ಸಿದ್ದಗಂಗಾಮಠದ ಸನಿವಾಸ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ: ಸಚಿವ ಈಶ್ವರ ಖಂಡ್ರೆ ಭಾಗಿ

ಸಿದ್ದಗಂಗಾಮಠದ ಸನಿವಾಸ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಶಿಕ್ಷಕ ವೃತ್ತಿ ಎಲ್ಲ ಹುದ್ದೆಗಳಿಗಿಂತಲೂ ಮಿಗಿಲಾದ್ದು: ಈಶ್ವರ ಖಂಡ್ರೆ ವಿದ್ಯಾರ್ಥಿಗಳಿಗೆ ವಿದ್ಯೆಯಷ್ಟೇ ಅಲ್ಲ, ಬುದ್ಧಿವಂತಿಕೆಯನ್ನೂ ಶಿಕ್ಷಕರು ಕಲಿಸಬೇಕು: ಈಶ್ವರ ಖಂಡ್ರೆ Tumkurnews.in ತುಮಕೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಮಕ್ಕಳಿಗೆ ವಿದ್ಯೆ ಕಲಿಸಿದರಷ್ಟೇ ಸಾಲದು, ಅವರನ್ನು ಬುದ್ಧಿವಂತರನ್ನಾಗಿ ಮಾಡುವ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ. ತುಮಕೂರು ಸಿದ್ದಗಂಗಾಮಠದ ಸನಿವಾಸ ವಿದ್ಯಾಸಂಸ್ಥೆಯಲ್ಲಿಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳನ್ನು […]

Continue Reading

ತುಮಕೂರು: ಹೊಸ ಪಿಂಚಣಿ ಪದ್ದತಿ ರದ್ದುಗೊಳಿಸಿ ಹಳೇ ಪಿಂಚಣಿ ಪದ್ದತಿಯನ್ನು ಜಾರಿ: ಪರಮೇಶ್ವರ್

ಹೊಸ ಪಿಂಚಣಿ ಪದ್ದತಿ ರದ್ದುಗೊಳಿಸಿ ಹಳೇ ಪಿಂಚಣಿ ಪದ್ದತಿಯನ್ನು ಜಾರಿ: ಪರಮೇಶ್ವರ್ Tumkurnews.in ತುಮಕೂರು: ಹೊಸ ಪಿಂಚಣಿ ಪದ್ದತಿ ರದ್ದುಗೊಳಿಸಿ ಹಳೇ ಪಿಂಚಣಿ ಪದ್ದತಿಯನ್ನು ಜಾರಿಗೊಳಿಸುವ ಕುರಿತು ತಾವು ಮತ್ತು ಮುಖ್ಯಮಂತ್ರಿಗಳು ಈಗಾಗಲೇ ಚರ್ಚಿಸಿದ್ದು, ಸದ್ಯದಲ್ಲೇ ಈ ತೀರ್ಮಾನ ಹೊರ ಬೀಳಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು. ನಗರದ ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಭಾರತ ರತ್ನ ಡಾ. ಸರ್ವಪಲ್ಲಿ ರಾಧಕೃಷ್ಣನ್ ಅವರ 139ನೇ ಜನ್ಮ ದಿನಾಚರಣೆ […]

Continue Reading

ತುಮಕೂರು: ಹಿರೇಹಳ್ಳಿ ಕೆರೆ ಒತ್ತುವರಿ ತೆರವಿಗೆ ಸಚಿವ ಈಶ್ವರ ಖಂಡ್ರೆ ಆದೇಶ

ಹಿರೇಹಳ್ಳಿ ಕೆರೆ ಒತ್ತುವರಿ ತೆರವಿಗೆ ಸಚಿವ ಈಶ್ವರ ಖಂಡ್ರೆ ಆದೇಶ ಹಿರೇಹಳ್ಳಿ ಪಂಚಾಯ್ತಿ ರಸ್ತೆ, ಚರಂಡಿ ಅಭಿವೃದ್ಧಿಗೆ 25 ಲಕ್ಷ ರೂ.: ಈಶ್ವರ ಖಂಡ್ರೆ Tumkurnews.in ತುಮಕೂರು: ತುಮಕೂರು ತಾಲೂಕು ಹಿರೇಹಳ್ಳಿ ಕೆರೆಗೆ ಇಂದು ಹಠಾತ್ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ, 18 ಎಕರೆ ಕೆರೆಯಲ್ಲಿ ಅರ್ಧದಷ್ಟು ಒತ್ತುವರಿಯಾಗಿದ್ದು, ಕೂಡಲೇ ತೆರವಿಗೆ ಕ್ರಮ ವಹಿಸುವಂತೆ ಜಿಪಂ ಸಿಇಓಗೆ ಆದೇಶ ನೀಡಿದ್ದಾರೆ. ತುಮಕೂರು ಸಿದ್ದಗಂಗಾ ಮಠದಲ್ಲಿ ಶಿಕ್ಷಕರ ದಿನ ಕಾರ್ಯಕ್ರಮಕ್ಕೆ […]

