web tracker

ತುಮಕೂರು: ಎಲೆಕ್ಟ್ರಿಕ್ ಕಾರು ಡಿಕ್ಕಿ: 13 ವರ್ಷದ ಬಾಲಕ ಸಾವು

✍️ ಲೇಖಕ: Tumkur News 📅 April 20, 2026 | ⏰ 1:50 pm

Spread the love

ಎಲೆಕ್ಟ್ರಿಕ್ ಕಾರು ಡಿಕ್ಕಿ: 13 ವರ್ಷದ ಬಾಲಕ ಸಾವು

Tumkur news
ಗುಬ್ಬಿ: ರಸ್ತೆ ಬದಿ ಆಟವಾಡುತ್ತಿದ್ದ 13 ವರ್ಷದ ಬಾಲಕನ ಮೇಲೆ ಎಲೆಕ್ಟ್ರಿಕ್ ಕಾರು ಹರಿದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಗುಬ್ಬಿ ತಾಲ್ಲೂಕು ನಿಟ್ಟೂರಿನಲ್ಲಿ ಘಟನೆ ನಡೆದಿದ್ದು, ರಾಘವೇಂದ್ರ ಟೆಕ್ಸ್ ಟೈಲ್ಸ್ ಜವಳಿ ಅಂಗಡಿ ಮಾಲೀಕರ ಪುತ್ರ ಶೋಭಿತ್ ರಾಘವ್ ಮೃತ ದುರ್ದೈವಿ.
ಶಾಲೆಗೆ ರಜೆ ಇದ್ದ ಕಾರಣದಿಂದಾಗಿ ಪೋಷಕರ ಜೊತೆಗೆ ಜವಳಿ ಅಂಗಡಿಗೆ ಬಂದಿದ್ದ ಬಾಲಕ, ಅಂಗಡಿ ಮುಂದೆ ಸೈಕಲ್’ನಲ್ಲಿ ಆಟವಾಡುತ್ತಿದ್ದನು. ಈ ವೇಳೆ ಯಮ ಸ್ವರೂಪಿಯಾಗಿ ಬಂದ ಎಲೆಕ್ಟ್ರಿಕ್ ಕಾರು ಬಾಲಕನಿಗೆ ಡಿಕ್ಕಿಯಾಗಿದೆ. ಸ್ಥಳೀಯರ ಸಹಾಯದಿಂದ ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗಮಧ್ಯದಲ್ಲಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಗುಬ್ಬಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

© 2020-2026 Tumkur News. All Rights Reserved. | Designed & Developed by Webbrahma