ಚಿಕ್ಕನಾಯಕನಹಳ್ಳಿ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

ಚಿಕ್ಕನಾಯಕನಹಳ್ಳಿ, (ಜೂ.25)
ಚಿಕ್ಕನಾಯಕನಹಳ್ಳಿ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ 6 ಹುದ್ದೆ, ಹಾಗೂ ಸಹಾಯಕಿಯರ 9 ತಾತ್ಕಾಲಿಕ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬಂದ್ರೇಹಳ್ಳಿ, ತಿರುಮಲದೇವರಹಟ್ಟಿ, ಹೊನ್ನಯ್ಯನಪಾಳ್ಯ, ಬಾಲದೇವರಹಟ್ಟಿ, ಹುಳಿಯಾರು ಬಿ, ಹಾಗೂ ಸಿಗೇಬಾಗಿ ಅಂಗನವಾಡಿ ಕೇಂದ್ರಗಳಲ್ಲಿ ತಲಾ ಒಂದು ಕಾರ್ಯಕರ್ತೆ ಹುದ್ದೆ ಖಾಲಿ ಇದ್ದು, ಸಾಮಾನ್ಯ ವರ್ಗಕ್ಕೆ ಮೀಸಲಿದೆ. ತಾಲೂಕಿನಲ್ಲಿ ಒಟ್ಟು 9 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿಯಿದ್ದು, ಅಣೇಕಟ್ಟೆ, ಬರಗೂರು, ಬಿ.ಮುದ್ದೇನಹಳ್ಳಿ, ಎ.ಸಾದರಹಳ್ಳಿ, , ತಿಪ್ಪಣ್ಣನಪಾಳ್ಯ, ಕಂಪನಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿರುವ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಿದೆ. ಅಜ್ಜಿಗುಡ್ಡೆ, ಆಲದಕಟ್ಟೆ ಕೇಂದ್ರದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿದ್ದು, ಮೈಲುಕಬ್ಬೆ ಕೇಂದ್ರದ ಸಹಾಯಕಿ ಹುದ್ದೆಯು ಪರಿಶಿಷ್ಟ ಪಂಗಡಕ್ಕೆ ಮೀಸಲಿದೆ. ಆಸಕ್ತರು ತಮ್ಮ ಅರ್ಜಿಯನ್ನು ವೆಬ್ ಸೈಟ್ www.anganwadirecruit.nic.in ಮೂಲಕ ಜುಲೈ 18ರೊಳಗಾಗಿ ಸಲ್ಲಿಸಬಹುದು. ಮಾಹಿತಿಗಾಗಿ ಚಿಕ್ಕನಾಯಕನಹಳ್ಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

About The Author

You May Also Like

More From Author

+ There are no comments

Add yours