ನವರಾತ್ರಿಯ ಎಂಟನೇ ದಿವಸ ತುಂಬಾ ವಿಶೇಷ ವನ್ನು ಪಡೆದಿದೆ.
tumkurnews.in
ತುಮಕೂರು: ಶ್ರೀ ರಾಮಕೃಷ್ಣ ಮಠದ ಸಂಪ್ರದಾಯದಂತೆ ತಾಯಿ ದುರ್ಗೆಯ ಸುಂದರ ಅಲಂಕಾರ ಹಾಗೂ ವಿಶೇಷ ಪೂಜೆ ಮತ್ತು ಪಂಚಾರತಿಗಳೊಂದಿಗೆ ಶ್ರೀ ದುರ್ಗಾ ದೇವಿಯ ಭವ್ಯವಾದ, ಸುಂದರವಾದ, ಹಾಗೂ ಸುಶ್ರಾವ್ಯ ವಾದ ದೇವೀನಾಮ ಸಂಕೀರ್ತನೆ ಹಾಗೂ ಬಂಗಾಳಿ, ಸಂಸ್ಕೃತ, ಹಿಂದಿ, ಕನ್ನಡ ಭಾಷೆಗಳ ಸುಮಧುರ ಸಂಕೀರ್ತನೆಯೊಂದಿಗೆ ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದಲ್ಲಿ ನೆರವೇರಿತು. ಭಕ್ತಾದಿಗಳ ಸಮ್ಮುಖದಲ್ಲಿ ದುರ್ಗಾ ಪೂಜೆಯು ಯಶಸ್ವಿಯಾಗಿ ನೆರವೇರಿತು. ನಾಡಿನ ಜನತೆಯ ರಕ್ಷಣೆ, ಪೋಷಣೆ, ಸುಖ, ಸಂತೋಷ ಮತ್ತು ಸನಾತನ ಧರ್ಮದ ಪಾಲನೆಗಾಗಿ ಭವತಾರಿಣಿಮಾತೆಯಲ್ಲಿ ಬೇಡಲಾಯಿತು. ಭಗವಾನ್ ಶ್ರೀ ರಾಮಕೃಷ್ಣರ ಆರಾಧ್ಯದೇವತೆಯಾಗಿ ದಕ್ಷಿಣೇಶ್ವರದ ಜಾಗೃತದೇವಿ ಮಹಾಕಾಳಿಯಲ್ಲಿ ನಾಡಿನ ಸುಭೀಕ್ಷೆಗಾಗಿ ಹಾಗೂ ಮಳೆ, ಬೆಳೆಗಾಗಿ ಮತ್ತೆಲದಕ್ಕಿಂತ ಮನುಜರಲ್ಲಿ ಮಾನವೀಯ ಮೌಲ್ಯಗಳ ಭಾವನೆಗಳು ಹೆಚ್ಚಾಗಲಿ, ಮನುಷತ್ವದಿಂದ ದೈವತ್ವದೆಡೆಗೆ ಪಥಿಸುವಂತಾಗಲಿ ಎಂದು ಪ್ರಾರ್ಥಿಸಿಕೊಂಡದ್ದಾಗಿ ಪೂಜ್ಯ ಸ್ವಾಮಿ ಜಪಾನಂದಜಿ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು. ಭಗವಾನ್ ಶ್ರೀ ರಾಮಕೃಷ್ಣರು ಜಗಜ್ಜನನಿ ಭವತಾರಿಣಿಯ ಸಾಕ್ಷಾತ್ಕಾರದ ಅಪೂರ್ವ ಹಿನ್ನೆಲೆಯನ್ನು ಪೂಜ್ಯರು ತಮ್ಮ ಉಪನ್ಯಾಸದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ವಿವರಿಸಿದರು. ಒಟ್ಟಿನಲ್ಲಿ ಶ್ರೀ ದುರ್ಗಾಷ್ಟಮಿಯ ಪವಿತ್ರ ದಿನದಂದು “ಅಂತರಂಗದಲ್ಲಿ ಶ್ರೀ ಘನಶ್ಯಾಮೆ”ಯನ್ನು ನೆನೆದಂತಾಯಿತು ಈ ವಿಶೇಷ ಸಂಧರ್ಭ ಹಾಗೂ ಸತ್ಸಂಗ, ದೇವೀಣಾಮ ಸಂಕೀರ್ತನೆ. ತುಮಕೂರಿನ ವಿದ್ವಾನ್ ಮೋಹನ್ ತಬಲಾ, ಮಧುಗಿರಿಯ ಶ್ರೀ ಲಕ್ಷ್ಮಿಕಾಂತ್ ರವರು ಹೃದಂ ಪ್ಯಾಡ್ ನಲ್ಲಿ ಸಹಕಾರ ನೀಡಿದರು.
ಸಂಗೀತಮಯ ಸಂಕೀರ್ತನೆಯಿಂದ ಭಕ್ತಿಮಯ ವಾತಾವರಣ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ದೇವೀನಾಮ ಸಂಕೀರ್ತನೆಯು ವಿವಿಧ ಭಾಷೆಗಳ ಭಕ್ತಿಗೀತೆಗಳ ಮೂಲಕ ಭಕ್ತರ ಮನದಲ್ಲಿ ದೈವಿಕ ಅನುಭೂತಿಯನ್ನು ಮೂಡಿಸಿತು. ತುಮಕೂರಿನ ವಿದ್ವಾನ್ ಮೋಹನ್ ಅವರು ತಬಲಾ ವಾದನದ ಮೂಲಕ ಹಾಗೂ ಮಧುಗಿರಿಯ ಶ್ರೀ ಲಕ್ಷ್ಮಿಕಾಂತ್ ಅವರು ಹೃದಯಸ್ಪರ್ಶಿ ಹೃದಂ ಪ್ಯಾಡ್ ವಾದನದ ಮೂಲಕ ಸಂಕೀರ್ತನೆಗೆ ಸಂಗೀತಮಯ ಮೆರುಗು ನೀಡಿದರು.
ಭಜನೆ, ಸಂಕೀರ್ತನೆ ಮತ್ತು ಸತ್ಸಂಗದ ಮೂಲಕ ಭಕ್ತರು ದೇವಿಯ ನಾಮಸ್ಮರಣೆಯಲ್ಲಿ ತಲ್ಲೀನರಾದರು. ಭಕ್ತಿ, ಸಂಗೀತ ಮತ್ತು ಆಧ್ಯಾತ್ಮಿಕ ಚಿಂತನೆಗಳ ಸಂಗಮವು ಶ್ರೀ ದುರ್ಗಾಷ್ಟಮಿಯ ಪವಿತ್ರತೆಯನ್ನು ಮತ್ತಷ್ಟು ಹೆಚ್ಚಿಸಿತು.
What do you feel about this post?
Like
Love
Happy
Haha
Sad
