ಹಬ್ಬಗಳ ಆಚರಣೆಯಿಂದ ದೇಶಭಕ್ತಿ, ಧಾರ್ಮಿಕ ಚಿಂತನೆ ಜಾಗೃತಿ

ಜಿಲ್ಲಾ ಸುದ್ದಿ ತುಮಕೂರು ನಗರ ಪ್ರಮುಖ ಸುದ್ದಿ

ಹಬ್ಬಗಳ ಆಚರಣೆಯಿಂದ ದೇಶಭಕ್ತಿ, ಧಾರ್ಮಿಕ ಚಿಂತನೆ ಜಾಗೃತಿ: ಶಿವಸಿದ್ಧೇಶ್ವರ ಸ್ವಾಮೀಜಿ
ತುಮಕೂರು ದಸರಾ ಸಮಿತಿಯ ದಸರಾ ಉತ್ಸವದ ಸಾಮೂಹಿಕ ಶಮಿಪೂಜೆ

tumkurnews.in

ತುಮಕೂರು: ತುಮಕೂರು ದಸರಾ ಸಮಿತಿಯ ೩೬ನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ಬುಧವಾರ ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಾಮೂಹಿಕ ಶಮಿಪೂಜಾ ಕಾರ್ಯಕ್ರಮ ಭಕ್ತಿ ಸಡಗರದಿಂದ ನೆರವೇರಿತು.
ನಗರದ ಕೆ.ಆರ್. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಮೂರು ದಿನಗಳಿಂದ ನಡೆದ ದಸರಾ ಕಾರ್ಯಕ್ರಮದ ಕೊನೆದಿನದ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಶಿವಸಿದ್ಧೇಶ್ವರ ಸ್ವಾಮೀಜಿ, ರಾಷ್ಟçಭಕ್ತಿ, ಧಾರ್ಮಿಕ ಚಿಂತನೆ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆಯಿಂದ ಭಾರತದ ಸಂಸ್ಕೃತಿ, ಪರಂಪರೆ ವಿಶ್ವದಲ್ಲೇ ವಿಶೇಷವಾಗಿದೆ. ನಮ್ಮಲ್ಲಿ ರಾಷ್ಟಿರಿಯ, ಧಾರ್ಮಿಕ ಹಬ್ಬಗಳ ಆಚರಣೆ ಮಾಡಲಾಗುತ್ತದೆ. ಭಾವೈಕ್ಯತೆ, ರಾಷ್ಟರಿಕ್ಕಾಗಿ ಕೊಡುಗೆ ನೀಡಿದ ಮಹನೀಯರ ಸ್ಮರಣೆ, ನಾಗರೀಕ ಪ್ರಜ್ಞೆ ಮೂಡಿಸಲು ರಾಷ್ಟಿರಿಯ ಹಬ್ಬಗಳು ಸಹಕಾರಿಯಾಗಿವೆ. ಧಾರ್ಮಿಕ ಹಬ್ಬಗಳು, ಧರ್ಮ ಜಾಗೃತಿ, ಸಂಸ್ಕೃತಿ, ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಆಶಯ ಹೊಂದಿವೆ ಎಂದು ಹೇಳಿದರು.
ವಿಜಯದಶಮಿ ಆಚರಣೆ ಎಂದರೆ ಅಧರ್ಮದ ವಿರುದ್ಧ ಧರ್ಮ, ಕೆಟ್ಟದರ ವಿರುದ್ಧ ಒಳ್ಳೆಯದು ಗೆಲ್ಲುವುದೇ ಆಗಿದೆ. ನಮ್ಮೊಳ್ಳಗಿನ ದೌರ್ಬಲ್ಯ ಗೆಲ್ಲುವ, ಆಂತರಿಕ ವಿಜಯ ಸಾಧಿಸುವ ಸಂಕೇತವೂ ಆಗಿದೆ. ನಿನ್ನನ್ನು ನೀನು ಗೆಲ್ಲುವುದು ನಿಜವಾದ ವಿಜಯವಾಗಿದೆ. ಆತ್ಮಶಕ್ತಿ ವೃದ್ಧಿಸಿಕೊಳ್ಳಬೇಕು ಎಂಬುದು ಹಬ್ಬದ ಆಚರಣೆಗಳ ಉದ್ದೇಶವೂ ಆಗಿದೆ. ಅನಕ್ಷರತೆ, ಅಪೌಷ್ಟಿಕತೆ, ಬಾಲಾಪರಾಧ, ಮಾದಕವ್ಯಸನ, ಯುವಶಕ್ತಿಯ ತಲ್ಲಣ ಮುಂತಾದ ಸಮಸ್ಯೆಗಳು ಸಮಾಜ ಮತ್ತು ದೇಶವನ್ನು ಕಾಡುತ್ತಿವೆ. ಇವುಗಳ ವಿರುದ್ಧ ಹೋರಾಟ ಮಾಡಿ ಗೆಲ್ಲಬೇಕಾಗಿದೆ ಎಂದು ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ದಸರಾ ಉತ್ಸವವೆಂದರೆ ಆಡಂಬರ, ವಿಜೃಂಭಣೆಯಿಂದ ಆಚರಿಸುವುದಲ್ಲ, ಧಾರ್ಮಿಕ ಚಿಂತನೆ ಇಟ್ಟುಕೊಂಡು ಹೇಗೆ ಆಚರಣೆ ಮಾಡಬೇಕು ಎಂಬುದನ್ನು ತುಮಕೂರು ದಸರಾ ಸಮಿತಿ ೩೬ ವರ್ಷಗಳಿಂದ ಆಚರಣೆ ಮೂಲಕ ತೋರಿಸಿದೆ. ದೇಶಭಕ್ತಿ, ಈ ನೆಲದ ಕಾನೂನು ಗೌರವಿಸುವುದು, ಸಮಾಜದ ಕೆಡುಕುಗಳ ನಿವಾರಣೆಗೆ ಧಾರ್ಮಿಕ ಆಚರಣೆಗಳಿಂದ ಸಾಧ್ಯವಾಗಲಿ ಎಂದು ಆಶಿಸಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ೩೬ ವರ್ಷಗಳಿಂದ ನಾಗರೀಕರ ಸಹಯೋಗದಲ್ಲಿ ದಸರಾ ಸಮಿತಿಯು ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಮಹತ್ವ ಸಾರುತ್ತಾ ದಸರಾ ಉತ್ಸವ ಆಚರಿಸಿಕೊಂಡು ಬರುತ್ತಿದೆ. ೧೯೯೧ರಲ್ಲಿ ಬಾಳೆಹೊನ್ನೂರು ಪೀಠದ ಸ್ವಾಮೀಜಿಗಳು ಈ ದಸರಾ ಉತ್ಸವಕ್ಕೆ ನಾಂದಿ ಹಾಡಿದರು. ಆಗಿನಿಂದ ಮಾಜಿ ಸಚಿವ ದಿ. ಲಕ್ಷಿö್ಮಂನರಸಿಂಹಯ್ಯ, ಸಿ.ವಿ. ಮಹದೇವಯ್ಯ, ಕೋರಿ ಮಂಜಣ್ಣ ಮೊದಲಾದವರು ಮುನ್ನಡೆಸಿಕೊಂಡು ಬಂದರು ಎಂದು ಸ್ಮರಿಸಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಡಾ.ಜೆ. ಲಕ್ಷಿö್ಮಂಕಾಂತ್ ಮಾತನಾಡಿ, ಏನೇ ಅಡೆತಡೆಗಳು ಎದುರಾದರೂ ದಸರಾ ಸಮಿತಿಯು ದಸರಾ ಆಚರಣೆಯನ್ನು ಲೋಪವಾಗದಂತೆ ಆಗಿನಿಂದಲೂ ನಡೆಸಿಕೊಂಡು ಬರುತ್ತಿದೆ. ಇದಕ್ಕೆ ಎಲ್ಲಾ ಸಮಾಜದ ಮುಖಂಡರು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳಾಡಿದ ಸಮಿತಿ ಖಜಾಂಚಿ ಜಿ.ಎಸ್. ಬಸವರಾಜು, ತುಮಕೂರು ದಸರಾ ಸಮಿತಿಯು ನೋಂದಾಯಿತ ಸಮಿತಿ, ತುಮಕೂರಿನಲ್ಲಿ ದಸರಾ ಆಚರಣೆ ಮಾಡುವ ಏಕೈಕ ಅಧಿಕೃತ ಸಮಿತಿ. ಕಳೆದ ೩೫ ವರ್ಷಗಳಿಂದ ಸ್ವಾಭಿಮಾನದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ದಸರಾ ಉತ್ಸವದ ಖರ್ಚುವೆಚ್ಚದ ಲೆಕ್ಕವನ್ನು ಸಾರ್ವಜನಿಕವಾಗಿ ಪ್ರಕಟಿಸಿ ಪಾರದರ್ಶಕತೆ ಕಾಪಾಡಿಕೊಂಡು ಬಂದಿದೆ. ಈ ಕಾರಣದಿಂದ ಸಮಿತಿ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಾಗಿದೆ ಎಂದರು.
ಮೂರು ವರ್ಷಗಳಿಗೆ ಮೊದಲು ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಉತ್ಸವ ಆಚರಿಸಲಾಗುತ್ತಿತ್ತು. ಜಿಲ್ಲಾಡಳಿತ ಕಾಲೇಜು ಮೈದಾನದಲ್ಲಿ ಆರಚರಿಸಲು ಆರಂಭಿಸಿದಾಗಿನಿಂದ ರಾಮಮಂದಿರ ಆವರಣದಲ್ಲಿ ಆಚರಣೆ ಮಾಡಲಾಗುತ್ತಿದೆ. ಗಣಪತಿ ಸೇವಾ ಮಂಡಳಿ ಮುಖಂಡರು, ಪೌರಕಾಮಿಕರು, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿಕೊಂಡು ಬರಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಜಿ.ಎಸ್. ಬಸವರಾಜು ಹೇಳಿದರು.
ದಸರಾ ಸಮಿತಿ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಮಹೇಶ್, ಕಾರ್ಯದರ್ಶಿ ಪರಶುರಾಮಯ್ಯ, ಸಂಯೋಜಕ ಕೆ.ಎನ್. ಗೋವಿಂದರಾವ್, ಸಹ ಸಂಯೋಜಕ ಕಿರಣ್, ಸಂಚಾಲಕರಾದ ಗ.ಸಿ. ಶ್ರೀನಿವಾಸಮೂರ್ತಿ, ಮುಖಂಡರಾದ ನಾಗೇಂದ್ರ ಪ್ರಸಾದ್, ಎಂ.ಕೆ. ನಾಗರಾಜರಾವ್, ಪದಾಧಿಕಾರಿಗಳಾದ ನಾಗರಾಜ ಶೆಟ್ಟಿ, ಪ್ರಸಾದ್, ಓಂಕಾರೇಶ್ವರಿ, ಕಲ್ಪನಾ ಪ್ರಸಾದ್, ಅನಿತಾ ರಮೇಶ್, ವಿಜಯ ರವೀಂದ್ರ, ಶೃತಿ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *