ತುಮಕೂರು: ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ: ಪಾಲಿಕೆ ಆಯುಕ್ತೆ ಪರಿಶೀಲನೆ
Tumkurnews.in
ತುಮಕೂರು: ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಮುಂಭಾಗದ ರಸ್ತೆಯ ಫುಟ್‌ಪಾತ್‌ನಲ್ಲಿ ಮಾರಾಟ ವಲಯ ಸ್ಥಾಪನೆ ಮಾಡಿ ಬೀದಿಬದಿ ವರ್ತಕರ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಶುಭ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಪಾಲಿಕೆ ಆಯುಕ್ತೆ ಶುಭ ಅವರು, ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಮುಂಭಾಗದ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಮಾರಾಟ ವಲಯ ಸ್ಥಾಪಿಸಿ ಅವರ ಜೀವನೋಪಾಯಕ್ಕೆ ಸಹಕಾರ ನೀಡಲು ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ನಗರದ ಎಂ.ಜಿ. ರಸ್ತೆ ಮತ್ತು ವಿವೇಕಾನಂದ ರಸ್ತೆಯ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಮುಂಭಾಗ ರಸ್ತೆ ಫುಟ್‌ಪಾತ್‌ನಲ್ಲಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಫುಡ್ ಸ್ಟ್ರೀಟ್ ಸಹ ಆರಂಭಿಸಲಾಗುವುದು ಎಂದರು.
ಸದ್ಯಕ್ಕೆ ಈ ರಸ್ತೆಯಲ್ಲಿ ವ್ಯಾಪಾರ ತುಂಬಾ ತೀರಾ ಕಡಿಮೆಯಾಗುತ್ತಿದೆ ಎಂದು ಫುಟ್‌ಪಾತ್ ವ್ಯಾಪಾರಿಗಳು ಹೇಳುತ್ತಿದ್ದಾರೆ. ಈ ಭಾಗದಲ್ಲಿ ಫುಡ್ ಸ್ಟ್ರೀಟ್ ಆರಂಭಿಸುವ ಚಿಂತನೆ ಇರುವುದರಿಂದ ಮುಂದಿನ ದಿನಗಳಲ್ಲಿ ಜನಸಂದಣಿ ಹೆಚ್ಚಾಗಿ ವ್ಯಾಪಾರ ನಡೆಯುವ ನಿರೀಕ್ಷೆಯಿದೆ ಎಂದರು.
ಈ ರಸ್ತೆಯ ಎರಡು ಕಡೆಗಳಲ್ಲಿ ಆಟೋ ನಿಲ್ದಾಣ ಸ್ಥಾಪನೆ ಮಾಡಲಾಗುತ್ತಿದೆ. ಜತೆಗೆ ಜಗಜೀವನರಾಮ್ ಭವನ ಕೂಡಾ ನಿರ್ಮಾಣವಾಗುತ್ತಿದೆ.ಈ ರಸ್ತೆಯ ಎರಡೂ ಕಡೆಯಿಂದ ಪ್ರಯಾಣಿಕರು ಓಡಾಡುವುದರಿಂದ ಫುಟ್‌ಪಾತ್ ವ್ಯಾಪಾರಿಗಳಿಗೆ ವ್ಯಾಪಾರ ಮಾಮೂಲಿನಂತೆ ಆಗುವ ಸಾಧ್ಯತೆ ಇದೆ ಎಂದರು.
ಈ ರಸ್ತೆಯನ್ನು ಮಾರಾಟ ವಲಯ (ವೆಂಡಿಂಗ್ ಜೋನ್) ಎಂದು ಪಾಲಿಕೆ ವತಿಯಿಂದ ಘೋಷಣೆ ಮಾಡಿದ್ದೇವೆ. ಈ ರಸ್ತೆಯಲ್ಲಿರುವ ಯುಜಿಡಿ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಒಂದು ವೇಳೆ ಈ ರಸ್ತೆಯಲ್ಲಿನ ಫುಟ್‌ಪಾತ್ ವ್ಯಾಪಾರಿಗಳಿಗೆ ವ್ಯಾಪಾರ ಕಡಿಮೆಯಾಗುತ್ತಿದ್ದರೆ ಕೌಶಲ್ಯಾಭಿವೃದ್ಧಿ ವತಿಯಿಂದ ಸಾಲ ಸೌಲಭ್ಯದ ವ್ಯವಸ್ಥೆ ಇದೆ. ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಬೇರೆ ರೀತಿಯ ವ್ಯಾಪಾರವನ್ನು ಸಹ ಆರಂಭಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಬಸ್ಸುಮ್ ಜಹೇರಾ, ಕೌನ್ಸಿಲ್ ಸೆಕ್ರೆಟರಿ ನಜ್ಮಾ, ಬೀದಿಬದಿ ವ್ಯಾಪಾರಿಗಳು ಇದ್ದರು.
131 ಕೋಟಿ ರೂ. ವೆಚ್ಚದಲ್ಲಿ ತುಮಕೂರಿಗೆ ಹೊಸ ಜಿಲ್ಲಾಸ್ಪತ್ರೆ: ಪರಮೇಶ್ವರ್
What do you feel about this post?
Like
Love
Happy
Haha
Sad
