ಗ್ರಂಥಾಲಯದ ಕಟ್ಟಡವನ್ನು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಸಿ: ಶಾಸಕ ಜಿ.ಬಿ.ಜ್ಯೋತಿಗಣೇಶ್

1 min read

 

ಗ್ರಂಥಾಲಯದ ಕಟ್ಟಡವನ್ನು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಸಿ: ಶಾಸಕ ಜಿ.ಬಿ.ಜ್ಯೋತಿಗಣೇಶ್

Www.tumkurnews.in
ತುಮಕೂರು: ನಗರ ಕೇಂದ್ರ ಗ್ರಂಥಾಲಯದ ಕಟ್ಟಡವನ್ನು ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ಒತ್ತಾಯಿಸಿದ್ದಾರೆ.

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಜಿಲ್ಲೆಗೆ ಮರಣ ಶಾಸನ: ಶಾಸಕ ಜಿ.ಬಿ ಜ್ಯೋತಿಗಣೇಶ್
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಸಜ್ಜಿತ ಬಹು ಮಹಡಿಯ ಕಟ್ಟಡವನ್ನಾಗಿ ತುಮಕೂರು ನಗರ ಕೇಂದ್ರ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗಿದೆ. ಈ ಕಟ್ಟಡದ ಯೋಜನೆಯನ್ನು ರೂಪಿಸಿದಾಗ ಮೇಲಿನ ಎರಡು ಅಂತಸ್ತುಗಳನ್ನು ಕೌಶಲ್ಯಭಿವೃದ್ದಿ ಕೇಂದ್ರ ಹಾಗೂ ಇನ್‍ಕ್ಯೂಬೇಷನ್ ಸೆಂಟರ್‍’ಗಾಗಿ ಪ್ರಸ್ತಾಪಿಸಲಾಗಿತ್ತು.
ಐಟಿ-ಬಿಟಿ ರಂಗದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿತ್ತು, ಆದರೆ ಸರ್ಕಾರಿ ಕಚೇರಿಗಳಿಗೆ ಹಂಚಿಕೆ ಮಾಡುತ್ತಾರೆ ಎಂಬ ಸುದ್ದಿಯು ಎಲ್ಲೆಡೆ ಹರಿದಾಡುತ್ತಿದೆ, ಇದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಶಿರಾಗೇಟ್‍’ಗೆ ಪ್ರತಿ 20 ನಿಮಿಷಕ್ಕೊಮ್ಮೆ ನಗರ ಸಾರಿಗೆ: ಡಿಸಿ ಶುಭ‌ಕಲ್ಯಾಣ್
ತುಮಕೂರು ಜಿಲ್ಲೆಯು ‘ಶಿಕ್ಷಣದ ಕಾಶಿ’ಯಾಗಿದ್ದು, ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶೈಕ್ಷಣಿಕ ಉದ್ದೇಶಕ್ಕೆ ಮಾತ್ರವೇ ತುಮಕೂರು ನಗರ ಕೇಂದ್ರ ಗ್ರಂಥಾಲಯ ಕಟ್ಟಡವನ್ನು ಮೀಸಲಿಡಬೇಕು. ಕೂಡಲೇ ಸಂಬಂಧಪಟ್ಟಂತಹ ಇಲಾಖೆಯವರು ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಿ ವಿದ್ಯಾರ್ಥಿಗಳ ಭವಿಷ್ಯಯಕ್ಕೆ ಬುನಾದಿ ಹಾಗಬೇಕು. ಬೇರೆ ಯಾವುದೇ ಕಚೇರಿಗಳಿಗೆ ಈ ಕಟ್ಟಡವನ್ನು ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು, ಜಿಲ್ಲಾಧಿಕಾರಿಗಳನ್ನು ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಮುಖೇನ ಆಗ್ರಹಿಸಿರುವುದಾಗಿ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ತಿಳಿಸಿದ್ದಾರೆ.

ಗುಬ್ಬಿಯಲ್ಲಿ ಭರ್ಜರಿ ಮಳೆ: ಕೆರೆಯಂತಾದ ಬಸ್ ನಿಲ್ದಾಣ: ವಿಡಿಯೋ

 

About The Author

You May Also Like

More From Author

+ There are no comments

Add yours