NSUI ಕಾರ್ಯಕರ್ತರ ಬಂಧನಕ್ಕೆ ಪರಮೇಶ್ವರ್ ತೀವ್ರ ಅಸಮಧಾನ

1 min read

Tumkurnews

ಕೊರಟಗೆರೆ; ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಕ್ಕಾಗಿ ಎನ್.ಎಸ್.ಯು.ಐ ಕಾರ್ಯಕರ್ತನ್ನು ಪೊಲೀಸರು ಬಂಧಿಸಿರುವುದಕ್ಕೆ ಮಾಜಿ ಡಿಸಿಎಂ, ಶಾಸಕ ಡಾ.ಜಿ ಪರಮೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ನಾಗೇಶ್ ಮನೆಗೆ ಬೆಂಕಿ ಪ್ರಕರಣ; ಬಿಜೆಪಿಯಿಂದ ಜಿಲ್ಲಾದ್ಯಂತ ಪ್ರತಿಭಟನೆ
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಪಠ್ಯಪುಸಕ್ತದಲ್ಲಿ ಅನೇಕ ಗೊಂದಲಗಳಾಗಿವೆ ಎಂದು ವಿದ್ಯಾರ್ಥಿಗಳು‌ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇದನ್ನು ತಪ್ಪು ಎಂದು ಹೇಳಲಾಗುವುದಿಲ್ಲ.
ಪ್ರತಿಭಟನೆ ವೇಳೆ ಎನ್.ಎಸ್.ಯು.ಐ ಕಾರ್ಯಕರ್ತರನ್ನು ಅವಾಚ್ಯವಾಗಿ ನಿಂದಿಸಿ ಹೊಡೆದಿದ್ದಾರೆ. ಪ್ರತಿಭಟನೆಕಾರರು ಮನೆಗೆ ನುಗ್ಗಲು ಬಂದಿದ್ದರು, ಬೆಂಕಿ ಹಚ್ಚಲು ಬಂದಿದ್ದರು ಎದು ಆಪಾದನೆ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ಏಕೆ ಹೀಗೆ ಮಾಡುತ್ತಿದ್ದೀರಿ ಎಂದು ಕೇಳಿದೆ. ಸರ್ಕಾರದಿಂದ ನಿರ್ದೇಶನ ಬಂದಿತೆಂದು ಸೆಕ್ಷನ್ ಹಾಕಿ ಜೈಲಿಗೆ ಹಾಕಿದ್ದಾರೆ.
ಅವರನ್ನು ಬೇಲ್ ಮೇಲೆ ಹೊರತಂದು ಕೇಸು ನಡೆಸುತ್ತೇವೆ ಎಂದರು.

ಸಚಿವ ಬಿ.ಸಿ ನಾಗೇಶ್ ಮನೆ ಎದುರು ನಿಜಕ್ಕೂ ನಡೆದಿದ್ದೇನು?; ಇಲ್ಲಿದೆ ವಿಡಿಯೋ
ನಮ್ಮ ವಿದ್ಯಾರ್ಥಿಗಳು ತಪ್ಪು ಮಾಡಿದ್ದರೆ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಇದು ಪ್ರಜಾಪ್ರಭುತ್ವಕ್ಕೆ ವಿರೋಧವಾದ ಕೆಲಸ. ಅವರನ್ನು ಅರೆಸ್ಟ್ ಮಾಡಿದ್ದಾರೆ.
ಅವರು ತಪ್ಪು ಮಾಡಿದ್ದರೇ ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸುವುದು ಸೂಕ್ತ. ಅವರ ಮೇಲೆ ಅನಾವಶ್ಯಕವಾಗಿ ಬೇರೆ ಬೇರೆ ಸೆಕ್ಷನ್ ಗಳನ್ನು ಹಾಕಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವ ನಾಗೇಶ್ ಮನೆಗೆ ಬೆಂಕಿ ಹಚ್ಚುವ ಯತ್ನ; 15 ಮಂದಿ ಪೊಲೀಸ್ ವಶಕ್ಕೆ
ದೂರು ಸ್ವೀಕರಿಸಿಲ್ಲ; ಎ‌ನ್.ಎಸ್.ಯು.ಐ ಕಾರ್ಯಕರ್ತರು ನೀಡಿದ ಪ್ರತಿದೂರನ್ನು ಪೊಲೀಸರು ಸ್ವೀಕರಿಸಿಲ್ಲ. ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂದು ಇದರಲ್ಲೇ ಗೊತ್ತಾಗುತ್ತದೆ. ಪೊಲೀಸ್ ಕಾಯ್ದೆ ಪ್ರಕಾರ ಯಾರೇ ದೂರು ನೀಡಿದರೂ ಸ್ವೀಕರಿಸಿ ಎಫ್.ಐ.ಆರ್ ದಾಖಲಿಸಬೇಕು.
ಆನಂತರ ತನಿಖೆ ನಡೆಸಿ ಸತ್ಯಾಂಶ ಇಲ್ಲದಿದ್ರೆ ಬಿ ರಿಪೋರ್ಟ್ ಹಾಕಬೇಕು. ಇಲ್ಲದಿದ್ರೆ ಕೋರ್ಟ್ ಗೆ ಹಾಜರುಪಡಿಸಬೇಕು. ಅದನ್ನು ಬಿಟ್ಟು ವಿದ್ಯಾರ್ಥಿಗಳು ನೀಡಿದ ದೂರನ್ನು ಪೊಲೀಸರು ತೆಗೆದುಕೊಂಡಿಲ್ಲ. ಹೀಗಾಗಿ ಇದು ಒನ್ ಸೈಡೆಡ್ ಅಂತಾ ಸ್ಪಷ್ಟವಾಗುತ್ತದೆ. ಇದಕ್ಕೆ ಗೃಹ ಸಚಿವರು, ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ಬೆಂಕಿ ಹಾಕಿದ್ದಾರೆ ಎಂದು ಗೃಹಸಚಿವರೇ ಹೇಳಿದರೆ ನಾವು ಇದಕ್ಕೆ ಏನು ಹೇಳಬೇಕು ಎಂದರು.

ತುಮಕೂರು ಜೈಲಿಗೆ ಡಿ.ಕೆ ಶಿವಕುಮಾರ್ ಭೇಟಿ; ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ಸಚಿವ ಬಿ.ಸಿ ನಾಗೇಶ್ ರಾಜೀನಾಮೆಗೆ ಆಗ್ರಹ

About The Author

You May Also Like

More From Author

+ There are no comments

Add yours