Continue Reading

ತುಮಕೂರು: ಪ್ರಜಾಸೇವಾ ಆಂದೋಲನ; ಮೊದಲ ದಿನ ಬಂದ ಅರ್ಜಿಗಳೆಷ್ಟು? ಇಲ್ಲಿದೆ ಮಾಹಿತಿ

ಜನರ ಸಮಸ್ಯೆಗಳನ್ನು ಕಡೆಗಣಿಸಿದರೆ ಸೂಕ್ತ ಕ್ರಮ: ಡಿಸಿಎಂ ಜಿ.ಪರಮೇಶ್ವರ್ Tumkurnews.in ತುಮಕೂರು: ಪ್ರಜಾಸೇವಾ ಇಲಾಖೆಯ ಲೋಕಾರ್ಪಣೆ ಹಾಗೂ ಪ್ರಜಾಸೇವಾ ಅಭಿಯಾನ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಉಪ ಮುಖ್ಯಮಂತ್ರಿ, ಕಂದಾಯ ಹಾಗೂ ಕ್ರೀಡಾ ಸಚಿವ ಡಾ. ಜಿ.ಪರಮೇಶ್ವರ ಅವರು ನಡೆಸಿದ ವೀಡಿಯೋ ಸಂವಾದದ ಬಗೆಗಿನ ಮಾಹಿತಿ. ಜನರ ಮನೆ ಬಾಗಿಲಿಗೆ ಸರ್ಕಾರ ಎಂಬ ಆಶಯದಡಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರಜಾಸೇವಾ ಇಲಾಖೆ ಇಂದು ರಾಜ್ಯಾದ್ಯಂತ ಕಾರ್ಯಾರಂಭ ಮಾಡಿದೆ. ಮುಖ್ಯಮಂತ್ರಿಗಳು ವಿಜಯನಗರ ಜಿಲ್ಲೆಯ […]

Continue Reading

ಕೆಪಿಎಸ್ಸಿ ಹಗರಣ: ಬಸವರಾಜ್ ಕನ್ನಾಳೆ ವಿರುದ್ಧ ಎಬಿವಿಪಿ ಪ್ರತಿಭಟನೆ

ಕೆಪಿಎಸ್ಸಿ ಹಗರಣ: ಬಸವರಾಜ್ ಕನ್ನಾಳೆ ವಿರುದ್ಧ ಎಬಿವಿಪಿ ಪ್ರತಿಭಟನೆ ತುಮಕೂರು ವಿವಿ ವಿಸಿ ಕಚೇರಿ ಮುಂದೆ ಪ್ರತಿಭಟನೆ; ಕನ್ನಾಳೆ ವಜಾಗೆ ಆಗ್ರಹ Tumkurnews.in ತುಮಕೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಯಲ್ಲಿ ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ್ ಕನ್ನಾಳೆ ಅವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಕಚೇರಿ ಮುಂಭಾಗ […]

Continue Reading

ತುಮಕೂರು: ಸವಿತಾ ಸಮಾಜದ ಮಕ್ಕಳ ಕೌಶಲ್ಯ ಪರಿಣತಿಗೆ ಮಾರ್ಗದರ್ಶನ ನೀಡಿ

ಸವಿತಾ ಸಮಾಜದ ಮಕ್ಕಳ ಕೌಶಲ್ಯ ಪರಿಣತಿಗೆ ಮಾರ್ಗದರ್ಶನ ನೀಡಿ: ಸವಿತಾ ಸಮಾಜದ ಸಮಾರಂಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಲಹೆ Tumkurnews.in ತುಮಕೂರು: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸವಿತಾ ಸಮಾಜದವರು ತಮ್ಮ ವೃತ್ತಿಯನ್ನು ಆಧುನೀಕರಣಗೊಳಿಸಿ ಲಾಭದಾಯಕ ಮಾಡಿಕೊಳ್ಳಲು ಪ್ರಯತ್ನಿಸಬೇಕು. ತಮ್ಮ ಮಕ್ಕಳಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಿ ಉತ್ತಮ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಲಹೆ ನೀಡಿದರು. ಜಿಲ್ಲಾ ಸಮಿತಾ ಸಮಾಜದಿಂದ ಮಂಗಳವಾರ ನಗರದ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, […]

Continue Reading

ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಭ್ರಮ ಕಾರ್ಯಕ್ರಮ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಭ್ರಮ ಕಾರ್ಯಕ್ರಮ Tumkurnews.in ತುಮಕೂರು: ತಂದೆ-ತಾಯಿ, ಗುರುಗಳು ಮಕ್ಕಳಿಗೋಸ್ಕರ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುತ್ತಾರೆ. ಇದನ್ನು ಮಕ್ಕಳು ಅರ್ಥ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಮೋಹನ್‌ಕುಮಾರ್ ಚಂದ್ರಗುತ್ತಿ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಓಪನ್ ಆಡಿಟೋರಿಯಂನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ೨೦೨೬-೨೭ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಸ್ಕೌಟ್ಸ್ ಅಂಡ್ […]

