ಶಿರಾ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

ಶಿರಾ,(ಜೂ.25) tumkurnews.in
ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ 3 ಹುದ್ದೆ, ಮಿನಿ ಕಾರ್ಯಕರ್ತೆಯರ 2 ಹುದ್ದೆ ಹಾಗೂ ಸಹಾಯಕಿಯರ 25 ಹುದ್ದೆಗಳಿಗೆ ಅರ್ಹ ಮಹಿಳೆಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಶಿರಾ ವ್ಯಾಪ್ತಿಯ ಗುಮ್ಮನಹಳ್ಳಿ, ಕಾಮಗೊಂಡನಹಳ್ಳಿ-2 ಹಾಗೂ ಎಂ.ಕೆ ಪಾಳ್ಯ ಅಂಗನವಾಡಿ ಕೇಂದ್ರಗಳಲ್ಲಿ ತಲಾ ಒಂದು ಕಾರ್ಯಕರ್ತೆ ಹುದ್ದೆ ಖಾಲಿ ಇದ್ದು, ಈ ಹುದ್ದೆಯು ಸಾಮಾನ್ಯ ವರ್ಗಕ್ಕೆ ಮೀಸಲಿದೆ. ಕೆಂತಾರ್ಲಹಟ್ಟಿ, ಮಾರಪ್ಪನಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ತಲಾ ಒಂದು ಮಿನಿ ಕಾರ್ಯಕರ್ತೆ ಹುದ್ದೆ ಖಾಲಿ ಇದ್ದು, ಸಾಮಾನ್ಯ ವರ್ಗಕ್ಕೆ ಮೀಸಲಿದೆ. ಶಿರಾ ತಾಲೂಕಿನಲ್ಲಿ ಒಟ್ಟು 25 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿಯಿದ್ದು, ಗೌಡಗರೆ, ನಿಜ್ಜಯ್ಯನಪಾಳ್ಯ, ಬಸವನಹಳ್ಳಿ, ಗೋಣಿಹಳ್ಳಿ, ದಾಸರಹಳ್ಳಿ, ಓಜುಗುಂಟೆ, ನಾರಾಯಣಪುರ, ಕಳ್ಳಂಬೆಳ್ಳ ಬಂಗ್ಲೆ, ಜೋಗಿಹಳ್ಳಿ, ಹೊನ್ನೇನಹಳ್ಳಿ, ಹೊನ್ನಗೊಂಡನಹಳ್ಳಿ, ಕುರುಬರಹಳ್ಳಿ, ಚಿಕ್ಕಅಗ್ರಹಾರ, ಮಾದೇನಹಳ್ಳಿ, ಬಂದಕುಂಟೆ, ನಾಯಕರಹಟ್ಟಿ, ಮೆಹಬೂಬ ನಗರ, ಬನ್ನಿನಗರ-1, ಅಂಗನವಾಡಿ ಕೇಂದ್ರಗಳಲ್ಲಿರುವ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಿದೆ. ಮಾನಂಗಿತಾಂಡ, ಪೂಜಾರಮುದ್ದೇನಹಳ್ಳಿ ಗೇಟ್, ಕೆರೆಹಿಂದಲಹಟ್ಟಿ, ಶಿವಾಜಿನಗರ ಕೇಂದ್ರದ ಸಹಾಯಕಿ ಹುದ್ದೆಯು ಪರಿಶಿಷ್ಟ ಜಾತಿಗೆ ಮೀಸಲಿದೆ. ಹಾಲ್ ದೊಡ್ಡೇರಿ, ಸಲುಪರಹಳ್ಳಿ ಕೇಂದ್ರದ ಸಾಹಾಯಕಿ ಹುದ್ದೆಯು ಪರಿಶಿಷ್ಟ ಪಂಗಡಕ್ಕೆ ಮೀಸಲಿದೆ. ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ವೆಬ್ ಸೈಟ್ www.anganwadirecruit.nic.in ಮೂಲಕ ಜುಲೈ 18ರೊಳಗಾಗಿ ಸಲ್ಲಿಸಬಹುದು. ಮಾಹಿತಿಗೆ ಶಿರಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

About The Author

You May Also Like

More From Author

+ There are no comments

Add yours