ಬಸವ ಜಯಂತಿ : ಮಾಂಸ ಮಾರಾಟ ನಿಷೇಧ
Tumkurnews
ತುಮಕೂರು: ಬಸವ ಜಯಂತಿ ಹಬ್ಬದ ನಿಮಿತ್ತ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮೇ 9ರ ಸಂಜೆ 5 ಗಂಟೆಯಿಂದ ಮೇ 10ರ ಮಧ್ಯರಾತ್ರಿ 12 ಗಂಟೆಯವರೆಗೆ ಮಾಂಸ ಮಾರಾಟ ಹಾಗೂ ಸಂಗ್ರಹಣೆಯನ್ನು ನಿಷೇಧಿಸಲಾಗಿದೆ.
ನಿಷೇಧಿತ ಅವಧಿಯಲ್ಲಿ ಕಸಾಯಿ ಖಾನೆ ತೆರೆಯಬಾರದು ಹಾಗೂ ಮಾಂಸ ಮಾರಾಟ ಮಾಡಕೂಡದು. ತಪ್ಪಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
+ There are no comments
Add yours