ಎಚ್.ಡಿ ರೇವಣ್ಣ ಬಂಧನ! ನಿಜವಾಯ್ತು ‘ತುಮಕೂರು ನ್ಯೂಸ್’ ವರದಿ!!
Tumkurnews
ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.
ರೇವಣ್ಣ ಬಂಧನಕ್ಕೆ ಕ್ಷಣಗಣನೆ, ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ; ಪರಮೇಶ್ವರ್ ಹೇಳಿದ್ದೇನು?
ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಎಚ್.ಡಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕಾರವಾದ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಎಚ್.ಡಿ ರೇವಣ್ಣ ಅವರನ್ನು ಬಂಧಿಸಿದ್ದಾರೆ.
ಪದ್ಮನಾಭ ನಗರದಲ್ಲಿನ ಎಚ್. ಡಿ ದೇವೇಗೌಡರ ನಿವಾಸದಲ್ಲಿ ರೇವಣ್ಣ ಅವರನ್ನು ಎಸ್.ಐ.ಟಿ ಪೊಲೀಸರು ಬಂಧಿಸಿದ್ದಾರೆ.
ಮೊದಲೇ ವರದಿಯಾಗಿತ್ತು: ಎಚ್.ಡಿ ರೇವಣ್ಣ ಬಂಧನಕ್ಕೆ ಕ್ಷಣಗಣನೆ ಎಂದು www.tumkurnews.in ನಿನ್ನೆಯೇ ವರದಿ ಮಾಡಿತ್ತು. ನುರಿತ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ತುಮಕೂರು ನ್ಯೂಸ್ ಡಿಜಿಟಲ್ ಮಾಧ್ಯಮ ಎಚ್.ಡಿ ರೇವಣ್ಣ ಅವರ ಬಂಧನದ ಸಾಧ್ಯತೆ ಬಗ್ಗೆ ವರದಿ ಮಾಡಿತ್ತು. ಅಂತೆಯೇ ಇಂದು ಬಂಧನವಾಗಿದೆ.
+ There are no comments
Add yours