದುರ್ಗಾ ಹೋಮ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ದಸರಾ ಸಮಿತಿ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಕಾರ್ಯಾಧ್ಯಕ್ಷ ಡಾ.ಜೆ. ಲಕ್ಷಿö್ಮಂಕಾಂತ್, […]

Continue Reading

ಕರವೇ ತಾಲ್ಲೂಕು ಪದಾಧಿಕಾರಿಗಳ ನೇಮಕ

ಕರವೇ ತಾಲ್ಲೂಕು ಪದಾಧಿಕಾರಿಗಳ ನೇಮಕ tumkurnews.in ತುಮಕೂರು: ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಯಾವುದೇ ಹೋರಾಟಕ್ಕೆ ಸಿದ್ಧರಿರಬೇಕು. ನಮ್ಮ ರಾಜ್ಯಾಧ್ಯಕ್ಷರಾದ ನಾರಾಯಣಗೌಡರ ಮಾರ್ಗದರ್ಶನದಲ್ಲಿ ವೇದಿಕೆಯನ್ನು ಸಂಘಟನೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತುಮಕೂರು ತಾಲ್ಲೂಕು ಅಧ್ಯಕ್ಷ ಲಿಂಗರಾಜು ಹೇಳಿದರು. ಭಾನುವಾರ ನಗರದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆಯ(ನಾರಾಯಣಗೌಡರ ಬಣ) ತುಮಕೂರು ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಮ್ಮ ವೇದಿಕೆ ಸದಸ್ಯರು ಕನ್ನಡದ ಕಟ್ಟಾಳುಗಳಾಗಿ ನಮ್ಮ […]

Continue Reading