ಎಲ್ಲಿಗೆ ಬಂತು ತುಮಕೂರು ಮೆಟ್ರೋ? ಪರಮೇಶ್ವರ್ ಏನಂದ್ರು?

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ

ಎಲ್ಲಿಗೆ ಬಂತು ತುಮಕೂರು ಮೆಟ್ರೋ? ಪರಮೇಶ್ವರ್ ಏನಂದ್ರು?

Tumkurnews.in
ತುಮಕೂರು: ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವುದು ತಮ್ಮ ಪ್ರಮುಖ ಆಶಯಗಳಲ್ಲಿ ಒಂದಾಗಿದೆ. ಕಳೆದ ಐದಾರು ವರ್ಷಗಳಿಂದ ಈ ಉದ್ದೇಶಕ್ಕಾಗಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಭಾನುವಾರ ನಡೆದ ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೆಟ್ರೋ ಯೋಜನೆಯ ವಿವರವಾದ ಕಾರ್ಯಸಾಧ್ಯತಾ ಅಧ್ಯಯನ ಪೂರ್ಣಗೊಳಿಸಿ, ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಇದೀಗ ಆಸಕ್ತ ಸಂಸ್ಥೆಗಳಿಂದ ಅಭಿವ್ಯಕ್ತಿ ಆಸಕ್ತಿ ಆಹ್ವಾನಿಸುವ ಹಂತಕ್ಕೆ ಸಿದ್ಧತೆ ನಡೆದಿದೆ ಎಂದರು.
ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಸಾಕಾರಗೊಂಡರೆ ಬೆಂಗಳೂರು ಮತ್ತು ತುಮಕೂರು ನಗರಗಳ ನಡುವಿನ ಸಂಪರ್ಕ ಹಾಗೂ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ. ಇದರಿಂದ ಎರಡೂ ನಗರಗಳು ಇನ್ನಷ್ಟು ಹತ್ತಿರವಾಗಲಿದ್ದು, ತುಮಕೂರಿನ ಬೆಳವಣಿಗೆಗೆ ದೊಡ್ಡ ಅವಕಾಶಗಳು ಸೃಷ್ಟಿಯಾಗಲಿವೆ ಎಂದರು.

ತುಮಕೂರನ್ನು ಉತ್ತರ ಬೆಂಗಳೂರು ಎಂದು ಘೋಷಿಸಿ: ಪರಮೇಶ್ವರ್ ಒತ್ತಾಯ

Leave a Reply

Your email address will not be published. Required fields are marked *