ಸಲ್ಮಾನ್ ಖಾನ್ ಮತ್ತು ಅವರ ತಂದೆಗೆ ಕೊಲೆ‌ ಬೆದರಿಕೆ ಪತ್ರ

1 min read

 

Tumkur News
ಮುಂಬಯಿ: ನಟ ಸಲ್ಮಾನ್ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್ ಅವರಿಗೆ ಅನಾಮದೇಯ ಜೀವ ಬೆದರಿಕೆ ಪತ್ರ ಬಂದಿದೆ.

ತುಮಕೂರಿನಲ್ಲಿ ಭೀಕರ ಕೊಲೆ; ಅಕ್ಕನನ್ನು ಚುಡಾಯಿಸಿದಾತನ ಪಂಚ್ ಮಾಡಿ ಕೊಂದ ತಮ್ಮ

ಪತ್ರದಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿದ ರೀತಿಯಲ್ಲಿ ನಿಮ್ಮನ್ನೂ ಹತ್ಯೆ ಮಾಡುತ್ತೇವೆ ಎಂದು ಬರೆದಿದ್ದಾರೆ. ಸಲೀಂ ಖಾನ್ ಜಾಗಿಂಗ್ ಮುಗಿಸಿ ಕೂತಿದ್ದ ಸ್ಥಳದಲ್ಲಿ ಈ ಪತ್ರ ದೊರೆತಿದೆ. ಅವರಿಗೆ ಮತ್ತಷ್ಟು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕ್ಕಾಗಿ ಕಿಡ್ನಾಪ್; ತುಮಕೂರು ಎಸ್ಪಿ ಕಚೇರಿ ಎದುರು ಮಹಿಳೆ ಆತ್ಮಹತ್ಯೆಗೆ ಯತ್ನ

ಗೊಂದಲ ಮೂಡಿಸಿದ ಪದಗಳು: ಪತ್ರದಲ್ಲಿ ಜಿ.ಬಿ. ಮತ್ತು ಎಲ್.ಬಿ. ಎಂಬ ಎರಡು ಪದಗಳಿವೆ. ಬಹುಶಃ ಜಿ.ಬಿ.ದರೆ ಗೋಲ್ಡಿ ಬ್ರಾರ್ ಮತ್ತು ಎಲ್.ಬಿ. ಎಂದರೆ ದಿಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇರುವ ಲಾರೆನ್ಸ್ ಬಿಷ್ಣೋವಿ ಇರಬಹುದೆಂದು‌ ತಿಳಿದುಬರುತ್ತಿದೆ. ಈ ಪತ್ರದ ಹಿಂದೆ ಲಾರೆನ್ಸ್ ಬಿಷ್ಣೋವಿ ಅವರ ಕೈವಾಡ ಇದೆಯೋ ಅಥವಾ ಬಿಷ್ಣೋವಿ ಅವರ ಹೆಸರನ್ನು ಬಳಸಿಕೊಂಡು ಬೇರೆಯವರು ಬರೆಯುತ್ತಿದ್ದಾರೆಯೇ ಎಂಬ ಗೊಂದಲ ಪೊಲೀಸರಲ್ಲಿ ಮೂಡಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

You May Also Like

More From Author

+ There are no comments

Add yours