ತುಮಕೂರಿನಲ್ಲಿ ಭರ್ಜರಿ ಮಳೆ: ವಿಡಿಯೋ
Www.tumkurnews.in
ತುಮಕೂರು: ನಗರದಲ್ಲಿ ಭಾನುವಾರ ಕೂಡ ಭರ್ಜರಿ ಮಳೆ ಸುರಿಯಿತು. ಸಂಜೆ 6ಗಂಟೆ ಸುಮಾರಿಗೆ ಆರಂಭವಾದ ಮಳೆಯು ಸತತ ಒಂದು ಗಂಟೆಗೂ ಅಧಿಕ ಕಾಲ ಜೋರಾಗಿ ಸುರಿಯಿತು.
ತುಮಕೂರು: ಧಾರಾಕಾರವಾಗಿ ಸುರಿದ ಮಳೆ: ವಿಡಿಯೋ
ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ನಿತ್ಯ ಮಳೆಯಾಗುತ್ತಿದ್ದು, ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಭೀಕರ ಬರಗಾಲ, ವಿಪರೀತ ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಇದೀಗ ನಿತ್ಯದ ಮಳೆ ಸಂತಸ ತಂದಿದೆ.
ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ಆಹ್ಲಾದಕರವಾದ ವಾತಾವರಣ ಸೃಷ್ಟಿಯಾಗಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ರೈತರು ಚಾಲನೆ ನೀಡಲಾರಂಭಿಸಿದ್ದಾರೆ. ಒಟ್ಟಿನಲ್ಲಿ ಕೃತಿಕ ಮಳೆಯು ಜನರಿಗೆ ತುಸು ನೆಮ್ಮದಿ ನೀಡಿರುವುದಂತೂ ನಿಜ.
+ There are no comments
Add yours