ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ : 16 ಮತಗಟ್ಟೆ ಸ್ಥಾಪನೆ
Tumkurnews
ತುಮಕೂರು: ಜಿಲ್ಲೆಯಲ್ಲಿ ಜೂನ್ 3ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸುವ ದೃಷ್ಟಿಯಿಂದ 16 ಮತಗಟ್ಟೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಪಾವಗಡ ತಾಲ್ಲೂಕು ಕಚೇರಿ ಸಭಾಂಗಣ ಹಾಗೂ ಗ್ರೇಡ್-2 ತಹಶೀಲ್ದಾರರ ಕೊಠಡಿ; ಮಧುಗಿರಿ ಕೆ.ಆರ್. ಬಡಾವಣೆಯ ಸರ್ಕಾರಿ ಪ್ರೌಢಶಾಲೆ; ಶಿರಾ ತಾಲ್ಲೂಕು ಕಚೇರಿ ಸಭಾಂಗಣ ಹಾಗೂ ನ್ಯಾಯಾಲಯ ಸಭಾಂಗಣ; ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿ ನ್ಯಾಯಾಲಯ ಸಭಾಂಗಣ; ತಿಪಟೂರು ತಾಲ್ಲೂಕು ಕಚೇರಿ; ತುರುವೇಕೆರೆ ತಾಲ್ಲೂಕು ಕಚೇರಿ; ಕುಣಿಗಲ್ ತಾಲ್ಲೂಕು ಕಚೇರಿ ನ್ಯಾಯಾಲಯ ಸಭಾಂಗಣ; ಗುಬ್ಬಿ ತಾಲ್ಲೂಕು ಕಚೇರಿ; ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೊಸ ಕಟ್ಟಡದ ಕೊಠಡಿ ಸಂಖ್ಯೆ 5, 6, 7, 9; ತುಮಕೂರು ಗ್ರಾಮಾಂತರದಲ್ಲಿ ತುಮಕೂರು ತಾಲ್ಲೂಕು ಕಚೇರಿ ನ್ಯಾಯಾಲಯ ಸಭಾಂಗಣ ಹಾಗೂ ಕೊರಟಗೆರೆ ತಾಲ್ಲೂಕು ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
+ There are no comments
Add yours