ತುಮಕೂರು: ಹಿಂದುಗಳು ಬಿಜೆಪಿಗೆ ಬೆಂಬಲಿಸಿ ಮತ್ತಷ್ಟು ಹಿಂದುಳಿದ್ದಿದ್ದಾರೆ: ಡಿ.ಟಿ.ಶ್ರೀನಿವಾಸ್

ಹಿಂದುಗಳು ಬಿಜೆಪಿಗೆ ಬೆಂಬಲಿಸಿ ಮತ್ತಷ್ಟು ಹಿಂದುಳಿದ್ದಿದ್ದಾರೆ: ಡಿ.ಟಿ.ಶ್ರೀನಿವಾಸ್ Tumkurnews.in ತುಮಕೂರು: ಅಹಿಂದ ಅಂತಹ ಸಮಾಜಗಳಿಗೆ ಏನಾದರೂ ರಾಜಕೀಯ ಅಧಿಕಾರ ಸಿಕ್ಕಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ತಿಳಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ ಈ ತಳ ಸಮುದಾಯಗಳ ಸಬಲೀಕರಣಕ್ಕೆ ಒಂದಲ್ಲ ಒಂದು ಯೋಜನೆಯನ್ನು ರೂಪಿಸುತ್ತಲೇ […]

Continue Reading

ಸೆ.21ರಿಂದ ಪಿಡಿಓಗಳ ಪ್ರತಿಭಟನೆ: ಗ್ರಾಪಂಗಳ ಹಲವು ಸೇವೆಗಳು ಬಂದ್

ಸೆ.21ರಿಂದ ಪಿಡಿಓಗಳ ಪ್ರತಿಭಟನೆ: ಗ್ರಾಪಂಗಳ ಹಲವು ಸೇವೆಗಳು ಬಂದ್ Tumkur news.in ತುಮಕೂರು: ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿಗಳ ವಿವಿಧ ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಸೆ.21 ರಿಂದ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಮತ್ತು ಹೋರಾಟವನ್ನು ಕರ್ನಾಟಕ ರಾಜ್ಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದು, ಈ ಹೋರಾಟಕ್ಕೆ ಜಿಲ್ಲಾ ಮಟ್ಟದಲ್ಲಿ ಅಗತ್ಯ ಸಹಕಾರ ನೀಡವಂತೆ ಸಂಘದ ಜಿಲ್ಲಾ ಶಾಖೆ ವತಿಯಿಂದ ಜಿಪಂ ಸಿಇಓ ಬಿ.ವಿ. ಅಶ್ವಿಜ ಅವರಿಗೆ ಮನವಿ […]

Continue Reading

ತುಮಕೂರು: ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ

ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ Tumkurnews ತುಮಕೂರು: ಬಡತನದ ಕಾರಣಕ್ಕಾಗಿ ದಯಾಮರಣ ಬೇಡಿದ್ದ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಜಿಲ್ಲೆಯ ಶಿರಾದಲ್ಲಿ ಗುರುವಾರ ನಡೆದಿದೆ. ಶಿರಾ ನಗರದ ಡಿಪ್ಲೊಮಾ ಕಾಲೇಜು ಹಿಂಭಾಗದ ಆಶ್ರಯ ಬಡಾವಣೆ ನಿವಾಸಿ ರಾಬಿಯಾ(೩೫), ಈಕೆಯ ಮಕ್ಕಳಾದ ತಮನ್ನ(೧೦) ಹಾಗೂ ಸಿಮ್ರಾನ್(೫) ಮೃತ ದುರ್ದೈವಿಗಳು. ಎಲ್ಲರೂ ಈದ್ ಮಿಲಾದ್ ಸಂಭ್ರಮದಲ್ಲಿದ್ದಾಗ ಈ ತಾಯಿ, ತನ್ನಿಬ್ಬರು ಮಕ್ಕಳಿಗೆ ಊಟದಲ್ಲಿ ವಿಷ ಬೆರೆಸಿ ತಿನ್ನಿಸಿ, […]

Continue Reading

ತುಮಕೂರು: ಕಾಂಗ್ರೆಸ್ ಕಚೇರಿಯಲ್ಲಿ ಸದ್ಭಾವನ ದಿನಾಚರಣೆ

ಕಾಂಗ್ರೆಸ್ ಕಚೇರಿಯಲ್ಲಿ ಸದ್ಭಾವನ ದಿನಾಚರಣೆ Tumkur news ತುಮಕೂರು: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ 84ನೇ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ 111ನೇ ಜನ್ಮ ದಿನಾಚರಣೆಯನ್ನು ಸದ್ಭಾವನಾ ದಿನವನ್ನಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರುಗಳು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಸಿಹಿ, ಸದ್ಭಾವನಾ ದಿನದ ಪ್ರತಿಜ್ಞೆ ಸ್ವೀಕರಿಸುವ ಮೂಲಕ […]

