‘ಪದವಿಪೂರ್ವ ಕಾಲೇಜುಗಳಲ್ಲಿ ರೋವರ್-ರೇಂಜರ್ ಘಟಕ ಕಡ್ಡಾಯ’

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

‘ಪದವಿಪೂರ್ವ ಕಾಲೇಜುಗಳಲ್ಲಿ ರೋವರ್-ರೇಂಜರ್ ಘಟಕ ಕಡ್ಡಾಯ’
ಜಿಲ್ಲೆಯ ಪ್ರಾಚಾರ್ಯರ ಮಾಹಿತಿ ಶಿಬಿರದಲ್ಲಿ ಉಪನಿರ್ದೇಶಕಿ ರಾಧ ಸೂಚನೆ

Tumkurnews.in
ತುಮಕೂರು: ಭಾರತ್ ಸೌಟ್ಸ್ ಮತ್ತು ಗೈಡ್ಸ್ ಆಂದೋಲನವು ಯುವ ಜನಾಂಗದಲ್ಲಿ ಶಿಸ್ತು ಮತ್ತು ಸೇವಾ ಮನೋಭಾವವನ್ನು ಪಾಲಿಸುವಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವಲ್ಲಿ, ಸ್ವತಂತ್ರವಾಗಿ ಮತ್ತು ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗಿದೆ. ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ರೋವರ್-ರೇಂಜರ್ ಘಟಕಗಳನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಕಿ ರಾಧಾ ಹೇಳಿದರು.
ಶುಕ್ರವಾರ ನಗರದ ಅನನ್ಯ ಕಾಲೇಜು ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಭಾರತ್ ಸೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆಯಿಂದ ಏರ್ಪಡಿಸಿದ್ದ ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರುಗಳಿಗೆ ಜಿಲ್ಲಾ ಮಟ್ಟದ ಸಾಮಾನ್ಯ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಭಾರತ್ ಸೈಟ್ಸ್ ಮತ್ತು ಗೈಡ್ಸ್ ಅಡಿಯಲ್ಲಿ ರೋವರ್ ಮತ್ತು ರೇಂಜರ್ ಘಟಕಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುತ್ತದೆ. ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಇಂತಹ ಘಟಕಗಳನ್ನು ಅರಂಭಿಸಿ ವಿದ್ಯಾರ್ಥಿಗಳು ಸ್ಕೌಟ್ಸ್, ಗೈಡ್ಸ್ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂದು ಪ್ರಾಂಶುಪಾಲರಿಗೆ ತಿಳಿಸಿದರು.
ದೇಶದ ಉತ್ತಮ ಯುವ ಪ್ರಜೆಗಳಾಗಲು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟಿರಿಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸುವ ಹಿನ್ನಲೆಯಲ್ಲಿ ಈ ಇಲಾಖೆಯ ವ್ಯಾಪ್ತಿಗೆ ಬರುವ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಎನ್.ಎಸ್.ಎಸ್. ಘಟಕದ ಜೊತೆಗೆ ದಿ ಭಾರತ್ ಸೌಟ್ ಮತ್ತು ಗೈಡ್‌ನ ರೋವರ್ ಮತ್ತು ರೇಂಜರ್ ಘಟಕಗಳನ್ನು ಪ್ರಾರಂಭಿಸಬೇಕು ಎಂದರು.
ರೋವರ್-ರೇಂಜರ್ ಘಟಕಗಳನ್ನು ಪ್ರಾರಂಭಿಸುವ ಮೊದಲು ಪ್ರತಿ ಘಟಕವನ್ನು ಮಾರ್ಗದರ್ಶನ ಮಾಡಲು ತಮ್ಮ ಕಾಲೇಜಿನ ಕ್ರಮವಾಗಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಉಪನ್ಯಾಸಕರು/ದೈಹಿಕ ಶಿಕ್ಷಣ ಅಧಿಕಾರಿ/ಗ್ರಂಥಪಾಲಕರು/ಪ್ರಯೋಗಾಲಯ ಸಿಬ್ಬಂದಿ/ಗುಮಾಸ್ತರು ರವರನ್ನು ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯವರು