ಮಹಾನಗರ ಪಾಲಿಕೆ ವ್ಯಾಪ್ತಿಯ ವಸತಿ ವಂಚಿತರಿಗೆ ಹಾಗೂ ಪೌರಕಾರ್ಮಿಕರಿಗೆ ವಸತಿ ನೀಡಲು ಪ್ರಮಾಣಿಕ ಪ್ರಯತ್ನ: ಶಾಸಕ ಜಿ.ಬಿ ಜ್ಯೋತಿಗಣೇಶ್
Tumkur news
ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ವಸತಿ ವಂಚಿತರಿಗೆ ಹಾಗೂ ಪಾಲಿಕೆಯ ಪೌರಕಾರ್ಮಿಕರಿಗೆ ವಸತಿ ನೀಡಲು ಪ್ರಯಾಣಿಕ ಪ್ರಯತ್ನ ಮಾಡಲಾಗುವುದು ಎಂದು ತುಮಕೂರು ನಗಗ ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದರು.
ಮನ್ನಾ ಆಗುತ್ತೆ ಮೈಕ್ರೋ ಫೈನಾನ್ಸ್ ಸಾಲ! ಸರ್ಕಾರದ ಸುಗ್ರಿವಾಜ್ಞೆ’ಯಲ್ಲಿ ಏನಿದೆ?
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಇಂದು ನಡೆದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆಯಲ್ಲಿ ಮಾತನಾಡಿದ ಅವರು, ತುಮಕೂರು ನಗರದ ಜಿಲ್ಲಾ ಕೇಂದ್ರವಾಗಿರುವುದರಿಂದ ವಸತಿ ವಂಚಿತರ ಸಂಖ್ಯೆ ಹೆಚ್ಚಾಗಿದ್ದು, ಸರ್ಕಾರಿ ಭೂಮಿಗಳನ್ನು ಗುರುತಿಸಿ ವಸತಿ ಯೋಜನೆಗೆ ಭೂಮಿಯನ್ನು ಮೀಸಲು ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತುಮಕೂರು ಮಹಾನಗರಪಾಲಿಕೆಯ ಪೌರಕಾರ್ಮಿಕರಿಗೆ ವಸತಿ ನೀಡುವುದು ಸಹ ನಮ್ಮ ಕರ್ತವ್ಯವಾಗಿದೆ. ತುಮಕೂರು ನಗರದ ಸ್ವಚ್ಚತೆಗೆ ಹಗಲು ಇರುಳು ದುಡಿಯುತ್ತಿದ್ದಾರೆ. ಪೌರಕಾರ್ಮಿಕರ ಜೊತೆಗೆ ಕುಟುಂಬದವರಿಗೂ ಅನುಕೂಲವಾಗುವಂತೆ ಅಂಗನವಾಡಿ, ಶಾಲೆ, ಆಸ್ಪತ್ರೆ ಒಂದೇ ಸ್ಥಳದಲ್ಲಿ ಇರುವಂತೆ ಅಧಿಕಾರಿಗಳು ಯೋಜನೆ ರೂಪಿಸಬೇಕು ಎಂದರು.
ಕಳೆದ ವರ್ಷ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಯಾವುದೇ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರದಿಂದ ಸಾಧ್ಯವಾಗಿಲ್ಲ. ಈ ಕಾರಣದಿಂದ ಈ ಹಣಕಾಸು ವರ್ಷದಿಂದ ಮಹಾನಗರಪಾಲಿಕೆ ವತಿಯಿಂದಲೇ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಈ ಬಾರಿ ಪಾಲಿಕೆ ಬಜೆಟ್ ನಲ್ಲಿ 50 ಲಕ್ಷ ರೂ. ಹಣ ಮೀಸಲು ಇಡಬೇಕು, ಬೆಂಕಿ ಅನಾಹುತ ಸಂಭವಿಸಿ ಹಾನಿಗೊಳಗಾದ ಮನೆಗಳಿಗೆ 25 ಲಕ್ಷ ರೂ ಹಣ ಮೀಸಲು ಇಡಬೇಕು ಎಂದು ಸೂಚನೆ ನೀಡಿದರು.
ತುಮಕೂರು ಜಿಲ್ಲೆಯಲ್ಲಿ ರಾಜ್ಯದಲೇ ಅತಿ ಹೆಚ್ಚು ಮೈಕ್ರೋ ಫೈನಾನ್ಸ್ ಸಾಲ!
ಮಾರಿಯಮ್ಮ ನಗರದ ಸ್ಥಳೀಯ ಜನರ ಆದಿ ದೇವತೆ ಮಾರಿಯಮ್ಮ ದೇವಸ್ಥಾನವನ್ನು ಪಾಲಿಕೆಯ ನಿಧಿಯಿಂದ ಜೀರ್ಣೋದ್ದಾರ ಮಾಡಬೇಕು, ಈ ದೇವಸ್ಥಾನದ ಜೀಣೋದ್ದಾರಕ್ಕೆ ಶಾಸಕರ ನಿಧಿಯಿಂದಲು ಅನುದಾನ ನೀಡುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಬಫರ್ ಜೋನ್, ರೈಲ್ವೆ ಟ್ರ್ಯಾಕ್ ಬಫರ್ ಜೋನ್‍ಗಳಲ್ಲಿ ಖಾಸಗಿ ಸ್ವತ್ತುಗಳಲ್ಲಿ ಮತ್ತು ಸರ್ಕಾರಿ ಸ್ವತ್ತುಗಳಲ್ಲಿ ಗುಡಿಸಲು ಹಾಕಿಕೊಂಡಿರುವ ವಸತಿ ವಂಚಿತರನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ತುಮಕೂರು ಮಹಾನಗರಪಾಲಿಕೆಯ ಆಯುಕ್ತೆ ಅಶ್ವಿಜ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ವಸತಿ ಶಾಖೆಯ ಅಧಿಕಾರಿಗಳು, ಸ್ಮಾರ್ಟ್ ಸಿಟಿ ಅಧಿಕಾರಿಗಳೊಳಗಂಡಂತೆ ಪಾಲಿಕೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕ್ಯಾಲ್ಕುಲೇಟರ್’ನಂತೆ ನಿಮ್ಮ ಮಕ್ಕಳು ಗಣಿತದ ಲೆಕ್ಕಗಳನ್ನು ಬಿಡಿಸಲು ಕಲಿಯಬೇಕೆ? ಇಲ್ಲಿದೆ ಸುವರ್ಣಾವಕಾಶ!
+ There are no comments
Add yours