Continue Reading

ಹುಳಿಯಾರಿನಲ್ಲಿ ಕನಕ ಸಮುದಾಯ ಭವನಕ್ಕೆ ಭೂಮಿಪೂಜೆ:

ಹುಳಿಯಾರಿನಲ್ಲಿ ಕನಕ ಸಮುದಾಯ ಭವನಕ್ಕೆ ಭೂಮಿಪೂಜೆ: ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರೀ ಈಶ್ವರಾನಂದ ಪುರಿ ಶ್ರೀಗಳ ಕರೆ Tumkur news ​ಚಿಕ್ಕನಾಯಕನಹಳ್ಳಿ: ಹುಳಿಯಾರು ಪಟ್ಟಣದ ಬೀರದೇವರ ಕಟ್ಟೆ (ಮೂಲತಪೋ ಸುಕ್ಷೇತ್ರ) ಆವರಣದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗುತ್ತಿರುವ ಕನಕ ಸಮುದಾಯ ಭವನಕ್ಕೆ ಕಾಗಿನೆಲೆ ಕನಕ ಗುರುಪೀಠದ ಕೆಲ್ಲೋಡು ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮಿಗಳು ಶಾಸಕ ಸಿ.ಬಿ.ಸುರೇಶ್ ಬಾಬು ಅವರೊಂದಿಗೆ ಭೂಮಿಪೂಜೆ ನೆರವೇರಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ […]

Continue Reading

ತುಮಕೂರು: ಅಕ್ಕ ಕೆಫೆ ಕ್ಯಾಂಟೀನ್ ನಡೆಸಲು ಅರ್ಜಿ ಆಹ್ವಾನ

ಅಕ್ಕ ಕೆಫೆ ಕ್ಯಾಂಟೀನ್ ನಡೆಸಲು ಅರ್ಜಿ ಆಹ್ವಾನ Tumkur news ತುಮಕೂರು: ರಾಷ್ಟ್ರೀಯ ಜೀವನೋಪಾಯ ಅಭಿಯಾನ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ತುಮಕೂರು ಮಹಾನಗರಪಾಲಿಕೆ ಆವರಣದಲ್ಲಿ ಅನುಷ್ಠಾನದಲ್ಲಿರುವ ಅಕ್ಕ ಕೆಫೆ ಕ್ಯಾಂಟೀನ್ ನಡೆಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಸ್ವ-ಸಹಾಯ ಸಂಘದ ಸದಸ್ಯರ ಬಿಪಿಎಲ್ ಕಾರ್ಡನ್ನು ಹೊಂದಿರಬೇಕು, ಸ್ವ-ಸಹಾಯ ಸಂಘವು ಅಕ್ಕ ಕೆಫೆಯನ್ನು ನಿರ್ವಹಿಸಲು ಆಸಕ್ತಿ, ಇಚ್ಛೆ, ಬದ್ಧತೆಯನ್ನು ಹೊಂದಿರಬೇಕು ಹಾಗೂ ಕ್ಯಾಂಟೀನ್ ಪ್ರಾರಂಭಿಸಲು ಬಂಡವಾಳವನ್ನು ಹೂಡಲು […]

Continue Reading

ತುಮಕೂರು: ಎಲೆಕ್ಟ್ರಿಕ್ ಕಾರು ಡಿಕ್ಕಿ: 13 ವರ್ಷದ ಬಾಲಕ ಸಾವು

ಎಲೆಕ್ಟ್ರಿಕ್ ಕಾರು ಡಿಕ್ಕಿ: 13 ವರ್ಷದ ಬಾಲಕ ಸಾವು Tumkur news ಗುಬ್ಬಿ: ರಸ್ತೆ ಬದಿ ಆಟವಾಡುತ್ತಿದ್ದ 13 ವರ್ಷದ ಬಾಲಕನ ಮೇಲೆ ಎಲೆಕ್ಟ್ರಿಕ್ ಕಾರು ಹರಿದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಗುಬ್ಬಿ ತಾಲ್ಲೂಕು ನಿಟ್ಟೂರಿನಲ್ಲಿ ಘಟನೆ ನಡೆದಿದ್ದು, ರಾಘವೇಂದ್ರ ಟೆಕ್ಸ್ ಟೈಲ್ಸ್ ಜವಳಿ ಅಂಗಡಿ ಮಾಲೀಕರ ಪುತ್ರ ಶೋಭಿತ್ ರಾಘವ್ ಮೃತ ದುರ್ದೈವಿ. ಶಾಲೆಗೆ ರಜೆ ಇದ್ದ ಕಾರಣದಿಂದಾಗಿ ಪೋಷಕರ ಜೊತೆಗೆ ಜವಳಿ ಅಂಗಡಿಗೆ ಬಂದಿದ್ದ ಬಾಲಕ, ಅಂಗಡಿ ಮುಂದೆ ಸೈಕಲ್’ನಲ್ಲಿ […]

