Tumkurnews
ತುಮಕೂರು; ಸಿದ್ಧಗಂಗಾ ಹಾಸ್ಟೆಲ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.
ತುಮಕೂರು ನಗರದ ಸಿದ್ಧಗಂಗಾ ಬಡಾವಣೆಯಲ್ಲಿರುವ ಸಿದ್ಧಗಂಗಾ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದ ಸುಮಾರು 24 ವರ್ಷದ ಸೋಹನ್ ನಾಥ್ ಬಾಲಂಕರ್ ಆತ್ಮಹತ್ಯೆ
ಮಾಡಿಕೊಂಡ ವಿದ್ಯಾರ್ಥಿ.
ತುಮಕೂರಿನ ವಿವಿಧ ನ್ಯಾಯಾಲಯಗಳಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಆರಂಭ
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಿದ್ಧಗಂಗಾ ಕಾಲೇಜಿನಲ್ಲಿ 6ನೇ ಸೆಮಿಸ್ಟರ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ಈತ ಹಾಸ್ಟೆಲ್‌ನ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ಸೋಹನ್ ನಾಥ್ ಬಾಲಂಕರ್ ಮಹಾರಾಷ್ಟ್ರದ ಶಾಸ್ತ್ರಿ ನಗರದ ಮೂಲದವನು ಎಂದು ತಿಳಿದು ಬಂದಿದೆ. ವಿದ್ಯಾರ್ಥಿಯ ಕೊಠಡಿಯಲ್ಲಿ ಔಷಧಿ ಹಾಗೂ ಮಾತ್ರೆ ಗಳ ಲೇಬಲ್‌ಗಳು ಪತ್ತೆಯಾಗಿವೆ. ಹೊಸ ಬಡಾವಣೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




+ There are no comments
Add yours