ಕುಣಿಗಲ್ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

 

ಕುಣಿಗಲ್,(ಜೂ.25) tumkurnews.in

ಕುಣಿಗಲ್ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಮಿನಿ ಅಂಗನವಾಡಿ ಕಾರ್ಯಕರ್ತೆಯರ 3 ಹುದ್ದೆ, ಹಾಗೂ ಸಹಾಯಕಿಯರ 18 ಹುದ್ದೆಗಳಿಗೆ ಅರ್ಹ ಮಹಿಳೆಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕುಣಿಗಲ್ ವ್ಯಾಪ್ತಿಯ ಹೊನ್ನೇಗೌಡನಪಾಳ್ಯ, ವಳಗೆರೆಪುರ ಕಾಲೋನಿ ಹಾಗೂ ಕಟ್ಟೆಪಾಳ್ಯ ಅಂಗನವಾಡಿ ಕೇಂದ್ರಗಳಲ್ಲಿ ತಲಾ ಒಂದು ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇದ್ದು, ಸಾಮಾನ್ಯ ವರ್ಗ(ಇತರೆ)ಕ್ಕೆ ಮೀಸಲಿದೆ. ಕುಣಿಗಲ್ ತಾಲೂಕಿನಲ್ಲಿ ಒಟ್ಟು 18 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿಯಿದೆ. ವಡ್ಡರಕುಪ್ಪೆ, ಶೆಟ್ಟಿಗೆಹಳ್ಳಿ, ಹೇರೂರು, ಕೊತ್ತೀಪುರ, ಕಂಪಲಾಪುರ, ಕುಲುಮೆಪಾಳ್ಯ, ಇಪ್ಪಾಡಿ, ಗಿಡದಾಸನಪುರ, ಕಗ್ಗೆರೆ, ಕಿತ್ನಾಮಂಗಲ, ಚನ್ನಾಪುರ, ಚಿನ್ನಹಳ್ಳಿ, ಹನುಗನಹಳ್ಳಿ, ಹಿತ್ತಲಪುರ, ಕೋಘಟ್ಟ, ಹೊಸೂರು, ತರೇದಕುಪ್ಪೆ ಹಾಗೂ ವಾನಂಬಾಡಿ ಅಂಗನವಾಡಿ ಕೇಂದ್ರಗಳಲ್ಲಿರುವ ಹುದ್ದೆಗಳು ಸಾಮಾನ್ಯ ವರ್ಗ(ಇತರೆ)ಕ್ಕೆ ಮೀಸಲಿದೆ. ಆಸಕ್ತ ಮಹಿಳೆಯರು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ವೆಬ್ ಸೈಟ್ www.anganwadirecruit.nic.in ಮೂಲಕ ಜುಲೈ 18ರೊಳಗಾಗಿ ಸಲ್ಲಿಸಬಹುದು. ಮಾಹಿತಿಗಾಗಿ ಕುಣಿಗಲ್ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

About The Author

You May Also Like

More From Author

+ There are no comments

Add yours