Continue Reading

ತುಮಕೂರು: ರಾಹುಲ್ ಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲು: ಕಾಂಗ್ರೆಸ್ ಖಂಡನೆ

ರಾಹುಲ್ ಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲು: ಕಾಂಗ್ರೆಸ್ ಖಂಡನೆ Tumkurnews.in ತುಮಕೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ಗೋ ಮೂತ್ರ ಮತ್ತು ಗಂಗಾಜಲದಿಂದ ಸ್ವಚ್ಚಗೊಳಿಸಿದ ವ್ಯಕ್ತಿಗಳ ವಿರುದ್ಧ ಕೇಸು ದಾಖಲಿಸುವಂತೆ ಒತ್ತಾಯಿಸಿದ ರಾಹುಲ್‌ಗಾಂಧಿ ಅವರ ವಿರುದ್ದವೇ ಎಫ್.ಐ.ಆರ್ ದಾಖಲಿಸಿರುವುದನ್ನು ಖಂಡಿಸಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಅಂಬೇಡ್ಕರ್ ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್, […]

Continue Reading

ತುಮಕೂರು; ಫೆರಿಪೆರಲ್ ರಿಂಗ್ ರಸ್ತೆ ಸರ್ವೆ ವಿರೋಧಿಸಿ ಪ್ರತಿಭಟನೆ ರೈತರ ಭೂಮಿ ಉಳಿಸಲು ಹೋರಾಟ ಅನಿವಾರ್ಯವಾದರೆ ಹೋರಾಟ ಮಾಡುತ್ತೇವೆ: ಡಿ.ಸಿ. ಗೌರಿಶಂಕರ್

Tumkurnews.in ತುಮಕೂರು: ದೇವರ ಹೊಸಹಳ್ಳಿ–ಮಲ್ಲಸಂದ್ರ–ವಸಂತನರಸಾಪುರ ಮಾರ್ಗದಲ್ಲಿ ಪ್ರಸ್ತಾಪಿಸಲಾಗಿರುವ ಫೆರಿಪೆರಲ್ ರಿಂಗ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಭೂಮಿಯ ಸರ್ವೆ ನಡೆಸಲು ಅಧಿಕಾರಿಗಳು ಮುಂದಾದ ಹಿನ್ನೆಲೆಯಲ್ಲಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ದೊಡ್ಡಸಾರಂಗಿ ಗ್ರಾಮದ ಬಳಿ ನಡೆದಿದೆ. ರೈತರ ಆಕ್ಷೇಪ ಹಾಗೂ ವಿರೋಧದ ನಡುವೆಯೂ ಸರ್ವೆ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದರಿಂದ ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿತು. ತಮ್ಮ ಕೃಷಿ ಭೂಮಿ, ಜೀವನಾಧಾರ ಮತ್ತು ಭವಿಷ್ಯದ ಕುರಿತು ಆತಂಕಗೊಂಡ ರೈತರು ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಸರ್ವೆ ಕಾರ್ಯವನ್ನು ತಡೆಯಲು […]

Continue Reading

ತುಮಕೂರು ಗ್ರಾಮಾಂತರದಲ್ಲಿ ಕೋಲಾಹಲ ಎಬ್ಬಿಸಿದ ದಳಪತಿ ಎಚ್.ನಿಂಗಪ್ಪರನ್ನು ವಿಧಾನಸಭೆಗೆ ಕರೆದೊಯ್ಯುವೆ ಎಂದ ಎಚ್‌ಡಿಕೆ; ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು?

Tumkurnews.in ತುಮಕೂರು: ‘ಮಾಜಿ ಶಾಸಕ ಎಚ್.ನಿಂಗಪ್ಪನವರ ಋಣ ನನ್ನ ಮೇಲಿದೆ, ಇವರನ್ನು ಮತ್ತೊಮ್ಮೆ ವಿಧಾನಸಭೆಗೆ ಕರೆದೊಯ್ಯುತ್ತೇನೆ’ ಎಂದು ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದು, ಗ್ರಾಮಾಂತರ ಕ್ಷೇತ್ರದಲ್ಲಿ ಕೋಲಾಹಲ ಎಬ್ಬಿಸಿದೆ. ಸದ್ಯ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ಸುರೇಶ್ ಗೌಡ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಉಂಟಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮುಂದಿನ 2028ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಶಾಸಕ ಬಿ.ಸುರೇಶ್ ಗೌಡರನ್ನೇ ಕಣಕ್ಕಿಳಿಸುವ ಭರವಸೆಯಲ್ಲಿದ್ದಾರೆ. ಆದರೇ ಇದೀಗ ಕುಮಾರ […]

Continue Reading