ಕನ್ಯೆಯರ ಕಾಲುತೊಳೆಯುವ ವಿಭಿನ್ನ ಆಚರಣೆ!

1 min read

Tumkur News
ಪಾವಗಡ: ವೈವಿದ್ಯತೆ ಮೆರೆದ ಈ ದೇಶದಲ್ಲಿ ಹಲವು ಆಚರಣೆಗಳು ನಮ್ಮ ಗಮನ ಸೆಳೆದಿವೆ. ಆ ಸಾಲಿನಲ್ಲಿ ತುಮಕೂರು ಜಿಲ್ಲೆಯ‌ ಪಾವಗಡದ ಲಂಬಾಣಿ ಸಮುದಾಯದವರು ಆಚರಿಸುತ್ತಿರುವ ಈ ಹಬ್ಬವೂ ಒಂದು.

ತುಮಕೂರು‌ ವಿವಿ ಪಠ್ಯದಲ್ಲಿ ಅಂಬೇಡ್ಕರ್ ವಿಚಾರಕ್ಕೆ ಕತ್ತರಿ; ಪರಮೇಶ್ವರ್ ಅಸಮಧಾನ

‌ಲಂಬಾಣಿ‌ ಸಮುದಾಯದ ಕನ್ಯೆಯರು ದವಸ ಧಾನ್ಯ, ತೆಂಗಿನ ಕಾಯಿಯನ್ನು ತಲೆ ಮೇಲೆ‌ ಹೊತ್ತು ಹಬ್ಬಕ್ಕೆ ತಯಾರಾಗುತ್ತಾರೆ. ಈ ವೇಳೆ ಶುದ್ಧ ನೀರಿನಿಂದ‌ ಕಾಲ್ತೊಳೆಯುವುದು ಹಬ್ಬದ ವಿಶೇಷತೆಯಾಗಿದೆ. ಈ ಆಚರಣೆ ಜಿಲ್ಲೆಯ ಪಾವಗಡ ತಾಲೂಕಿನ ಭೂಪೂರು ಸೇರಿದಂತೆ ಇತರೆ ಲಂಬಾಣಿ ತಾಂಡಗಳಲ್ಲಿ ಕಂಡುಬರುತ್ತವೆ.

ಪಾವಗಡ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರತಿ ಮನೆಯಿಂದ ಇಬ್ಬೊಬ್ಬ ಕನ್ಯೆಯರು ತಮ್ಮ ಮನೆಯಿಂದ ದವಸ ಧಾನ್ಯ ಹೊತ್ತು ಕುಲದೇವತೆಗಳಾದ ತೋಳಚ ಶಕ್ತಿ, ಭೀಮಾಸತಿ, ಭೀಮಾ ಭೂಕ್ಯಾ ದೇವತೆಗಳನ್ನು ಆರಾಧಿಸುವ ಮನೆಗಳಿಗೆ ತೆರಳಿ ನೈವೇದ್ಯ ಅರ್ಪಿಸುತ್ತಾರೆ. ಈ ವೇಳೆ ಮನೆಗೆ ಬರುವ ಕನ್ಯೆಯರಿಗೆ ಶುದ್ದ ನೀರಿನಿಂದ ಕಾಳು ತೊಳೆದು ಕಾಲಿಗೆ ಬಿದ್ದು ಬರಮಾಡಿಕೊಳ್ಳುತ್ತಾರೆ.

ದೇವರಾಯನದುರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಇ – ಕಾಣಿಕೆ ಜಾರಿ!

ನಂತರ ಮನೆಯ ಮುಂದೆ ಬೆಂಕಿ ಹಾಕಿ ಭೂಮಿಗೆ ನಮನ ಸಲ್ಲಿಸಿ ವೆಂಕಟರಮಣಸ್ವಾಮಿ ಹಾಗೂ ಆಂಜನೇಯ ಸ್ವಾಮಿಗೆ ಹೋಮದ ಮೂಲಕ ಪೂಜೆ ಮಾಡಿದ್ದಾರೆ. ಈ ಬಳಿಕ ಪೂಜೆ ಸಲ್ಲಿಸಿ ಎಲ್ಲರೂ ಸೇರಿ ಅಲ್ಲಿಯೇ ಊಟ ಸೇವಿಸುತ್ತಾರೆ.

About The Author

You May Also Like

More From Author

+ There are no comments

Add yours