ನಡೆಸುವ ಏಳು/ಎಂಟು ದಿನಗಳ ಶಿಬಿರವಾಸ ತರಬೇತಿ ಪಡೆಯಲು ನಿಯೋಜಿಸಬೇಕು. ಸೈಟ್ ಮತ್ತು ಗೈಡ್ ಸಂಸ್ಥೆಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ರೋವರ್ ಮತ್ತು ರೇಂಜರ್ ಘಟಕ ನಾಯಕ-ನಾಯಕಿಯರ ಗೈರು ಹಾಜರಿ ಅವಧಿಯನ್ನು ಮತ್ತು ಪ್ರಯಾಣ ದಿನಗಳು ಸೇರಿದಂತೆ ಹಾಜರಿ ಪ್ರಮಾಣ ಪತ್ರ ಪಡೆದು ಅನ್ಯ ಕಾರ್ಯ ನಿಮಿತ್ತವೆಂದು ಪರಿಗಣಿಸಬೇಕು ಎಂದು ಉಪನಿರ್ದೇಶಕಿ ರಾಧಾ ಹೇಳಿದರು.
ಭಾರತ್ ಸೈಟ್ಸ್ ಮತ್ತು ಗೈಡ್ಸ್ನ ಅಂತರಾಷ್ಟಿರಿಯ ಹೆಚ್ಚುವರಿ ಆಯುಕ್ತರಾದ ಮಧುಸೂದನ್ ಆವಾಲ ಕಾರ್ಯಕ್ರಮ ಉದ್ಘಾಟಿಸಿ, ಭಾರತ್ ಸೈಟ್ಸ್ ಮತ್ತು ಗೈಡ್ಸ್ ಆಂದೋಲನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಅವರಲ್ಲಿ ಆದರ್ಶ ವ್ಯಕ್ತಿತ್ವ ನಿರ್ಮಾಣ, ಸೇವಾ ಮನೋಭಾವ, ದೇಶಪ್ರೇಮ ಮೂಡಿಸುವಂತಹ ಈ ಆಂದೋಲನದಲ್ಲಿ ಯುವಜನರು ಹೆಚ್ಚಾಗಿ ತೊಡಗಿಕೊಳ್ಳಬೇಕು ಎಂದು ಆಶಿಸಿದರು.
ರೋವರ್/ರೇಂಜರ್‌ಗಳ ಪ್ರಗತಿ ಪರ ಪದಕಗಳಾದ ಪ್ರವೀಣ್, ನಿಪುಣ್, ರಾಜ್ಯಪಾಲರ ಪದಕ, ರಾಷ್ಟ್ರಪತಿ ಪದಕ ಪಡೆಯಲು ಪ್ರೋತ್ಸಾಹಿಸಬೇಕು. ಇಂತಹ ಪದಕಗಳು ಅವರ ಗೌರವ ಹೆಚ್ಚಿಸುತವೆಯಲ್ಲದೆ ಆದರ್ಶ ಪ್ರಜೆಯಾಗಿ ರೂಪುಗೊಳ್ಳಲು ಅವಕಾಶವಿದೆ. ಕಾಲೇಜಿನ ಸೈಟ್ಸ್ ಮತ್ತು ಗೈಡ್ಸ್ನ ನೋಡಲ್ ಅಧಿಕಾರಿ, ಕಾಲೇಜಿನಲ್ಲಿ ಹಿರಿಯ ಉಪನ್ಯಾಸಕರು, ಮ್ಯಾನೇಜರ್/ಅಧೀಕ್ಷಕರು ಒಳಗೊಂಡಂತೆ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ನಿರ್ಣಯದಂತೆ ಈ ಘಟಕಗಳ ಕಾರ್ಯಚಟುವಟಿಕೆಗಳನ್ನು ಸಕ್ರಿಯವಾಗಿ ಹಮ್ಮಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತರು, ರಾಜ್ಯ ಉಪಾಧ್ಯಕ್ಷರಾದ ಆಶಾ ಪ್ರಸನ್ನಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಭಾರತ್ ಸೈಟ್ಸ್ ಮತ್ತು ಗೈಡ್ಸ್ ಸಂಪೂರ್ಣ ಪಠ್ಯೇತರ ಚುಟುವಟಿಕೆ. ಇದರಿಂದ ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು ರೂಢಿಸಿಕೊಳ್ಳಬಹುದು. ಅವರ ಸರ್ವತೋಮುಖ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಈ ಆಂದೋಲನ ಸಮಾಜಕ್ಕೆ ಸಲ್ಲಿಸುವ ದೊಡ್ಡ ಸೇವೆ ಎಂದು ಹೇಳಿದರು.
ಗೈಡ್ಸ್ನ ರಾಷ್ಟಯ ಆಯುಕ್ತರು ಹಾಗೂ ರಾಜ್ಯ ಸಹಾಯಕ ಆಯುಕ್ತರಾದ ರಾಧಾ ವೆಂಕಟೇಶ್, ಅನನ್ಯ ಸಮೂಹ ಸಂಸ್ಥೆಗಳ ಟ್ರಸ್ಟಿ ಹರೀಶ್, ಹೆಚ್, ಗೈಡ್ಸ್ನ ಜಿಲ್ಲಾ ಆಯುಕ್ತರಾಧ ಸುಭಾಷಿಣಿ ಆರ್. ಕುಮಾರ್, ಜಿಲ್ಲಾ ಆಯುಕ್ತರು, ಸ್ಕೌಟ್ಸ್ನ ಜಿಲ್ಲಾ ಆಯುಕ್ತ ಸುರೇಂದ್ರ ಷಾ, ಜಿಲ್ಲಾ ಕಾರ್ಯದರ್ಶಿ ಅಂಜನಪ್ಪ ಟಿ.ಎಸ್, ರಾಜ್ಯ ಸಂಘಟನಾ ಆಯುಕ್ತರಾದ ಮಂಜುಳಾ ಸಿ, ಜಿಲ್ಲಾ ಪ್ರಚಾರ್ಯರ ಸಂಘ ನೇ. ರಂ ನಾಗರಾಜು, ತರಬೇತುದಾರರಾದ ಗಂಗಾಧರ್, ಜಯಮ್ಮ ಸೇರಿದಂತೆ ಜಿಲ್ಲೆಯ ವಿವಿಧ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *