ತೆಂಗಿನ ಮರ ಏರಿ ಕುಳಿತ ಚಿರತೆ
Tumkurnews.in
ತುಮಕೂರು: ತಾಲ್ಲೂಕಿನ ತಿಮ್ಮಸಂದ್ರ ಹೊರವಲಯದಲ್ಲಿ ಗುರುವಾರ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯಲು ಸ್ಥಳಕ್ಕೆ ಹೋದಾಗ ತೆಂಗಿನ ಮರ ಏರಿ ಕುಳಿತು ಚಿರತೆ ಕೆಲ ಹೊತ್ತು ರಕ್ಷಣೆ ಪಡೆಯಿತು. ಅರಣ್ಯ ಇಲಾಖೆ ಅಧಿಕಾರಿಗಳು ನೀಡಿ ಚಿರತೆ ಸೆರೆ ಹಿಡಿಯಲು ಹರಸಾಹಸ ಪಟ್ಟರಾದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಚಿರತೆ ಮರದಿಂದ ಇಳಿದು ಅಧಿಕಾರಿಗಳಿಗೆ ಸಿಗದಂತೆ ತಪ್ಪಿಸಿಕೊಂಡು ಓಡಿ ಹೋಯಿತು.
