ತುಮಕೂರು: ಮಧ್ಯರಾತ್ರಿ 1 ಗಂಟೆಗೆ ಸಿಟಿ ರೌಂಡ್ಸ್ ಮಾಡಿದ ಜಿಲ್ಲಾಧಿಕಾರಿ; ಎಲ್‌ಇಡಿ ಲೈಟಿಂಗ್ ಕಾಮಗಾರಿ ಪರಿಶೀಲನೆ

ಮಧ್ಯರಾತ್ರಿ 1 ಗಂಟೆಗೆ ಸಿಟಿ ರೌಂಡ್ಸ್ ಮಾಡಿದ ಜಿಲ್ಲಾಧಿಕಾರಿ; ಎಲ್‌ಇಡಿ ಲೈಟಿಂಗ್ ಕಾಮಗಾರಿ ಪರಿಶೀಲನೆ Tumkurnews.in ತುಮಕೂರು: ನಗರದ ಶ್ರೀ ಶಿವಕುಮಾರ ಸ್ವಾಮಿ ವೃತ್ತದಲ್ಲಿ ಕೈಗೊಳ್ಳಲಾಗುತ್ತಿರುವ ಎಲ್‌ಇಡಿ ಲೈಟಿಂಗ್ ಕಾಮಗಾರಿಯನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಧ್ಯರಾತ್ರಿ 1 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಎಲ್‌ಇಡಿ ದೀಪಗಳ ಅಳವಡಿಕೆ ಕಾರ್ಯ, ಬೆಳಕಿನ ವ್ಯವಸ್ಥೆ, ಕಾಮಗಾರಿಯ ಗುಣಮಟ್ಟ ಹಾಗೂ ವಿದ್ಯುತ್ ಸಂಪರ್ಕ ವ್ಯವಸ್ಥೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸರ್ಕಲ್‌ನ ಸೌಂದರ್ಯೀಕರಣ ಹಾಗೂ […]

Continue Reading

ತುಮಕೂರು: ಅರಾಜಕತೆ ಸೃಷ್ಟಿಸಿ ದೇಶದ ಅಧಿಕಾರ ಹಿಡಿಯಲು ಬಿಡುವುದಿಲ್ಲ: ಶೋಭಾ ಕರಂದ್ಲಾಜೆ ವಾಗ್ದಾಳಿ

ಅರಾಜಕತೆ ಸೃಷ್ಟಿಸಿ ದೇಶದ ಅಧಿಕಾರ ಹಿಡಿಯಲು ಬಿಡುವುದಿಲ್ಲ: ಶೋಭಾ ಕರಂದ್ಲಾಜೆ ವಾಗ್ದಾಳಿ Tumkurnews.in ತುಮಕೂರು: ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಅಧಿಕಾರ ಹಿಡಿಯ ಬಹುದು ಎಂದು ಕಾಂಗ್ರೆಸ್ ಒಕ್ಕೂಟ ಮಾಡುತ್ತಿರುವ ಪ್ರಯತ್ನ ಫಲಿಸುವುದಿಲ್ಲ, ಪ್ರಜಾತಂತ್ರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವವರಿಗೆ ದೇಶದ ಜನ ಅಧಿಕಾರದ ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಬಗ್ಗೆ […]

Continue Reading

ಮಾನವೀನ ಸಂದೇಶ ಸಾರಿದ ಮಹರ್ಷಿ: ಜ್ಯೋತಿಗಣೇಶ್

ಮಾನವೀನ ಸಂದೇಶ ಸಾರಿದ ಮಹರ್ಷಿ: ಜ್ಯೋತಿಗಣೇಶ್ ಬಿಜೆಪಿ ಕಚೇರಿಯಲ್ಲಿ ಆದಿಕವಿ ವಾಲ್ಮೀಕಿ ಜಯಂತಿ ಆಚರಣೆ Tumkurnews.in ತುಮಕೂರು: ಮಹರ್ಷಿ ವಾಲ್ಮೀಕಿಯವರು ತಾವು ರಚಿಸಿದ ರಾಮಾಯಣ ಮಹಾಕೃತಿಯ ಮೂಲಕ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಹೇಗೆ ಬದುಕಬೇಕು ಎಂಬ ಆದರ್ಶದ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಅವರ ಆದರ್ಶಗಳು ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಮಾನವೀಯತೆಯ ಬೆಳಕು ಹರಡುತ್ತವೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ […]