Continue Reading

ತುಮಕೂರು: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಸವ ಜಯಂತಿ ಆಚರಣೆ

ಆದರ್ಶ ಸಮಾಜ ನಿರ್ಮಾಣದ ದಾರ್ಶನಿಕ ಬಸವಣ್ಣ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕ್ರಾಂತಿಯೋಗಿಗೆ ಗೌರವ ನಮನ Tumkur news ತುಮಕೂರು: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಬಸವ ಜಯಂತಿ ಅಂಗವಾಗಿ ಮುಖಂಡರು ಜಗಜ್ಯೋತಿ ಬಸವಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಸವಣ್ಣ ನಾಡಿಗೆ ಕೊಟ್ಟ ಕೊಡುಗೆ ಸ್ಮರಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಶ್ರೇಷ್ಠ ವಚನಕಾರ, ವಿಶ್ವಗುರು ಬಸವಣ್ಣನವರು ಸಾರಿದ ತತ್ವಗಳು ಜಾತ್ಯತೀತತೆ, ಕಾಯಕ, ದಾಸೋಹ ಮತ್ತು ಸಮಾನತೆಯ ಆಧಾರದಲ್ಲಿವೆ. ಕಾಯಕವೇ ಕೈಲಾಸ ಎಂದು […]

Continue Reading

ತುಮಕೂರು: ಬಾಸ್ಕೆಟ್ ಬಾಲ್ ಬೇಸಿಗೆ ಶಿಬಿರಕ್ಕೆ ಚಾಲನೆ

ಬಾಸ್ಕೆಟ್‌ಬಾಲ್ ಬೇಸಿಗೆ ಶಿಬಿರ ಆರಂಭ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಚಾಲನೆ: ಮೊಬೈಲ್ ಬಿಟ್ಟು ಅಂಕಣಕ್ಕಿಳಿದ ಮಕ್ಕಳು ತುಮಕೂರು: ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ ತಿಳಿಸಿದರು. ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣದ ಆವರಣದಲ್ಲಿರುವ ಡಾ.ಜಿ.ಪರಮೇಶ್ವರ್ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಬಾಸ್ಕೆಟ್‌ಬಾಲ್ ಅಸೋಸಿಯೇಶನ್‌ ಆಯೋಜಿಸಿದ್ದ ಬಾಸ್ಕೆಟ್‌ಬಾಲ್ ಬೇಸಿಗೆ ಶಿಬಿರ ಉದ್ಟಾಟಿಸಿ ಮಾತನಾಡಿದ ಅವರು, ಜಿಲ್ಲಾಡಳಿತದ ಒತ್ತಾಸೆಯ ಫಲವಾಗಿ ಹೆಚ್ಚು […]

Continue Reading

ಡಾ.ಶಿವಕುಮಾರ ಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಶ್ರೀಗಳ ಕಡೆಗಣನೆ!; ಭಕ್ತರ ಆಕ್ರೋಶ

ಡಾ.ಶಿವಕುಮಾರ ಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಶ್ರೀಗಳ ಕಡೆಗಣನೆ!; ಭಕ್ತರ ಆಕ್ರೋಶ ಗುರುವಂದನೆ ಕಾರ್ಯಕ್ರಮದಲ್ಲಿ ಮಠಾಧ್ಯಕ್ಷರನ್ನೇ ಕಡೆಗಣಿಸಲಾಗಿದೆ ಎಂದು ಭಕ್ತರ ಅಸಮಾಧಾನ Tumkur News ತುಮಕೂರು: ಶ್ರೀ ಸಿದ್ದಗಂಗಾ ಮಠದಲ್ಲಿ ಬುಧವಾರ ನಡೆದ ಲಿಂ.ಡಾ. ಶ್ರೀ ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವದಲ್ಲಿ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯನ್ನು ಶಿಷ್ಟಾಚಾರದ ಹೆಸರಿನಲ್ಲಿ ಕಡೆಗಣಿಸಲಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುರುವಂದನಾ ಮಹೋತ್ಸವ ಕಾರ್ಯಕ್ರಮದಲ್ಲಿ, ಪೀಠಾಧ್ಯಕ್ಷರಿಗೆ ವೇದಿಕೆಯ ತುದಿಯಲ್ಲಿ ಆಸನದ ವ್ಯವಸ್ಥೆಯನ್ನು ಕಲ್ಪಿಸಿರುವುದು ಇದೀಗ ಭಕ್ತರ […]

Continue Reading