ಪಾವಗಡ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

ತುಮಕೂರು,(ಜೂ.25) tumkurnews.in
ಪಾವಗಡ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ 5 ಹುದ್ದೆ, ಹಾಗೂ ಸಹಾಯಕಿಯರ 19 ಹುದ್ದೆಗಳಿಗೆ ಅರ್ಹ ಮಹಿಳೆಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಪಾವಗಡ ವ್ಯಾಪ್ತಿಯ ಕಳಾರಾಜನಹಳ್ಳಿ, ಗೌಡೇಟಿ-1ನೇ ಕೇಂದ್ರ, ಶ್ರೀನಿವಾಸಪುರ, ಹುಸೇನ್‍ಪುರ-1ನೇ ಕೇಂದ್ರ ಅಂಗನವಾಡಿ ಕೇಂದ್ರಗಳಲ್ಲಿ ತಲಾ ಒಂದು ಕಾರ್ಯಕರ್ತೆ ಹುದ್ದೆ ಖಾಲಿ ಇದ್ದು, ಈ ಹುದ್ದೆಯು ಸಾಮಾನ್ಯ ವರ್ಗಕ್ಕೆ ಮೀಸಲಿದೆ. ದೇವರಬೆಟ್ಟ ಕೇಂದ್ರದ 1 ಕಾರ್ಯಕರ್ತೆ ಹುದ್ದೆಯು ಪರಿಶಿಷ್ಟ ಜಾತಿಗೆ ಮೀಸಲಿದೆ.
ಪಾವಗಡ ತಾಲೂಕಿನಲ್ಲಿ ಒಟ್ಟು 19 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿಯಿದ್ದು, ನಾಗೇನಹಳ್ಳಿ, ಕೆಂಚಮ್ಮನಹಳ್ಳಿ ಜಿ ಹಟ್ಟಿ, ವೆಂಕಟಾಪುರ-1ನೇ ಕೇಂದ್ರ, ಶ್ರೀನಿವಾಸಪುರ, ಕೆ.ಟಿ ಹಳ್ಳಿ-1ನೇ ಕೇಂದ್ರ, ಕೆ.ಟಿ ಹಳ್ಳಿ ಜಿ.ಹಟ್ಟಿ, ಬುಡ್ಡಾರಡ್ಡಿಹಳ್ಳಿ, ಮರಿದಾಸನಹಳ್ಳಿ-1ನೇ ಕೇಂದ್ರ, ಶೈಲಾಪುರ-2ನೇ ಕೇಂದ್ರ, ದ್ಯಾವಯ್ಯನಪಾಳ್ಯ, ಪೆಂಡ್ಲಿಜೀವಿ, ಕುರುಬರಹಳ್ಳಿ, ಕದಿರೇಹಳ್ಳಿ-2ನೇ ಕೇಂದ್ರ, ಮದ್ದಿಬಂಡೆ ಅಂಗನವಾಡಿ ಕೇಂದ್ರಗಳಲ್ಲಿರುವ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಿದೆ. ಅದೇ ರೀತಿ ಆದರ್ಶನಗರ, ವಳ್ಳೂರು-1ನೇ ಕೇಂದ್ರ, ಉಪ್ಪಾರಹಳ್ಳಿ, ಕ್ಯಾತಗಾನಹಳ್ಳಿ-1ನೇ ಕೇಂದ್ರ, ದೇವರಬೆಟ್ಟ ಕೇಂದ್ರದ ಸಹಾಯಕಿ ಹುದ್ದೆಯು ಪರಿಶಿಷ್ಟ ಜಾತಿಗೆ ಮೀಸಲಿದೆ. ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ವೆಬ್ ಸೈಟ್ www.anganwadirecruit.nic.in ಮೂಲಕ ಜುಲೈ 18ರೊಳಗಾಗಿ ಸಲ್ಲಿಸಬಹುದು. ಮಾಹಿತಿಗಾಗಿ ಪಾವಗಡ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

About The Author

You May Also Like

More From Author

+ There are no comments

Add yours