ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ: ರೌಡಿ ಮನೋಜ್’ಗೆ ಗುಂಡೇಟು
Tumkurnews
ತುಮಕೂರು: ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿ ಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದ್ದು, ಪೊಲೀಸರ ಫೈರಿಂಗ್’ನಲ್ಲಿ ಗಾಯಗೊಂಡಿರುವ ರೌಡಿ ಶೀಟರ್ ಮನೋಜ್’ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ದಾಖಲಿಸಲಾಗಿದೆ.
ತುಮಕೂರು: ನಿರಂತರ ಮಳೆ; ನಾಲೆ, ಕೆರೆಗಳ ಸುತ್ತ-ಮುತ್ತ ನಿಷೇಧಾಜ್ಞೆಗೆ ಚಿಂತನೆ
ಘಟನೆ ವಿವರ: ಕೊಲೆ ಯತ್ನ ಆರೋಪದ ಮೇಲೆ ಮೂಲತಃ ಆಂಧ್ರಪ್ರದೇಶದ ಪುಟ್ಟಪರ್ತಿ ನಿವಾಸಿ ಮನೋಜ್ ಎಂಬಾತನನ್ನು ತುಮಕೂರು ನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದರು. ಇಂದು ಘಟನೆ ನಡೆದ ಸ್ಥಳದಲ್ಲಿ ಮಹಜರು ಮಾಡಲು ಆರೋಪಿ ಮನೋಜ್’ನನ್ನು ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿಯು ಪೊಲೀಸ್ ಸಿಬ್ಬಂದಿ ಚೇತನ್ ಎಂಬುವರ ಮೇಲೆ ಡ್ರ್ಯಾಗರ್’ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಸಿಪಿಐ ದಿನೇಶ್ ಅವರು ಆರೋಪಿ ಮನೋಜ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ತುಮಕೂರು: ಜಿಲ್ಲೆಯಲ್ಲಿ ಡೆಂಗ್ಯೂ ಹೆಚ್ಚಳ: ಶಾಲಾ ಮಕ್ಕಳ ಬಗ್ಗೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ
ಗುಂಡೇಟು ತಿಂದಿರುವ ಮನೋಜ್ ರೌಡಿ ಗ್ಯಾಂಗ್ ಜೊತೆ ಗುರುತಿಸಿಕೊಂಡಿದ್ದು, ತುಮಕೂರು ನಗರದಲ್ಲಿ ವಾಸವಾಗಿದ್ದನು. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಎಸ್.ಪಿ ಅಶೋಕ್ ಕೆ.ವಿ ತಿಳಿಸಿದ್ದಾರೆ.
ತುಮಕೂರು: ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣ ಜು.27ರಿಂದ ಆರಂಭ
+ There are no comments
Add yours