ದೇವರಾಯನದುರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಇ – ಕಾಣಿಕೆ ಜಾರಿ!

1 min read

Tumkur News
ತುಮಕೂರು: ತುಮಕೂರಿನ ದೇವರಾಯನದುರ್ಗದ ದೇವಸ್ಥಾನದಲ್ಲಿ ಡಿಜಿಟಲೀಕರಣ ವ್ಯವಸ್ಥೆ ಜಾರಿಯಾಗಿದ್ದು, ದೇವರಾಯನದುರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಇ – ಕಾಣಿಕೆ ಹುಂಡಿ ಮೊದಲ ಬಾರಿಗೆ ಚಾಲ್ತಿಯಾಗಿದೆ.

ಅಯೋಧ್ಯೆಯ ರಾಮ ಮಂದಿರಕ್ಕೆ ತುಮಕೂರಿನ ಮೂರು ಪುಣ್ಯ ಕ್ಷೇತ್ರಗಳ ಮಣ್ಣು!

(ಕಾಣಿಕೆ‌ ಹುಂಡಿಗೆ ಸ್ಕ್ಯಾನರ್ ಅಳವಡಿಸಲಾಗಿದೆ)

ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಟಿ ಸುನೀಲ್ ಕುಮಾರ್ ಮಾಹಿತಿ‌ ನೀಡಿ, ಜನರೇಷನ್ ತಕ್ಕಂತೆ ದೇವಸ್ಥಾನದ ಆಡಳಿತದಲ್ಲೂ ಬದಲಾವಣೆ‌ ಮಾಡಿದ್ದೇವೆ. ಇದರಿಂದ ಮೋದಿಯ ಕ್ಯಾಶ್‌ಲೆಸ್‌ನ ಕನಸ್ಸು ನನಸ್ಸು ಮಾಡುವಲ್ಲಿ ಆಡಳಿತ ಮಂಡಳಿ ಮುಂದಾಗಿದೆ‌ ಎಂದು‌ ಹೇಳಿದರು.

ಅಮಾನಿಕೆರೆಯಿಂದ ತುಮಕೂರಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ; ಜ್ಯೋತಿಗಣೇಶ್

ಕಾಣಿಕೆಯ ಹುಂಡಿಯ ಜೊತೆಗೆ ಇ – ಸ್ಕ್ಯಾನಿಂಗ್, ಸ್ವೈಪಿಂಗ್ ಸೇರಿ ಇತರೆ ಸೌಲಭ್ಯ ಲಭ್ಯವಿದೆ. ವ್ಯಾಪಾರ ವಹಿವಾಟು ಮಾರುಕಟ್ಟೆಗಳಿಂದ ದೇವಾಲಯಗಳ ಪಡಸಾಲೆವರೆಗೂ ಡಿಜಿಟಲೀಕರಣ ಪ್ರಸರಿಸಿದೆ ಎಂದರು.

ಶಿಕ್ಷಣ ಇಲಾಖೆಯಿಂದ ಅರ್ಜಿ ಆಹ್ವಾನ; ತುಮಕೂರು ಜಿಲ್ಲೆಯಲ್ಲೇ ಕೆಲಸ

ಫೋನ್ ಪೇ, ಯುಪಿಐ ಇತರೆ ಡಿಜಿಟಲ್ ಮೂಲಕ ದೇವರಿಗೆ ಕಾಣಿಕೆ ಹಣ ಪಾವತಿ ಮಾಡಬಹುದು. ಬೆಂಗಳೂರು, ಮೈಸೂರು ಸೇರಿ ಇತರೆ ಕಡೆಗಳಿಂದ ಬರುವವರು ಕಾಣಿಕೆಗೆ‌ ಕ್ಯಾಶ್ ತರಲು‌ ಸಮಸ್ಯೆಯಾಗಿದ್ದು, ಅಂತವರ ಅನುಕೂಲಕ್ಕಾಗಿ ಈ ಡಿಜಿಟಲ್ ವ್ಯವಸ್ಥೆ ಕಲ್ಪಿಸಿದೆ ಎಂದು‌ ಹೇಳಿದರು.

About The Author

You May Also Like

More From Author

+ There are no comments

Add yours