ಎರಡು ಅಪರಿಚಿತ ಶವಗಳು ಪತ್ತೆ: ಪ್ರತ್ಯೇಕ ದೂರು ದಾಖಲು
Tumkurnews
ತುಮಕೂರು: ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿ ತುರುವೇಕೆರೆ ಟೌನ್ ಬಾಣಸಂದ್ರ ರಸ್ತೆಯಲ್ಲಿರುವ ರಂಗನಾಥ ವೈನ್ಸ್ ಪಕ್ಕದ ಸೊಸೈಟಿ ಮುಂಭಾಗದಲ್ಲಿ ಏಪ್ರಿಲ್ 17ರಂದು ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ.
ತುಮಕೂರು: ಭೂ ಪರಿಹಾರ ಪ್ರಕರಣ: ರೈತರಿಗೆ ಶುಭ ಸುದ್ದಿ ನೀಡಿದ ಶುಭ ಕಲ್ಯಾಣ್
ಅಂತೆಯೇ ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿ ಕರಡಗೆರೆ ಗ್ರಾಮದ ಸರ್ವೇ ನಂಬರ್ 66/6ರ ಜಮೀನಿನಲ್ಲಿ ಏಪ್ರಿಲ್ 18ರಂದು ಕೊಳೆತ ಸ್ಥಿತಿಯಲ್ಲಿ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ತಿಳಿದು ಬಂದಿರುವುದಿಲ್ಲ.
ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಮನವಿ ಮಾಡಿದ್ದಾರೆ.
ಅಮಾನಿಕೆರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ: ಶಿರಾ ಗೇಟ್’ನಲ್ಲಿ ಮಾರ್ಗ ಬದಲಾವಣೆ: ಡಿಸಿ ಆದೇಶ
+ There are no comments
Add yours