Continue Reading

ತುಮಕೂರು: ಚಿರತೆ ಸೆರೆಗೆ ಅಡ್ಡಿ, ಅಧಿಕಾರಿ ಮೇಲೆ ಹಲ್ಲೆ; ಗ್ರಾಮಸ್ಥರ ವಿರುದ್ಧ ದೂರು ದಾಖಲು

ಚಿರತೆ ಸೆರೆಗೆ ಅಡ್ಡಿ, ಅಧಿಕಾರಿ ಮೇಲೆ ಹಲ್ಲೆ; ಗ್ರಾಮಸ್ಥರ ವಿರುದ್ಧ ದೂರು ದಾಖಲು Tumkurnews.in ತುಮಕೂರು: ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ವೇಳೆ ಅಧಿಕಾರಿಯೋರ್ವರ ಮೇಲೆ ಗ್ರಾಮಸ್ಥರಿಂದ ಹಲ್ಲೆ ನಡೆದಿದೆ ಎಂದು ದೂರು ದಾಖಲಾಗಿದೆ. ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಸಮೀಪದ ತಿಮ್ಮಸಂದ್ರದ ಬಳಿ ಗುರುವಾರ ಚಿರತೆಯೊಂದು ಕಾಣಿಸಿಕೊಂಡಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಗ್ರಾಮಸ್ಥರ ಗಲಾಟೆಯಿಂದ ಹೆದರಿದ […]

Continue Reading

ತುಮಕೂರು: ಜಂಬೂಸವಾರಿ ವೇಳೆ ಪಟಾಕಿ ಸಿಡಿಸಿದವರ ವಿರುದ್ಧ ಕೇಸ್ ದಾಖಲು

ತುಮಕೂರು: ಜಂಬೂಸವಾರಿ ವೇಳೆ ಪಟಾಕಿ ಸಿಡಿಸಿದವರ ವಿರುದ್ಧ ಕೇಸ್ ದಾಖಲು Tumkurnews.in ತುಮಕೂರು: ತುಮಕೂರು ದಸರಾ ಪ್ರಯುಕ್ತ ಅ.21ರಂದು ನಗರದಲ್ಲಿ ಜಂಬೂ ಸವಾರಿ ನಡೆಯುತ್ತಿದ್ದ ವೇಳೆ ಪಟಾಕಿ ಸಿಡಿಸಿ, ಆತಂಕ ಸೃಷ್ಟಿಸಿದವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಬಾರಿ ಹೊತ್ತ ಆನೆ ಮೆರವಣಿಗೆ ಭದ್ರಮ್ಮ ಛತ್ರದ ಬಳಿ ಸಾಗುತ್ತಿತ್ತು. ಅದೇ ಸಮಯದಲ್ಲಿ ಸಮೀಪದ ಶ್ರೀರಾಮ ಮಂದಿರದ ಬಳಿ ಕೆಲವು ವ್ಯಕ್ತಿಗಳು ಏಕಾಏಕಿ ಪಟಾಕಿ ಸಿಡಿಸಿದ್ದಾರೆ. ಇದರಿಂದ ಅಂಬಾರಿ ಹೊತ್ತ ಆನೆ, ಇತರೆ ಆನೆಗಳು ಕೆಲಕಾಲ […]

Continue Reading

ತುಮಕೂರು: ಮುಂದಿನ ವರ್ಷ ಇನ್ನೂ ಅದ್ಧೂರಿಯಾಗಿ ದಸರಾ ಆಚರಣೆ: ಡಾ: ಜಿ. ಪರಮೇಶ್ವರ್

ಮುಂದಿನ ವರ್ಷ ಇನ್ನೂ ಅದ್ಧೂರಿಯಾಗಿ ದಸರಾ ಆಚರಣೆ: ಡಾ: ಜಿ. ಪರಮೇಶ್ವರ Tumkurnews.in ತುಮಕೂರು: ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ತುಮಕೂರು ದಸರಾ-2026 ಅತ್ಯಂತ ಅದ್ದೂರಿಯಾಗಿ, ಯಶಸ್ವಿಯಾಗಿ ಸಂಪನ್ನಗೊಂಡಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದ್ದಾರೆ. ಹತ್ತು ದಿನಗಳ ಕಾಲ ನಡೆದ ಈ ದಸರಾ ಮಹೋತ್ಸವಕ್ಕೆ ಜನರು ತೋರಿದ ಪ್ರೀತಿ, ನೀಡಿದ ಸಹಕಾರ ಮತ್ತು ಉತ್ಸಾಹ ನಿಜಕ್ಕೂ ಅವಿಸ್ಮರಣೀಯ. ಮಕ್ಕಳು, ಹಿರಿಯರು, ಮಹಿಳೆಯರು, ಯುವಕರು […]

Continue Reading

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ 600 ಯಾತ್ರಿಕರ ರಕ್ಷಣೆ ಮಾಡಿ: ಸಿಎಂ ಡಿ ಕೆ ಶಿವಕುಮಾರ್ ಮನವಿ

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ 600 ಯಾತ್ರಿಕರ ರಕ್ಷಣೆ ಮಾಡಿ: ಸಿಎಂ ಡಿ ಕೆ ಶಿವಕುಮಾರ್ ಮನವಿ ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳ ಭದ್ರತಾ ಬಿಕ್ಕಟ್ಟು ಹಾಗೂ ಅದರಿಂದ ಉಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾ ನಗರಗಳಲ್ಲಿ ಸಿಲುಕಿರುವ ಕರ್ನಾಟಕದ 600ಕ್ಕೂ ಅಧಿಕ ಉಮ್ರಾ ಯಾತ್ರಿಕರನ್ನು ಸುರಕ್ಷಿತವಾಗಿ ಶೀಘ್ರವೇ ರಾಜ್ಯಕ್ಕೆ ಕರೆತರಲು ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಕೇಂದ್ರ ವಿದೇಶಾಂಗ ಸಚಿವ […]

