ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
Tumkurnews
ತುಮಕೂರು: ಹಿರೇಹಳ್ಳಿ ಕೈಗಾರಿಕಾ ಪ್ರದೇಶ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ AICTE ಯಿಂದ ಮಾನ್ಯತೆ ಪಡೆದಿರುವ 4 ವರ್ಷಗಳ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್, ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ಮತ್ತು ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಕೋರ್ಸ್ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಕೋರ್ಸ್ ಅವಧಿ 3+1 ವರ್ಷ(ಕೌಶಲ್ಯ ಹೆಚ್ಚಳ ಮತ್ತು ಕೈಗಾರಿಕಾ ಜ್ಞಾನಕ್ಕಾಗಿ ಒಂದು ವರ್ಷ ಕೈಗಾರಿಕಾ ತರಬೇತಿ ಕಡ್ಡಾಯ)ಆಗಿರುತ್ತದೆ. ಅರ್ಜಿಯನ್ನು ಆನ್‍ಲೈನ್ https://gttc.karnataka.gov.in ಮತ್ತು https://cetonline.karnataka.gov.in/kea ಮೂಲಕ ಮೇ 27ರೊಳಗಾಗಿ ಸಲ್ಲಿಸಬಹುದು. ಅರ್ಜಿ ಶುಲ್ಕ 150 ರೂ.ಗಳನ್ನು ನಿಗದಿಪಡಿಸಲಾಗಿದೆ.
ಕರ್ನಾಟಕ ರಾಜ್ಯದ ಶಾಲೆಯಲ್ಲಿ ಕನಿಷ್ಟ 5 ವರ್ಷ ವ್ಯಾಸಂಗ ಮಾಡಿರಬೇಕು. ಮೆರಿಟ್ ಕಮ್ ರೋಸ್ಟರ್ ಸಿಸ್ಟಮ್ ಮೂಲಕ ಪ್ರವೇಶಾತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.ಸಂ. 9916769649, 9380844450, 8310729855ಯನ್ನು ಸಂಪರ್ಕಿಸಬಹುದು ಎಂದು ತರಬೇತಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
+ There are no comments
Add yours