ಅಮಾನಿಕೆರೆಯಿಂದ ತುಮಕೂರಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ; ಜ್ಯೋತಿಗಣೇಶ್

1 min read

 

 

 

 

 

ತುಮಕೂರು ನ್ಯೂಸ್.ಇನ್
Tumkurnews.in

ತುಮಕೂರು ಅಮಾನಿಕೆರೆಗೆ ಹೇಮಾವತಿ ನೀರು ತುಂಬಿಸಿ ನಗರಕ್ಕೆ ಕುಡಿಯುವ ಉದ್ದೇಶಕ್ಕೆ ಬಳಸಲಾಗುವುದು ಎಂದು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದರು.
ನಗರದಲ್ಲಿ ಗುರುವಾರ ವಾರ್ಡ್ ನಂ.3ರಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರದ ಕುಡಿಯುವ ನೀರಿನ ಸಮಸ್ಯೆಗೆ ಅಮಾನಿಕೆರೆಯ ನೀರಿನ ಶಾಶ್ವತ ಮೂಲದಿಂದ ಪರಿಹಾರ ದೊರಕಿಸಿದೆ. ಮುಂದಿನ ದಿನಗಳಲ್ಲಿ ಕೆರೆಗೆ ಪೂರ್ತಿಯಾಗಿ ಹೇಮಾವತಿ ನೀರು ಹರಿದು ಕೆರೆ ತುಂಬಲಿದೆ. ಈ ನೀರನ್ನು ಕುಡಿಯಲು ಬಳಸಬಹುದಾಗಿದೆ ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂದರು.
ತುಮಕೂರು ಅಮಾನಿಕೆರೆಗೆ ಹೆಚ್ಚುವರಿಯಾಗಿ ನೀರು ಸಂಗ್ರಹಣೆ ಮಾಡಲಾಗುತ್ತಿದೆ. ಈ ಹಿಂದೆ ಹೆಬ್ಬಾಕ ಕೆರೆಗೆ ನೀರು ಸಂಗ್ರಹಣೆ ಮಾಡಿ ವಾಪಸ್ ನೀರು ಲಿಫ್ಟ್ ಮಾಡಲು ತೊಂದರೆಯುಂಟಾಗುತ್ತಿತ್ತು. ಹಾಗಾಗಿ ತುಮಕೂರು ನಗರದಲ್ಲಿ 43 ಓವರ್ ಹೆಡ್ ಟ್ಯಾಂಕ್‍ಗಳು ನಿರ್ಮಿಸಿ ಅಲ್ಲಿಂದ ನಗರದ ವಾರ್ಡ್‌ ಗಳಿಗೆ ಸದ್ಭಳಕೆಯಾಗುವ ರೀತಿಯಲ್ಲಿ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ಸಕ್ಕರೆ ಕುಮಾರಸ್ವಾಮಿ, ನಾಗರತ್ನ ಚಾಮಣ್ಣ, ಪುಟ್ಟರಾಜು, ಮೆಳೆಹಳ್ಳಿ ಆನಂದ್, ಭೀಮರಾಜು, ಶೇಷಾಚಲ, ಎಲ್.ಐ.ಸಿ ಲಿಂಗಣ್ಣ, ತೂರೂರು ರಮೇಶ್, ನೀಲಕಂಠ, ಶೇಷಾದ್ರಿ (ಪೋಲೀಸ್), ಆರಾಧ್ಯ, ಭಾನುಪ್ರಕಾಶ್, ಬಂಡೇ ರಾಜು, ಹಾಗೂ ಇತರೆ ಮುಖಂಡರು ಹಾಜರಿದ್ದರು.

You May Also Like

More From Author

+ There are no comments

Add yours