ತುಮಕೂರು‌ ವಿವಿ ಪಠ್ಯದಲ್ಲಿ ಅಂಬೇಡ್ಕರ್ ವಿಚಾರಕ್ಕೆ ಕತ್ತರಿ; ಪರಮೇಶ್ವರ್ ಅಸಮಧಾನ

1 min read

Tumkur news
ಕೊರಟಗೆರೆ: ನಾವು ಯಾರೂ ಶಾಶ್ವತವಾಗಿ ಭೂಮಿ‌ ಮೇಲೆ‌ ಇರಲ್ಲ. ಕುವೆಂಪು, ಬಸವಣ್ಣ, ಗಾಂಧೀಜಿ ಅಂಬೇಡ್ಕರ್ ವಿಚಾರವನ್ನು ಮಕ್ಕಳಿಗೆ ತಿಳಿಸಬೇಕಾದದ್ದು ನಮ್ಮ‌ ಜವಾಬ್ದಾರಿ ಯಾರ ವ್ಯಕ್ತಿತ್ವ ಹೇಗೆ ಅಂತಾ ಸ್ಪಷ್ಟಪಡಿಸುವುದು ಅಗತ್ಯ ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

NSUI ಕಾರ್ಯಕರ್ತರ ಬಂಧನಕ್ಕೆ ಪರಮೇಶ್ವರ್ ತೀವ್ರ ಅಸಮಧಾನ

ಕೊರಟಗೆರೆಯಲ್ಲಿ ನೂತನ ಕಾಂಗ್ರೆಸ್ ಭವನ ಶಿಲಾನ್ಯಾಸ ಮಾಡಿ ಮಾತನಾಡಿದ ಅವರು, ತುಮಕೂರು ವಿಶ್ವವಿದ್ಯಾನಿಲಯ ಪಠ್ಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಠ್ಯವಸ್ತುವನ್ನು ಕೈಬಿಟ್ಟ ವಿಚಾರದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮೊದಲಿನಿಂದಲೂ ನಮಗೆ ಹೇಳಿಕೊಡುತ್ತಿದ್ದರಿಂದ ಬಸವಣ್ಣ ಯಾರು ಎಂದು ತಿಳಿದಿದೆ. ಯಾರೂ ಹೇಳದಿದ್ದರೆ ಬಸವಣ್ಣರಂಥ ಮಹಾಪುರುಷರ ಬಗ್ಗೆ ತಿಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಪಠ್ಯ ಪುಸ್ತಕ ವಿಚಾರದಲ್ಲಿ ಅಸಹಿಷ್ಣುತೆ ಮೇರೆ ಮೀರುತ್ತಿದೆ; ಆರಗ ಜ್ಞಾನೇಂದ್ರ

ಮಹನೀಯರ ವಿಚಾರಗಳನ್ನು ಕೈಬಿಟ್ಟರೆ ನಾವು ಪ್ರತಿಭಟನೆ ಮಾಡಬಾರದೆ? ಕೇಸರೀಕರಣ ಮಾಡೋಕೆ‌ ಹೋಗೋದು ಎಷ್ಟು ಸರಿ. ಪ್ರಪಂಚದಲ್ಲಿ ಈ ಥರ ಎಲ್ಲಾ ನಡೆದಿರಬಹುದು, ಆದರೇ ರಾಜ್ಯದಲ್ಲಿ ನಡೆದಿಲ್ಲ‌ ಎಂದು ಹೇಳಿದರು.

ಶಾಲಾ ಪಠ್ಯದಿಂದ ಭಗತ್ ಸಿಂಗ್ ಗದ್ಯ ಕೈ ಬಿಡಲಾಗಿದೆಯೇ?; ಇಲ್ಲಿದೆ ಅಧಿಕೃತ ಮಾಹಿತಿ

ನಾವು ಹಿಂದಿನಿಂದ ಹಿರಿಯರನ್ನು ಗೌರವಿಸಿಕೊಂಡು‌ ಬಂದಿದ್ದೀವೆ, ಇದು ನಮ್ಮ ಸಂಸ್ಕೃತಿ. ಇಡೀ ರಾಜ್ಯದಲ್ಲಿ ಶಿಕ್ಷಣ ಇಲಾಖೆ‌ ಹಾಗೂ ಮಕ್ಕಳಲ್ಲಿ ಗೊಂದಲ ಸೃಷ್ಟಿಸಿದೆ‌ ಎಂದರು.

About The Author

You May Also Like

More From Author

+ There are no comments

Add yours