Continue Reading

ತುಮಕೂರು: ತುಮುಲ್ ನೇರ ನೇಮಕಾತಿಯಲ್ಲಿ ಅಕ್ರಮ ಆರೋಪ: ತನಿಖೆಗೆ ಆಗ್ರಹ

ತುಮುಲ್ ನೇರ ನೇಮಕಾತಿಯಲ್ಲಿ ಅಕ್ರಮ ಆರೋಪ: ತನಿಖೆಗೆ ಆಗ್ರಹ Tumkurnews.in ತುಮಕೂರು: ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ(ತುಮುಲ್)ನಲ್ಲಿ 2016–17ನೇ ಸಾಲಿನಲ್ಲಿ ನಡೆಸಿದ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಇತ್ತೀಚಿನ ಸುಪ್ರಿಂಕೋರ್ಟು ತೀರ್ಪು ಇದಕ್ಕೆ ಸಾಕ್ಷಿ ಎಂಬಂತೆ ಇದೆ. ಹಾಗಾಗಿ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ತನಿಖೆಗೆ ಒಳಪಡಿಸಬೇಕು ಎಂದು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಅರುಣ್‌ಕುಮಾರ್, ವೆಂಕಟೇಶ್, ಶಾಂತಲಾ, ಶಾಂತರಾಜು, ರೇಣುಕಯ್ಯ, ಪುಟ್ಟರಾಜು, ರಜತ್ ಹಾಗೂ ಮಂಜುನಾಥ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ […]

Continue Reading

ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ಅರಿವಳಿಕೆ ದಿನಾಚರಣೆ

ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ಅರಿವಳಿಕೆ ದಿನಾಚರಣೆ tumkurnews.in ತುಮಕೂರು: ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಅರಿವಳಿಕೆ ಶಾಸ್ತ್ರ ವಿಭಾಗದ ವತಿಯಿಂದ 180ನೇ ವಿಶ್ವ ಅರಿವಳಿಕೆ ದಿನಾಚರಣೆ ಹಾಗೂ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕ್ಯಾಂಪಸ್‌ನ ನಾಗಾರ್ಜುನ ಸಭಾಂಗಣದಲ್ಲಿ ಏರ್ಪಟ್ಟ ಕಾರ್ಯಕ್ರಮವನ್ನು ಸಾಹೇ ವಿವಿ ಕಲುಪತಿ ಡಾ.ಲಿಂಗೇಗೌಡ ಜ್ಯೋತಿ ಬೆಳಗಿಸುವ ಉದ್ಘಾಟಿಸಿ, ಅರಿವಳಿಕೆ ತಜ್ಞರ ಪಾತ್ರವು ಕೇವಲ ಶಸ್ತ್ರಚಿಕಿತ್ಸಾ ಕೊಠಡಿಗೆ ಸೀಮಿತವಾಗಿರದೆ, ರೋಗಿಯ ಶಸ್ತ್ರಚಿಕಿತ್ಸೆಗೂ ಮುನ್ನದ ಮೌಲ್ಯಮಾಪನ, ಶಸ್ತ್ರಚಿಕಿತ್ಸೆಯ ಸಮಯದ […]

Continue Reading

ಹುಳಿಯಾರು: ಬೈಕ್‌ಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ; ಜಾಲಿ ರೈಡ್‌ ಹೊರಟಿದ್ದ ಯುವತಿ ಸೇರಿದಂತೆ ಇಬ್ಬರು ದರ‍್ಮರಣ

ಹುಳಿಯಾರು: ಬೈಕ್‌ಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ; ಜಾಲಿ ರೈಡ್‌ ಹೊರಟಿದ್ದ ಯುವತಿ ಸೇರಿದಂತೆ ಇಬ್ಬರು ದರ‍್ಮರಣ ಹುಳಿಯಾರು: ದಸರಾ ರಜೆಯ ಖುಷಿಯಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ಯುವಕ ಹಾಗೂ ಮತ್ತರ‍್ವ ಯುವತಿ ಬೈಕ್‌ನಲ್ಲಿ ಜಾಲಿ ರೈಡ್‌ ತೆರಳಿದ್ದ ವೇಳೆ ಸಂಭವಿಸಿದ ಭೀಕರ ಮುಖಾಮುಖಿ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹುಳಿಯಾರು ಸಮೀಪದ ಕಂಪನಹಳ್ಳಿ ಬಳಿ ಸಂಭವಿಸಿದೆ. ಮೃತರ ವಿವರ:ಈ ಅಪಘಾತದಲ್ಲಿ ಹುಳಿಯಾರಿನ ಯೋಶಿನಿ (೧೬) ಹಾಗೂ ಭದ್ರಾವತಿಯ ಭರತ್ (೨೧) ಪ್ರಾಣ […]

Continue Reading